Weekly Horoscope 25 April to 1st May 2022: ಈ ವಾರ ಕೆಲವು ರಾಶಿಚಕ್ರದ ಜನರ ವೃತ್ತಿಜೀವನಕ್ಕೆ ತುಂಬಾ ಉತ್ತಮವಾಗಿರಲಿದ್ದು, ಅವರಿಗೆ ಬಡ್ತಿ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ನಿಮ್ಮ ಇಚ್ಛೆಗೆ ಅನುಗುಣವಾಗಿ ಕೆಲಸ ಸಿಗಲಿದ್ದು, ಇಚ್ಛೆಗೆ ಅನುಗುಣವಾಗಿ ವರ್ಗಾವಣೆ ಸಿಗುವ ಸಾಧ್ಯತೆ ಕೂಡ ಇದೆ. ಎಲ್ಲಾ 12 ರಾಶಿಗಳ ಜನರ ಪಾಲಿಗೆ ಮುಂದಿನ ಒಂದು ವಾರ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

COMMERCIAL BREAK
SCROLL TO CONTINUE READING

ಮೇಷ  - ಅಧ್ಯಯನ ಮತ್ತು ಬೋಧನೆಯಲ್ಲಿ  ಈ ವಾರ ನೀವು ಹೆಚ್ಚು ಆಸಕ್ತಿಯನ್ನು ತೋರುವಿರಿ ಮತ್ತು ನಿಮ್ಮನ್ನು ನೀವು ಅಪ್ಡೇಟ್ ಮಾಡಿಕೊಳ್ಳಲು ಯಾವುದೇ ಒಂದು ಕೋರ್ಸ್ ಗೆ ನೀವು ಸೇರುವಿರಿ. ಕೆಲಸದಲ್ಲಿ ಸೋಮಾರಿತನವನ್ನು ತೊರೆಯಬೇಕು, ಯಶಸ್ಸು ಪ್ರಾಪ್ತಿಗೆ, ಕೆಲಸವನ್ನು ವೇಗಗೊಳಿಸಬೇಕು. ಮರದ ವ್ಯಾಪಾರ ಮಾಡುವ ವ್ಯಾಪಾರಿಗಳು ಹೂಡಿಕೆ ಮಾಡುವಾಗ ಜಾಗರೂಕರಾಗಿರಬೇಕು. ಉದರ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಪರಿಹಾರ ಸಿಗಲಿದೆ. ನಿಮ್ಮ ಜೀವನ ಸಂಗಾತಿಗೆ ಇದು  ಪ್ರಗತಿ ಹೊಂದುವ ಸಮಯ. ಶೀಘ್ರದಲ್ಲೇ ಒಳ್ಳೆಯ ಸುದ್ದಿ ಪ್ರಾಪ್ತಿಯಾಗಲಿದೆ. ಆದರೆ, ವಿವಾದಗಳಿಂದ ದೂರವಿದ್ದು, ಶಾಂತವಾಗಿರಿ.

ವೃಷಭ  - ಈ ವಾರ ನೀವು ನಿಮ್ಮ ಗುರಿಯತ್ತ ಗಮನ ಹರಿಸಬೇಕು. ಈಗ ನೀವು ನಿಮ್ಮ ಕೆಲಸ ಮತ್ತು ದಿನಚರಿಯನ್ನು ಸರಿದೂಗಿಸಲು ಪ್ರಯತ್ನಿಸಬೇಕು. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಆತುರಪಡಬೇಡಿ, ಮೊದಲು ಸರಿಯಾಗಿ ಯೋಜನೆ ರೂಪಿಸಿ. ನಿಮಗೆ ಕಾಣಿಸುವ ಸಮಸ್ಯೆ ಚಿಕ್ಕದಾಗಿದ್ದರೂ ಕೂಡ ಅದರ ಪರಿಹಾರ ಕಷ್ಟಕರವಾಗಿರಲಿದೆ. ಪರಸ್ಪರ ಸಂಬಂಧಗಳಲ್ಲಿ ಸಂವಹನದ ಕೊರತೆ ಸರಿಯಿಲ್ಲದಿದ್ದರೆ, ಅದನ್ನು ಸರಿಪಡಿಸಿ, ಸಂಬಂಧದಲ್ಲಿ ಮಧುರತೆ ಬರಲಿದೆ. ಮಗು ಒಳ್ಳೆಯದನ್ನು ಮಾತ್ರ ಕಲಿಯುತ್ತದೆ ಎಂಬುದನ್ನು ಪಾಲಕರು ನೆನಪಿನಲ್ಲಿಟ್ಟುಕೊಳ್ಳಬೇಕು.

