Weight Loss Diet: ಒಂದು ತಿಂಗಳು ಈ ಆಹಾರ ಕ್ರಮ ಅನುಸರಿಸಿದರೆ 2KG ತೂಕ ಕಡಿಮೆಯಾಗುತ್ತೆ!

Weight Loss Diet: ನೀವು ಸ್ಥೂಲಕಾಯದಿಂದ ತೊಂದರೆಗೊಳಗಾಗಿದ್ದರೆ ಮತ್ತು ತೂಕ ಇಳಿಸಿಕೊಳ್ಳಲು ಬಯಸಿದರೆ, ಈ ಸುದ್ದಿಯು ನಿಮಗೆ ಉಪಯುಕ್ತವಾಗಿದೆ. ಆಹಾರದ ಮೂಲಕ ತೂಕ ಇಳಿಸುವುದು ಹೇಗೆ ಗೊತ್ತಾ?

Written by - Yashaswini V | Last Updated : Aug 3, 2021, 10:48 AM IST
  • ತೂಕ ಇಳಿಸಿಕೊಳ್ಳಲು ಏನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು?
  • ತೂಕವನ್ನು ನಿಯಂತ್ರಣದಲ್ಲಿಡಲು, ನಿತ್ಯ 7 ರಿಂದ 8 ಗಂಟೆಗಳ ಪೂರ್ಣ ನಿದ್ರೆ ಅತ್ಯಗತ್ಯ
  • ಯಾರೇ ಆದರೂ ಫಿಟ್ ಆಗಿರಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಕೂಡ ಬಹಳ ಮುಖ್ಯ
Weight Loss Diet: ಒಂದು ತಿಂಗಳು ಈ ಆಹಾರ ಕ್ರಮ ಅನುಸರಿಸಿದರೆ 2KG ತೂಕ ಕಡಿಮೆಯಾಗುತ್ತೆ! title=
Weight Loss Diet

Weight Loss Diet: ಸ್ಥೂಲಕಾಯವು ಅನೇಕ ರೋಗಗಳನ್ನು ಆಹ್ವಾನಿಸುತ್ತದೆ. ಹೆಚ್ಚು ಕ್ಯಾಲೋರಿ ಆಹಾರವನ್ನು ಸೇವಿಸುವುದರಿಂದ, ತೂಕವು ವೇಗವಾಗಿ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ನೀವು ಆಹಾರದ ಮೇಲೆ ಗಮನ ಹರಿಸಬೇಕು. ತೂಕ ಇಳಿಸಿಕೊಳ್ಳಲು ಕೆಲವರು ಜಿಮ್‌ನಲ್ಲಿ ಬೆವರು ಸುರಿಸುವುದನ್ನು ನಾವು ನೋಡುತ್ತೇವೆ, ಆದರೆ ಅವರು ಆಹಾರದ ಮೇಲೆ ಹೆಚ್ಚು ಗಮನ ಹರಿಸುವುದಿಲ್ಲ. ಈ ಕಾರಣದಿಂದ ಕಠಿಣ ಪರಿಶ್ರಮದ ನಂತರವೂ ತೂಕ ಇಳಿಕೆಯಾಗುವುದಿಲ್ಲ.

