ನಾಳೆ ಚಂದ-ಭೂಮಿ ಪುತ್ರ ಮಂಗಳ ಮೈತ್ರಿಯಿಂದ 'ಮಹಾ ಲಕ್ಷ್ಮಿ ರಾಜಯೋಗ' ನಿರ್ಮಾಣ, ಈ 3 ರಾಶಿಗಳ ಜನರಿಗೆ ಭಾರಿ ಆಕಸ್ಮಿಕ ಧನಲಾಭ-ಬಡ್ತಿ ಯೋಗ!

Mahalakshmi Rajyog In Mithun: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮಿಥುನ ರಾಶಿಯಲ್ಲಿ ಮಹಾಲಕ್ಷ್ಮೀ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಅಪಾರ ಹಣ ಹರಿದುಬರಲಿದೆ. ಹಾಗಾದರೆ ಬನ್ನಿ ಈ ಮಹಾಲಕ್ಷ್ಮೀ ರಾಜಯೋಗ ಯಾವಾಗ ನಿರ್ಮಾಣಗೊಳ್ಳಲಿದೆ ಮತ್ತು ಇದು ಯಾವ ರಾಶಿಗಳ ಜಾತಕದವರಿಗೆ ಭಾರಿ ಅದೃಷ್ಟದ ಜೊತೆಗೆ ಧನ ಲಾಭ ತರಲಿದೆ ತಿಳಿದುಕೊಳ್ಳೋಣ, 

Mahalakshmi Raj Yog In Gemini: ಜೋತಿಷ್ಯ ಪಂಚಾಂಗದ ಪ್ರಕಾರ ಪ್ರತಿಯೊಂದು ಗ್ರಹ ಒಂದು ನಿಶ್ಚಿತ ಕಾಲಾವಧಿಯ ಬಳಿಕ ಬೇರೆ ಬೇರೆ ರಾಶಿಗಳಲ್ಲಿ ಗೋಚರಿಸಿ ಶುಭ ಹಾಗೂ ಅಶುಭ ಯೋಗಗಳನ್ನು ನಿರ್ಮಿಸುತ್ತವೆ. ಈ ಶುಭ ಹಾಗೂ ಅಶುಭ ಯೋಗಗಳು ಭೂಮಿಯ ಮೇಲಿರುವ ಸಕಲ ಚರಾಚರ, ವಿಶ್ವ, ದೇಶದ ಮೇಲೆ ಪ್ರಭಾವ ಬೀರುತ್ತವೆ. ಇದೇ ಸರಣಿಯಲ್ಲಿ ಇದೀಗ ಮಿಥುನ ರಾಶಿಯಲ್ಲಿ ಮಹಾಲಕ್ಷ್ಮೀ ರಾಜಯೋಗ ರೂಪುಗೊಳ್ಳಲಿದೆ. ಈ ಯೋಗ ಮಾರ್ಚ್ 27ರಂದು ಮಿಥುನ ರಾಶಿಯಲ್ಲಿ ಚಂದ್ರ ಹಾಗೂ ಮಂಗಳನ ಮೈತ್ರಿಯಿಂದ ನೆರವೇರಲಿದೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಗೋಚರಿಸಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜಾತಕದವರಿಗೆ ಇದರಿಂದ ಆಕಸ್ಮಿಕ ಧನಲಾಭ ಹಾಗೂ ಮಹಾ  ಭಾಗ್ಯೋದಯದ ಯೋಗ ನಿರ್ಮಾಣಗೊಳ್ಳುತ್ತಿದೆ. ಹಾಗಾದರೆ ಬನ್ನಿ ಆ ಅದೃಷ್ಟಶಾಲಿ ರಾಶಿಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ,

 

ಇದನ್ನೂ ಓದಿ-Durga Ashtami 2023: ದುರ್ಗಾಷ್ಟಮಿ ದಿನ ಗ್ರಹಗಳ ಮಹಾ ಮೈತ್ರಿ, ಈ ರಾಶಿಗಳ ಜನರಿಗೆ ಬಂಬಾಟ್ ಲಾಟರಿ, ಸಿಗಲಿದೆ ಅಪಾರ ಧನ!

