Tulsi Plant Importance: ಸನಾತನ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಗಿಡದ ಸ್ಥಾನಮಾನ ನೀಡಲಾಗಿದೆ. ಧಾರ್ಮಿಕ ಕೆಲಸಗಳಿಂದ ಹಿಡಿದು ಆಯುರ್ವೇದ ಮತ್ತು ದೇಶೀಯ ಉಪಾಯಗಳಿಗಾಗಿ ತುಳಸಿಯನ್ನು ಬಳಸಲಾಗುತ್ತದೆ. ಆದರೆ ತುಳಸಿ ದಳಗಳನ್ನು ಕೀಳಲು ಶಾಸ್ತ್ರದಲ್ಲಿ ಕೆಲ ಸಂಗತಿಗಳನ್ನು ಉಲ್ಲೇಖಿಸಲಾಗಿದೆ. ತುಳಸಿ ಎಲೆ ಅಥವಾ ದಳಗಳನ್ನು ತಪ್ಪಾದ ರೀತಿಯಲ್ಲಿ ಕೀಳುವುದು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ತುಳಸಿ ಎಲೆಗಳನ್ನು ಕೀಳಲು ಸರಿಯಾದ ಮಾರ್ಗ ಯಾವುದು ಎಂಬುದನ್ನು  ತಿಳಿಯುವುದು ತುಂಬಾ ಮುಖ್ಯವಾಗುತ್ತದೆ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತುಳಸಿ ಸಸ್ಯವನ್ನು ಪವಿತ್ರ, ವಿಷ್ಣುಪ್ರಿಯ ಹಾಗೂ ಪೂಜನೀಯವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ಅದನ್ನು ಸ್ಪರ್ಶಿಸಲು ಹಾಗೂ ಅದರ ದಳಗಳನ್ನು ತೆಗೆಯಲು ಕೆಲ ಸಲಹೆಗಳನ್ನು ನೀಡಲಾಗಿದೆ.


ನಿಮಗೆ ತುಳಸಿ ಎಲೆಗಳು ಬೇಕಾದರೆ, ಮೊದಲು ತುಳಸಿ ಕುಂಡದಲ್ಲಿ ಬಿದ್ದಿರುವ ದಳಗಳನ್ನು ಕೈಗೆತ್ತಿಕೊಳ್ಳಿ. ಇದರ ನಂತರವೂ, ನಿಮಗೆ ಹೆಚ್ಚು ದಳಗಳು ಬೇಕಾದರೆ, ನೀವು ಸಸ್ಯದಿಂದ ಎಲೆಗಳನ್ನು ಕಿತ್ತುಕೊಳ್ಳಬೇಕು. ಇದೇ ವೇಳೆ ನಿಮ್ಮ ಉಗುರುಗಳು ದಳಗಳನ್ನು ಕೀಳುವಾಗ ದಳಗಳಲ್ಲಿ  ಸಿಲುಕಿಕೊಳ್ಳಬಾರದು ಎಂಬುದನ್ನು ನೆನಪಿನಲ್ಲಿಡಿ. ಇದಕ್ಕಾಗಿ, ನೀವು ನಿಮ್ಮ ಬೆರಳುಗಳನ್ನು ಬಳಸುವುದು ಉತ್ತಮ. ಏಕೆಂದರೆ ತುಳಸಿ ದಳಗಳನ್ನು ಉಗುರುಗಳಿಂದ ಕೀಳುವುದು ಅಶುಭವೆಂದು ಪರಿಗಣಿಸಲಾಗುತ್ತದೆ.


ತುಳಸಿ ದಳಗಳನ್ನು ಕೀಳಲು ದಿನವೂ ಮುಖ್ಯವಾಗಿದೆ. ಭಾನುವಾರ ತುಳಸಿ ಎಲೆಗಳನ್ನು ಕೀಳಬಾರದು. ಇದಲ್ಲದೇ ದ್ವಾದಶಿ, ಅಮವಾಸ್ಯೆ, ಚತುರ್ದಶಿಯಂದು ತುಳಸಿ ದಳಗಳನ್ನು ಕೀಳುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ.


ತುಳಸಿ ದಳಗಳನ್ನು ಯಾವಾಗಲೂ ಬೆಳಕಿನಲ್ಲಿ ಕೀಳಬೇಕು, ಸೂರ್ಯ ಮುಳುಗಿದ ನಂತರ ತುಳಸಿ ಗಿಡವನ್ನು ಸ್ಪರ್ಶಿಸಬಾರದು.  ರಾಧೆಯ ರೂಪವೆಂದು ಪರಿಗಣಿಸಲ್ಪಟ್ಟಿರುವ ತುಳಸಿ ದೇವಿಯು ಕೃಷ್ಣನೊಂದಿಗೆ ಕಾನನಕ್ಕೆ ಸಂಜೆ ಹೊರಡುತ್ತಾಳೆ ಎಂಬುದು ಧಾರ್ಮಿಕ ನಂಬಿಕೆ, ಹೀಗಾಗಿ ಸಂಜೆ ದಳಗಳನ್ನು ಕೀಳುವುದು ತಪ್ಪು ಎಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲ, ಗ್ರಹಣ ಕಾಲದಲ್ಲೂ ತುಳಸಿ ದಳಗಳನ್ನು ಕೀಳಬಾರದು.


ಇದನ್ನೂ ಓದಿ-New Year 2023 Astro Tips: ನೀರಿಗೆ ಸಂಬಂಧಿಸಿದ ಈ ಉಪಾಯ ನಿಮ್ಮ ಮನೆಯ ಎಲ್ಲಾ ದೋಷಗಳನ್ನು ತೊಳೆದು ಹಾಕಲಿದೆ

ತುಳಸಿ ಗಿಡವನ್ನು ಸ್ಪರ್ಶಿಸುವ ಮುನ್ನ ಅಥವಾ ದಳಗಳನ್ನು ಕೀಳುವ ಮೊದಲು ಸ್ನಾನ ಮಾಡಿ ಮತ್ತು ಅವುಗಳನ್ನು ಶುದ್ಧ ಕೈಗಳಿಂದ ಮಾತ್ರ ಸ್ಪರ್ಶಿಸಿ. ಕೆಳಗಿ ಬಿದ್ದ ದಳಗಳನ್ನು ಕೂಡ ಶುದ್ಧ ಕೈಗಳಿಂದ ಮಾತ್ರ ಎತ್ತಿಕೊಳ್ಳಿ. ಒಣಗಿದ ತುಳಸಿ ಗಿಡವನ್ನು ಮನೆಯಲ್ಲಿ ಇಡಬಾರದು, ಗಿಡ ಒಣಗಿದರೆ ಅದನ್ನು ಅರಿಯುವ ನೀರಿನಲ್ಲಿ ಹರಿಬಿಡಬೇಕು.


ಇದನ್ನೂ ಓದಿ-New Year Remedies 2023: ವರ್ಷಗಳ ಬಳಿಕ ಇಂತಹ ಅದ್ಭುತ ಯೋಗ ನಿರ್ಮಾಣ, ಭಾಗ್ಯ ಬದಲಾಗಲು ನಾಳೆ ಈ ಕೆಲಸ ಮಾಡಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.