Akshay Tritiya 2023: ಅಕ್ಷಯ ತೃತೀಯಾ ದಿನ ಚಿನ್ನ ಖರೀದಿಸಬೇಕೆ? ಇಲ್ಲಿ ತಿಳಿದುಕೊಳ್ಳಿ ಚಿನ್ನ ಖರೀದಿಸುವ ಶುಭ ಮುಹೂರ್ತ ಮತ್ತು ಮಹತ್ವ!
Akshay Tritiya 2023: ಹಿಂದೂ ಪಂಚಾಗದ ಪ್ರಕಾರ ಈ ವರ್ಷ ಏಪ್ರಿಲ್ 22 ರಂದು ಅಕ್ಷಯ ತೃತೀಯಾ ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಅಕ್ಷಯ ತೃತೀಯಾ ದಿನ ಜನರು ಚಿನ್ನ ಖರೀದಿಸುವುದು ತುಂಬಾ ಶ್ರೇಯಸ್ಕರ ಎಂದು ಭಾವಿಸುತ್ತಾರೆ. ಆದರೆ, ಯಾವ ಸಮಯ ಮತ್ತು ಮುಹೂರ್ತದಲ್ಲಿ ಚಿನ್ನ ಖರೀದಿಸಿದರ ಅದು ಮತ್ತಷ್ಟು ಶ್ರೇಯಸ್ಕರ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Akshaya Tritiya 2023: ಹಿಂದೂ ಧರ್ಮಶಾಸ್ತ್ರಗಳಲ್ಲಿ ಅಕ್ಷಯ ತೃತಿಯ ತಿಥಿಗೆ ವಿಶೇಷ ಮಹತ್ವ ಕಲ್ಪಿಸಲಾಗಿದೆ. ವೈದಿಕ ಪಂಚಾಂಗದ ಪ್ರಕಾರ ಈ ಹಬ್ಬ ಪ್ರತಿವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಆಚರಿಸಲಾಗುತ್ತದೆ. ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ಪ್ರಕಾರ ಈ ದಿನ ಯಾವುದೇ ಶುಭ ಕಾರ್ಯಕ್ಕೆ ಮುಹೂರ್ತ ನೋಡಬೇಕಾಗಿಲ್ಲ ಎನ್ನಲಾಗುತ್ತದೆ. ವಿವಾಹಕ್ಕೆ ಈ ದಿನ ಅತ್ಯಂತ ಶುಭ ಎಂದು ಭಾವಿಸಲಾಗಿದೆ. ಏಕೆಂದರೆ 'ಮೂರೂವರೆ ಮುಹೂರ್ತ'ಗಳಲ್ಲಿ ಅಕ್ಷಯ ತೃತಿಯ ಮುಹೂರ್ತ ಕೂಡ ಒಂದು ಎಂದು ಹೇಳಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಆರಂಭಿಸಲಾಗುವ ಹೊಸ ಕಾರ್ಯಕ್ಕೆ ಯಾವುದೇ ರೀತಿಯ ಅಡೆತಡೆಗಳು ಎದುರಾಗುವುದಿಲ್ಲ ಮತ್ತು ಆ ಕಾರ್ಯದಲ್ಲಿ ಅಪಾರ ಕಾರ್ಯಸಿದ್ಧಿ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅಕ್ಷಯ ತೃತೀಯಾ ದಿನ ಚಿನ್ನ ಖರೀದಿಗೂ ಕೂಡ ಭಾರಿ ಮಹತ್ವವಿದೆ. ಹಾಗಾದರೆ ಈ ಬಾರಿಯ ಅಕ್ಷಯ ತೃತೀಯಾ ದಿನ ಚಿನ್ನ ಖರೀದಿಸುವ ಶುಭ ಮುಹೂರ್ತ ಮತ್ತು ಸಮಯ ಯಾವುದು ಹಾಗೂ ಅದರ ಮಹತ್ವವೇನು ತಿಳಿದುಕೊಳ್ಳೋನ ಬನ್ನಿ,
ಹಿಂದೂ ಪಂಚಾಂಗದ ಪ್ರಕಾರ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿ ಏಪ್ರಿಲ್ 22, 2023 ರಂದು ಬೆಳಗ್ಗೆ 7 ಗಂಟೆ 48 ನಿಮಿಷದಿಂದ ಆರಂಭಗೊಳ್ಳುತ್ತಿದೆ ಮತ್ತು ಇದು ಮಾರನೇ ದಿನ ಅಂದರೆ ಏಪ್ರಿಲ್ 23, 2023 ರಂದು ಬೆಳಗ್ಗೆ 7 ಗಂಟೆ 46 ನಿಮಿಷದವರೆಗೆ ಇರಲಿದೆ. ಹೀಗಾಗಿ ಉದಯ ಕಾಲಕ್ಕೆ ಅನುಗುಣವಾಗಿ ಈ ಬಾರಿ ಅಕ್ಷಯ ತೃತೀಯಾ ಹಬ್ಬವನ್ನು ಏಪ್ರಿಲ್ 22 ರಂದು ಆಚರಿಸಲಾಗುತ್ತಿದೆ.