ಬೊಜ್ಜು ಹೇಗೆ ಬೆಳೆಯುತ್ತದೆ?
ಡಯಟೀಶಿಯನ್ ಡಾ. ರಂಜನಾ ಸಿಂಗ್ ಹೇಳುವಂತೆ ಸ್ಥೂಲಕಾಯವು (Obesity) ಅಂತಹ ಒಂದು ಸ್ಥಿತಿಯಾಗಿದ್ದು, ಒಬ್ಬ ವ್ಯಕ್ತಿಯ ತೂಕ ಎಷ್ಟು ಹೆಚ್ಚಾಗುತ್ತದೆಯೆಂದರೆ ಅದು ಆತನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ಆರಂಭಿಸುತ್ತದೆ. ಯಾರಾದರೂ ಹೆಚ್ಚು ಕ್ಯಾಲೊರಿಗಳನ್ನು ಸೇವಿಸಿದಾಗ, ಈ ಹೆಚ್ಚುವರಿ ಕ್ಯಾಲೊರಿಗಳು ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತವೆ. ಹೆಚ್ಚು ಕ್ಯಾಲೋರಿ ಭರಿತ ಆಹಾರ, ಜಂಕ್ ಫುಡ್, ಪಾನೀಯಗಳ ಸೇವನೆ ಜೊತೆಗೆ ಹಣ್ಣುಗಳು ಮತ್ತು ತರಕಾರಿಗಳ ಸೇವನೆಯನ್ನು ಕಡಿಮೆ ಮಾಡುವುದರಿಂದ ವ್ಯಕ್ತಿಯು ಸ್ಥೂಲಕಾಯಕ್ಕೆ ಬಲಿಯಾಗಬಹುದು.

ತೂಕ ನಷ್ಟ ಸಲಹೆಗಳು ಮತ್ತು ಆಹಾರ  (Weight Loss Tips And Diet): 
ತೂಕ ಇಳಿಸಿಕೊಳ್ಳಲು ಈ ಕೆಲಸವನ್ನು ಮೊದಲು ಮಾಡಿ:
ಬೆಳಿಗ್ಗೆ ಎದ್ದ ನಂತರ, ನೀವು ತಾಜಾ ಆಗುವ ಮೊದಲು ಕನಿಷ್ಠ ಅರ್ಧ ಲೀಟರ್ ನೀರನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಹೊಟ್ಟೆ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಇದಲ್ಲದೇ, ಕೆಲವು ವಿಧದ ಹಾನಿಕಾರಕ ಕಿಣ್ವಗಳಿಂದಾಗಿ ತೂಕ ಹೆಚ್ಚಾಗುವ ಅಪಾಯವೂ ಕಡಿಮೆಯಾಗುತ್ತದೆ.

ಇದನ್ನೂ ಓದಿ- Weight Loss Tips: ಮೊಸರನ್ನು ಈ ರೀತಿ ಬಳಸಿದರೆ ಬೇಗನೆ ತೂಕ ಕಳೆದುಕೊಳ್ಳಬಹುದಂತೆ!

ತೂಕ ಇಳಿಸಿಕೊಳ್ಳಲು ಏನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು?
ತೂಕ ಇಳಿಸಿಕೊಳ್ಳಲು (Weight Loss), ನೀವು ನಿಮ್ಮ ಆಹಾರವನ್ನು ನಿಯಂತ್ರಿಸಬೇಕಾಗುತ್ತದೆ. ನೀವು ಆವಕಾಡೊ, ಬಾಳೆಹಣ್ಣು, ಸಕ್ಕರೆ ಓಟ್ ಮೀಲ್ ಮತ್ತು ಅಧಿಕ ಕಾರ್ಬೋಹೈಡ್ರೇಟ್ ಆಹಾರ ಸೇವಿಸುವುದನ್ನು ತಪ್ಪಿಸಬೇಕು. ಬದಲಾಗಿ, ನಿಮ್ಮ ಸೊಪ್ಪು, ತರಕಾರಿಗಳು, ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚಾಗಿ ಸೇವಿಸಿ. ಬೇಯಿಸಿದ ಆಲೂಗಡ್ಡೆ, ಬೇಯಿಸಿದ ಹಸಿರು ಬೀನ್ಸ್ ನೊಂದಿಗೆ ತರಕಾರಿಗಳು ತೂಕ ಇಳಿಸುವಲ್ಲಿ ಬಹಳ ಸಹಾಯಕಾರಿ ಎಂದು ಸಾಬೀತುಪಡಿಸಬಹುದು.