ಮಿಥುನ - ಈ ರಾಶಿಯ ಜನರು ಈ ವಾರ ಸಕಾರಾತ್ಮಕ ಮನೋಭಾವವನ್ನು ಹೊಂದಬೇಕು. ನಕಾರಾತ್ಮಕ ಮನೋಭಾವದಿಂದ ದೂರವಿರಿ, ಎದೆಗುಂದಬೇಡಿ. ಸಾಫ್ಟ್‌ವೇರ್ ಕೆಲಸದಲ್ಲಿರುವ ಜನರ ಪಾಲಿಗೆ ಈ ವಾರದ ಕೊನೆಯಲ್ಲಿ ಪ್ರಯೋಜನಗಳು ಪ್ರಪ್ತಿಯಾಗಲಿವೆ. ಕಷ್ಟಪಟ್ಟು ಕೆಲಸ ಮಾಡುವಿರಿ. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ಜನರು ಉತ್ತಮ ತಮ್ಮ ಅಪೇಕ್ಷೆಗೆ ಅನುಗುಣವಾಗಿ ಫಲಿತಾಂಶಗಳನ್ನು ಪಡೆಯುತ್ತಾರೆ. ಹೃದ್ರೋಗಿಗಳು ವಾರದ ಮಧ್ಯಭಾಗದಿಂದ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಮಗೆ ಜೀವನ ಸಂಗಾತಿ ಇದ್ದರೆ ಅವರೊಂದಿಗೆ ಪ್ರೀತಿಯಿಂದ ವರ್ತಿಸಿ. ಮನಸ್ಸಿನಲ್ಲಿ ಅಂತರ ಕಾಯ್ದುಕೊಳ್ಳುವ ಅವಶ್ಯಕತೆ ಇಲ್ಲ. ವಿದ್ಯಾರ್ಥಿಗಳು ಸೋಮಾರಿತನವನ್ನು ತೊರೆದು, ಕಠಿಣ ಪರಿಶ್ರಮದಿಂದ ಪರೀಕ್ಷೆಗೆ ಸಿದ್ಧತೆ ನಡೆಸಬೇಕು.

ಕರ್ಕ - ಈ ರಾಶಿಯ ಜನರು ಯಶಸ್ಸನ್ನು ಪಡೆಯಲು ಧನಾತ್ಮಕ ಚಿಂತನೆಯೊಂದಿಗೆ ಮುನ್ನಡೆಯಬೇಕು. ಸಂಪೂರ್ಣ ಶಕ್ತಿ ಮತ್ತು ಪರಿಶ್ರಮದಿಂದ ಕೆಲಸ ಮಾಡಿದರೆ, ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವ್ಯವಹಾರದ ವಿಷಯಗಳಲ್ಲಿ ನೀವು ರಾಜಿ ಮಾಡಿಕೊಳ್ಳಬೇಕಾಗಬಹುದು. ಬಿಟ್ಟುಕೊಡಿ ಮತ್ತು ಮುಂದಕ್ಕೆ ಸಾಗಿ. ಮಾದಕ ಪದಾರ್ಥ ಸೇವನೆ ಮಾಡುವವರು ಅವುಗಳಿಂದ ಬರುವ ರೋಗಗಳ ಬಗ್ಗೆ ಜಾಗೃತರಾಗಿರಬೇಕು. 28 ರ ನಂತರ ಕೌಟುಂಬಿಕ ಸಂಬಂಧಗಳಲ್ಲಿ ಘರ್ಷಣೆಗೆ ಆಸ್ಪದ ನೀಡಬೇಡಿ. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ. ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.
ಸಿಂಹ - ಈ ವಾರ ನಿಮ್ಮ ಪಾಲಿಗೆ ಸ್ವಲ್ಪ ಹೆಚ್ಚು ಗೊಂದಲ ಮತ್ತು ಕಿರಿಕಿರಿಇರಲಿದೆ. ಅಸಮಾಧಾನಗೊಳ್ಳಬೇಡಿ ಮತ್ತು ಶಾಂತವಾಗಿರಿ. ಕಚೇರಿಯಲ್ಲಿ ನಿಮ್ಮ ಮೇಲೆ ಕೆಲಸದ ಹೊರೆ ಹೆಚ್ಚಾಗಬಹುದು. ಇದು ನಿಮ್ಮ ಸಾಮರ್ಥ್ಯವನ್ನು ತೋರಿಸಲಿದೆ ಮತ್ತು ಅದಕ್ಕಾಗಿ ಸಿದ್ಧರಾಗಿರಿ. ವ್ಯಾಪಾರ ಮುಂದುವರಿಯುವುದನ್ನು ನೀವು ನೋಡಲು ಬಯಸುತ್ತಿದ್ದರೆ, ಪ್ರಚಾರದತ್ತ ಗಮನ ಹರಿಸಬೇಕು. ಅತಿಯಾದ ಕೆಲಸವು ಕಣ್ಣುಗಳಲ್ಲಿ ನೋವು ಮತ್ತು ಒತ್ತಡವ ಉಂಟುಮಾಡಬಹುದು. ಕೆಲಸದ ಮಧ್ಯದಲ್ಲಿ ವಿಶ್ರಾಂತಿ ಪಡೆಯಿರಿ. ಈ ರಾಶಿ ಹೊಂದಿರುವ ಚಿಕ್ಕ ಮಕ್ಕಳ ಬೌದ್ಧಿಕ ಸಾಮರ್ಥ್ಯವು ಹೆಚ್ಚಾಗಲಿದೆ. ಪಾಲಕರು ಅವರಿಗೆ ಮಾರ್ಗದರ್ಶನ ನೀಡಬೇಕು. ಕುಟುಂಬದ ಹಿರಿಯರ ಜೊತೆ ಚೆನ್ನಾಗಿ ನಡೆದುಕೊಂಡರೆ ಅವರ ಆಶೀರ್ವಾದ ಪ್ರಾಪ್ತಿಯಾಗಲಿದೆ.