ಅಕ್ಷಯ ತೃತೀಯಾ ದಿನ ಚಿನ್ನ ಖರೀದಿಸಲು ಮುಹೂರ್ತ
ಏಪ್ರಿಲ್ 22, 2023 ಶನಿವಾರ: ಬೆಳಗ್ಗೆ 7 ಗಂಟೆ 48 ನಿಮಿಷದಿಂದ 23 ಏಪ್ರಿಲ್ 2023 ರ ಬೆಳಗ್ಗೆ 5 ಗಂಟೆ 47 ನಿಮಿಷದವರೆಗೆ ನೀವು ಚಿನ್ನವನ್ನು ಖರೀದಿಸಬಹುದು.
ಏಪ್ರಿಲ್ 23, 2023 ಭಾನುವಾರ: ಬೆಳಗ್ಗೆ 5 ಗಂಟೆ 47 ನಿಮಿಷದಿಂದ ಹಿಡಿದು 7 ಗಂಟೆ 46 ನಿಮಿಷದವರೆಗೂ ಕೂಡ ನೀವು ಚಿನ್ನ ಖರೀದಿಡಬಹುದು.
ಮಹತ್ವ
ಧರ್ಮ ಶಾಸ್ತ್ರಗಳ ಪ್ರಕಾರ ಶ್ರೀವಿಷ್ಣುವಿನ ಆರನೇ ಅವತಾರವಾದ ಶ್ರೀಪರಶುರಾಮ ಅಕ್ಷಯ ತೃತೀಯಾ ದಿನ ಜನಿಸಿದರು ಎನ್ನಲಾಗುತ್ತದೆ. ಜೊತೆಗೆ ಸತಯುಗ ಹಾಗೂ ತ್ರೇತಾಯುಗಗಳು ಕೂಡ ಅಕ್ಷಯ ತೃತೀಯಾ ದಿನದಿಂದಲೇ ಆರಂಭಗೊಂಡವು ಎನ್ನಲಾಗುತ್ತದೆ. ಜೋತಿಷ್ಯ ಪಂಚಾಗದ ಪ್ರಕಾರ ಈ ದಿನ ಸೂರ್ಯ ದೇವ ಮೇಷ ರಾಶಿಯಲ್ಲಿದ್ದರೆ, ಚಂದ್ರ ವೃಷಭ ರಾಶಿಯಲ್ಲಿರುತ್ತಾನೆ. ವೃಷಭ ರಾಶಿ ಚಂದ್ರನ ಉಚ್ಚ ರಾಶಿಯಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ತಾಯಿ ಗಂಗೆ ಕೂಡ ಇದೆ ದಿನ ಭೂಮಿಗೆ ಇಳಿದಳು ಎನ್ನಲಾಗುತ್ತದೆ. ಇದಲ್ಲದೆ ವೇದವ್ಯಾಸರು ಹಾಗೂ ಶ್ರೀಗಣೇಶ ಮಹಾಭಾರತ ಗ್ರಂಥವನ್ನು ಬರೆಯಲು ಈ ತಿಥಿಯಿಂದಲೇ ಆರಂಭಿಸಿದರು ಎನ್ನಲಾಗುತ್ತದೆ. ಇದೇ ಕಾರಣದಿಂದ ಈ ತಿಥಿಗೆ ವಿಶೇಷ ಮಹತ್ವವಿದೆ. ಈ ದಿನ ಹೊಸ ಕೆಲಸ-ಕಾರ್ಯಗಳನ್ನು ಪ್ರಾರಂಭಿಸುವುದರಿಂದ ಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಈ ಚೈನ ಚಿನ್ನ ಬೆಳ್ಳಿ-ಖರೀದಿಸುವವರ ಜೀವನದಲ್ಲಿ ಧನ ಸಮೃದ್ಧಿ ಬಂದು ನೆಲೆಸುತ್ತದೆ ಎನ್ನಲಾಗುತ್ತದೆ. ಜೊತೆಗೆ ತಾಯಿ ಲಕ್ಷ್ಮಿಯ ಆಶೀರ್ವಾದ ಸದಾ ಅವರ ಮೇಲಿರುತ್ತದೆ ಎನ್ನಲಾಗುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.