ತೂಕ ನಷ್ಟಕ್ಕೆ ನಿದ್ರೆ ಅತ್ಯಗತ್ಯ:
ಒಂದು ಸಂಶೋಧನೆಯ ಪ್ರಕಾರ, ಕಡಿಮೆ ನಿದ್ರೆ ಮಾಡುವ ಅಥವಾ ವಯಸ್ಸಿಗೆ ತಕ್ಕಂತೆ ಸಾಕಷ್ಟು ನಿದ್ರೆ ಪಡೆಯದ ಜನರಲ್ಲೂ ಕೂಡ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದಾಗಿ ತೂಕ ಹೆಚ್ಚಾಗುವ ಸಮಸ್ಯೆಯನ್ನು ಕಾಣಬಹುದು. ಆದ್ದರಿಂದ, ತೂಕವನ್ನು ನಿಯಂತ್ರಣದಲ್ಲಿಡಲು, ನಿತ್ಯ 7 ರಿಂದ 8 ಗಂಟೆಗಳ ಪೂರ್ಣ ನಿದ್ರೆ ಅತ್ಯಗತ್ಯವಾಗಿದೆ. ಇದರಿಂದ ತೂಕ ಕಳೆದುಕೊಳ್ಳುವುದು ಸುಲಭವಾಗುತ್ತದೆ. 

ತೂಕ ನಷ್ಟಕ್ಕೆ ವ್ಯಾಯಾಮ ಕೂಡ ಮುಖ್ಯ:
ಬೊಜ್ಜು ಫಿಟ್ನೆಸ್ ಅನ್ನು ಹಾಳು ಮಾಡುತ್ತದೆ. ಯಾರೇ ಆದರೂ ಫಿಟ್ ಆಗಿರಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಕೂಡ ಬಹಳ ಮುಖ್ಯ. ಏಕೆಂದರೆ ಕಾರ್ಡಿಯೋ ವರ್ಕೌಟ್ ಕೊಬ್ಬು ಮತ್ತು ತೂಕವನ್ನು ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ. ಸ್ಥೂಲಕಾಯದಿಂದ ಬಳಲುತ್ತಿರುವ ಜನರು ದಿನಕ್ಕೆ 2 ಬಾರಿ ಓಡುವುದರೊಂದಿಗೆ ನಿಯಮಿತವಾದ ವ್ಯಾಯಾಮವನ್ನು ಮಾಡಿದರೆ, ತೂಕ ನಷ್ಟ ಮಾಡಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ- Ayurveda: ಈ ಆಹಾರಗಳನ್ನು ತಿಂದ ತಕ್ಷಣ ನೀರು ಕುಡಿಯಲೇಬಾರದು

ತೂಕ ನಷ್ಟಕ್ಕೆ ಮನೆ ಮದ್ದುಗಳು:
ತೂಕ ನಷ್ಟಕ್ಕೆ ನೀವು ಮನೆಮದ್ದನ್ನು ಕೂಡ ಬಳಸಬಹುದು. ಈ ಪಾಕವಿಧಾನವನ್ನು ಜೀರಿಗೆ ನೀರಿನಿಂದ ತಯಾರಿಸಲಾಗುತ್ತದೆ. ಜೀರಿಗೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಮತ್ತು ನಂತರ ಈ ನೀರನ್ನು ಸೇವಿಸಿ. ಒಂದು ತಿಂಗಳ ಕಾಲ ನಿರಂತರವಾಗಿ ಜೀರಿಗೆ ನೀರನ್ನು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯವಾಗುತ್ತದೆ. ಈ ಮನೆಮದ್ದಿನ ಸಹಾಯದಿಂದ ಅನೇಕ ಜನರು ತಮ್ಮ ತೂಕವನ್ನು 4 ರಿಂದ 5 ಕೆಜಿಯಷ್ಟು ಕಡಿಮೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನೀವು 1 ತಿಂಗಳು ಈ ಸಲಹೆಗಳನ್ನು ಅನುಸರಿಸಿದರೆ ಖಂಡಿತವಾಗಿಯೂ 2 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕ ಕಳೆದುಕೊಳ್ಳಬಹುದು.

(ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News