ಕನ್ಯಾ - ಈ ರಾಶಿಯ ಜನರು ವಾರದಲ್ಲಿ ತಮ್ಮ ನಡವಳಿಕೆ ಮತ್ತು ಉತ್ತಮ ಸಂವಹನದ ಸಂಪೂರ್ಣ ಲಾಭವನ್ನು ಪಡೆಯಲಿದ್ದಾರೆ. ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ಜನರಿಗೆ ಈ ವಾರ ವರ್ಗಾವಣೆಯ ಯೋಗ ಇರಲಿದೆ. ಉದ್ಯಮಿಗಳಿಗೆ, ಈ ವಾರ ವ್ಯವಹಾರದಲ್ಲಿ ಬದಲಾವಣೆಯ ಸಾಧ್ಯತೆಯಿದೆ. ಹೊಸ ವ್ಯವಹಾರದ ಸೂಕ್ತ ಅಧ್ಯಯನ ನಡೆಸಿ. ಆರೋಗ್ಯದ ವಿಷಯಕ್ಕೆ ಬಂದರೆ, ನಿಮ್ಮ ತೂಕ ಇಳಿಕೆಯಾಗುವ ಸಾಧ್ಯತೆ ಇದೆ. ಸಮತೋಲಿತ ಆಹಾರದ ಜೊತೆಗೆ ಯೋಗ ಮತ್ತು ಧ್ಯಾನವನ್ನೂ ನಡೆಸಿ. ಮನೆಯಲ್ಲಿರುವ ಎಲ್ಲ ಸದಸ್ಯರ ಭಾವನೆಗಳನ್ನು ಗೌರವಿಸಿ. ಪ್ರತಿಯೊಬ್ಬರಿಗೂ ಅವರದೇ ಆದ ಪ್ರಾಮುಖ್ಯತೆ ಇರುತ್ತದೆ, ಯಾರನ್ನೂ ಅಗೌರವ ಮಾಡಬೇಡಿ. ಸಂಬಂಧಗಳ ವಿಷಯದಲ್ಲಿ ಈ ವಾರ ನಿಮಗೆ ಬಹಳ ಮುಖ್ಯವಾಗಿರಲಿದೆ. ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಿ.