 

ಇದನ್ನೂ ನೋಡಿ-

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಮಿಥುನ ರಾಶಿ: ಮಿಥುನ ರಾಶಿಯ ಜಾತಕದವರ ಪಾಲಿಗೆ ಮಹಾಲಕ್ಷಿ ರಾಜಯೋಗ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ರೂಪುಗೊಳ್ಳುತ್ತಲಿದೆ. ಹೀಗಾಗಿ ಈ ಅವಧಿಯಲ್ಲಿ ನೀವು ನಿಮ್ಮ ಸುಖ ಸೌಕರ್ಯಗಳಲ್ಲಿ ಅಭಿವೃದ್ಧಿಯನ್ನು ಗಮನಿಸುವಿರಿ. ಜೊತೆಗೆ ನಿಮಗೆ ಆಕಸ್ಮಿಕ ಧನಲಾಭ ಕೂಡ ಪ್ರಾಪ್ತಿಯಾಗಲಿದೆ. ಇನ್ನೊಂದೆಡೆ ನಿಮ್ಮ ಘನತೆ-ಗೌರವದಲ್ಲಿಯೂ ಕೂಡ ಸಕಾರಾತ್ಮಕ ಬದಲಾವಣೆಗಲಾಗಲಿವೆ. ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಬಾಳಸಂಗಾತಿಯ ಜೊತೆಗಿನ ನಿಮ್ಮ ಸಂಬಂಧದಲ್ಲಿ ಮಧುರತೆ ಇರಲಿದೆ. ಆದರೆ, ಕೋಪದ ಮೇಲೆ ನಿಯಂತ್ರಣವಿರಲಿ. ಯಾರೊಬ್ಬರ ಜೊತೆಗೆ ನಿಮ್ಮ ಸಂಬಂಧ ಹಾಳಾಗುವ ಸಾಧ್ಯತೆ ಇದೆ.  

2 /3

ಮೇಷ ರಾಶಿ: ಮೇಷ ರಾಶಿಯ ಜಾತಕದವರ ಪಾಲಿಗೆ ಮಹಾಲಕ್ಷ್ಮೀ ರಾಜಯೋಗ ಅತ್ಯಂತ ಶುಭ ಹಾಗೂ ಫಲಪ್ರದ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಪರಾಕ್ರಮ ಭಾವದಲ್ಲಿ ರೂಪುಗೊಳ್ಳುತ್ತಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ-ಪರಾಕ್ರಮದಲ್ಲಿ ಹೆಚ್ಚಳ ಉಂಟಾಗಲಿದೆ. ಪರಾಕ್ರಮದಿಂದಲೇ ನಿಮಗೆ ಧನ ಪ್ರಾಪ್ತಿಯಾಗಲಿದೆ. ಇನ್ನೊಂದೆಡೆ ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಸರ್ಕಾರಿ ನೌಕರಿಗಾಗಿ ಸಿದ್ಧತೆ ನಡೆಸುತ್ತಿರುವವರಿಗೆ, ಯಾವುದಾದರೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಆಟೋಟ, ಪೊಲೀಸ್ ಇಲಾಖೆ, ಸೇನೆಗೆ ಸಂಬಂಧಿಸಿದ ಜನರಿಗೆ ಈ ಮೈತ್ರಿಯಿಂದ ಭಾರಿ ಲಾಭ ಸಿಗುವ ಸಾಧ್ಯತೆ ಇದೇ. ಘನತೆ ಗೌರವದಲ್ಲಿ ಅಪಾರ ಹೆಚ್ಚಳ ಉಂಟಾಗಲಿದೆ.  

3 /3

ಸಿಂಹ ರಾಶಿ: ಮಿಥುನ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮಹಾಲಕ್ಷ್ಮೀ ರಾಜಯೋಗ ನಿಮ್ಮ ಪಾಲಿಗೂ ಕೂಡ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಆದಾಯ ಮತ್ತು ಲಾಭದ ಭಾವ ಅಥವಾ ಸ್ಥಾನದಲ್ಲಿ ನಿರ್ಮಾಣಗೊಳ್ಳುತ್ತಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಇನ್ನೊಂದೆಡೆ, ನೀವು ಹೊಸ ಕಾರ್ಯವನ್ನು ಆರಂಭಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ಒಂದು ವ್ಯಾಪಾರ ಒಪ್ಪಂದಕ್ಕೆ ಮುಂದಾಗುವ ಸಾಧ್ಯತೆ ಇದ್ದು, ಅದು ನಿಮಗೆ ಭವಿಷ್ಯದಲ್ಲಿ ಸಾಕಷ್ಟು ಫಲಪ್ರದ ಸಾಬೀಟಾಗುವ ಸಾಧ್ಯತೆ ಇದೆ (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯಯನ್ನು ಖಚಿತಪಡಿಸುವುದಿಲ್ಲ)