ಕೈ ಕಡಗ ಧರಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..?
ವ್ಯಕ್ತಿಯ ಸಮಸ್ಯೆಗಳನ್ನು ಹೋಗಲಾಡಿಸಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಬಗೆಯ ಲೋಹಗಳನ್ನು ಧರಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ರೋಗಗಳನ್ನು ತೊಡೆದುಹಾಕಲು ಕೈ ಕಡಗ ಧರಿಸಲು ಸಲಹೆ ನೀಡಲಾಗುತ್ತದೆ. ಈ ಲೋಹದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿರಿ.
ನವದೆಹಲಿ: ಕೆಲವು ಲೋಹಗಳನ್ನು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಜೀವನದ ಸಮಸ್ಯೆಗಳು ಮತ್ತು ಗ್ರಹಗಳ ಮಂಗಳಕರ ಪರಿಣಾಮಗಳನ್ನು ತೊಡೆದುಹಾಕಲು ಲೋಹ ಧರಿಸಲು ವ್ಯಕ್ತಿಗೆ ಸಲಹೆ ನೀಡಲಾಗುತ್ತದೆ. ಅನೇಕರು ಚಿನ್ನ, ಬೆಳ್ಳಿ, ತಾಮ್ರದ ಕೈ ಕಡಗ ಧರಿಸುತ್ತಾರೆ. ಲೋಹದ ಕೈ ಕಡಗ ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ. ಇದನ್ನು ಧರಿಸುವದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ತಿಳಿಯಿರಿ.
ಧಾರ್ಮಿಕ ಗ್ರಂಥಗಳಲ್ಲಿ ಲೋಹದ ಕೈ ಕಡಗವನ್ನು ಶಿವನ ರೂಪವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದಲ್ಲಿ ಇದನ್ನು ಜೀವಂತ ಲೋಹ ಎಂದು ವಿವರಿಸಲಾಗಿದೆ. ಇದನ್ನು ಕೈಯಲ್ಲಿ ಧರಿಸುವುದರಿಂದ ಮನುಷ್ಯ ಅನೇಕ ರೋಗಗಳಿಂದ ಮುಕ್ತಿ ಹೊಂದುತ್ತಾನೆ. ಇದರೊಂದಿಗೆ ಜೀವನದಲ್ಲಿನ ತೊಂದರೆಗಳಿಂದಲೂ ಮುಕ್ತಿ ಕಾಣಬಹುದು. ಲೋಹದ ಕೈ ಕಡಗದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿರಿ.
ಇದನ್ನೂ ಓದಿ: Narsimha Jayanti 2022: ಜೀವನದಲ್ಲಿನ ದುಃಖ-ನೋವುಗಳಿಂದ ಮುಕ್ತಿ ಪಡೆಯಬೇಕೆ? ಈ ಕಥೆ ತಪ್ಪದೆ ಆಲಿಸಿ
ನಕಾರಾತ್ಮಕ ಶಕ್ತಿಗಳು ದೂರ ಹೋಗುತ್ತವೆ
ಧಾರ್ಮಿಕ ಗ್ರಂಥಗಳಲ್ಲಿ ಲೋಹದ ಕೈ ಕಡಗವನ್ನು ಭಗವಾನ್ ಶಿವನ ರೂಪವೆಂದು ಪರಿಗಣಿಸಲಾಗುತ್ತದೆ. ಇದನ್ನು ಧರಿಸುವುದರಿಂದ ವ್ಯಕ್ತಿಯು ನಕಾರಾತ್ಮಕ ಶಕ್ತಿಗಳಿಂದ ಸ್ವಾತಂತ್ರ್ಯ ಪಡೆಯುತ್ತಾನೆ. ಅದೇ ರೀತಿ ನಕಾರಾತ್ಮಕ ಶಕ್ತಿಗಳು ವ್ಯಕ್ತಿಯ ಮೇಲೆ ಪ್ರಾಬಲ್ಯ ಸಾಧಿಸಲು ಇದು ಬಿಡುವುದಿಲ್ಲವೆಂದು ನಂಬಲಾಗಿದೆ.
ಕೈ-ಕಾಲು ಮತ್ತು ಬೆನ್ನು ನೋವು ದೂರವಾಗುತ್ತದೆ
ಒಬ್ಬ ವ್ಯಕ್ತಿಯು ಕೈ-ಕಾಲು, ಬೆನ್ನು ನೋವಿನಿಂದ ಬಳಲುತ್ತಿದ್ದರೆ ಮತ್ತು ಎಲ್ಲಾ ಚಿಕಿತ್ಸೆಗಳ ನಂತರವೂ ಪರಿಹಾರ ಸಿಗದಿದ್ದರೆ ಲೋಹದ ಕೈ ಕಡಗವನ್ನು ಧರಿಸಬೇಕು. ಇದು ರಕ್ತ ಪರಿಚಲನೆ ನಿಯಂತ್ರಿಸುವಲ್ಲಿ ಕೆಲಸ ಮಾಡುತ್ತದೆ. ಆದ್ದರಿಂದ ಇದನ್ನು ಧರಿಸುವುದರಿಂದ ವ್ಯಕ್ತಿಯು ಈ ನೋವುಗಳಿಂದ ಪರಿಹಾರ ಪಡೆಯುತ್ತಾನೆ.
ಇದನ್ನೂ ಓದಿ: Makeup Tips: ನಿಮ್ಮ ಕಣ್ಣುಗಳನ್ನು ಸುಂದರಗೊಳಿಸಲು ಈ ರೀತಿಯ ಮೇಕಪ್ ಬಳಸಿ
ರೋಗಗಳಿಂದ ಮುಕ್ತಿ
ಹವಾಮಾನ ಬದಲಾವಣೆಯಿಂದ ಅನೇಕ ರೋಗಗಳು ಕಾಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕೈ ಕಡಗವನ್ನು ಧರಿಸುವುದರಿಂದ ವ್ಯಕ್ತಿಯು ಈ ಎಲ್ಲಾ ಕಾಯಿಲೆಗಳಿಂದ ಶೀಘ್ರ ಪರಿಹಾರ ಪಡೆಯುತ್ತಾನೆ.
ಮಾನಸಿಕ ನೋವು ಮತ್ತು ಒತ್ತಡದಿಂದ ಪರಿಹಾರ
ಇಂದಿನ ಜೀವನಶೈಲಿಯು ಮನುಷ್ಯನನ್ನು ಮಾನಸಿಕ ನೋವು ಮತ್ತು ಒತ್ತಡಕ್ಕೆ ಬಲಿಯಾಗುವಂತೆ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯು ಈ ವಸ್ತುಗಳಿಂದ ಹೊರಬರಲು ಲೋಹದ ಕೈ ಕಡಗವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಇದು ಮಾನಸಿಕ ನೋವನ್ನು ಹೋಗಲಾಡಿಸುತ್ತದೆ ಮತ್ತು ಇದನ್ನು ಧರಿಸುವುದರಿಂದ ವ್ಯಕ್ತಿಯು ಕ್ರಿಯಾಶೀಲನಾಗುತ್ತಾನೆ ಎಂದು ಹೇಳಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.