ತುಲಾ - ಈ ರಾಶಿಯ ಜನರು ಸಂಪೂರ್ಣ ದಕ್ಷತೆಯೊಂದಿಗೆ ತಮ್ಮ ಸೌಮ್ಯ ನಡವಳಿಕೆಯಿಂದ ಬಿಗಡಾಯಿಸಿದ ಕೆಲಸ ಪೂರ್ಣಗೊಲಿಸಲಿದ್ದಾರೆ. ನಿಮ್ಮ ಸ್ವಭಾವದ ಸೌಮ್ಯತೆ ಇತರರನ್ನು ಮೆಚ್ಚಿಸುವ ಗುಣವಾಗಿದೆ. ಹೊಸ ಉದ್ಯೋಗದ ನಿರೀಕ್ಷೆಯಲ್ಲಿರುವವರು ಸ್ವಲ್ಪ ಸಮಯ ಕಾಯಬೇಕಾಗಬಹುದು. ತಾಳ್ಮೆಯಿಂದಿರಿ ಮತ್ತು ನಿಮ್ಮ ಸಿದ್ಧತೆಗಳನ್ನು ಮುಂದುವರಿಸಿ. ನೀವು ವ್ಯವಹಾರದಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದರೆ, ಅದನ್ನು ತುಂಬಾ ಜಾಗ್ರತೆಯಿಂದ ಮಾಡಿ. ಮೊದಲು ಸರಿಯಾಗಿ ಯೋಚಿಸಿ. ಯಾವುದೇ ರೋಗವು ಈ ವಾರ ನಿಮಗೆ ತುಂಬಾ ಬಾಧೆಯನ್ನು ನೀಡಲಿದೆ, ಎಚ್ಚರಿಕೆಯಿಂದಿರಿ. ನೀವು ಕುಟುಂಬದ ಬಗ್ಗೆ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಒಮ್ಮೆ ನೀವು ಹಿರಿಯರ ಅಭಿಪ್ರಾಯವನ್ನು ಪಡೆದುಕೊಳ್ಳಿ. ಏಕೆಂದರೆ ಅವರ ಅಭಿಪ್ರಾಯವು ನಿಮಗೆ ಪ್ರಯೋಜನ ನೀಡಲಿದೆ. ಅಗತ್ಯವಿರುವವರಿಗೆ ಸಾಧ್ಯವಾದಷ್ಟು ದಾನ ಮಾಡಿ. ಇಂದು ಮಾಡಿದ ದಾನವು ಪುಣ್ಯದ ರೂಪದಲ್ಲಿ ನಿಮ್ಮ ಖಾತೆ ಸೇರಲಿದೆ, ಅದರ ಲಾಭವು ಭವಿಷ್ಯದಲ್ಲಿ ನಿಮಗೆ ಖಂಡಿತ ಸಿಗಲಿದೆ.

ವೃಶ್ಚಿಕ - ಈ ರಾಶಿಗಳ ಜನರು ವಾರದಲ್ಲಿ ತಮ್ಮನ್ನು ತಮ್ಮನ್ನು ತಾವು ಅಪ್ಡೇಟ್ ಮಾಡಿಕೊಳ್ಳಲು ಕೋರ್ಸ್ ತೆಗೆದುಕೊಳ್ಳಬಹುದು. ಭವಿಷ್ಯದ ಅಗತ್ಯತೆಗಳ ವಿಷಯದಲ್ಲಿ ಇದು ತುಂಬಾ ಉಪಯುಕ್ತವಾಗಿದೆ. ಕಚೇರಿಯ ಗೌಪ್ಯ ವಿಷಯಗಳ ಸೋರಿಕೆಯಿಂದ ಸಮಸ್ಯೆಗಳು ಎದುರಾಗಬಹುದು. ಅವುಗಳನ್ನು ಆದಷ್ಟು ಸೋರಿಕೆಯಾಗದಂತೆ ಇರಲು  ಪ್ರಯತ್ನಿಸಿ. ಹೂಡಿಕೆದಾರರು ದೊಡ್ಡ ಷೇರುಗಳತ್ತ ಗಮನ ಹರಿಸಬೇಕು. ಷೇರುಗಳ ಖರೀದಿಗೆ ಇದು ಸರಿಯಾದ ಸಮಯ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ, ನೀವು ಹಳಸಿದ ಮತ್ತು ಕರಿದ ಆಹಾರ ಪದಾರ್ಥಗಳಿಂದ ದೂರವಿರುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಸಮಸ್ಯೆಗಳು ಎದುರಾಗಬಹುದು. ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ತೊಂದರೆಗಳಿಂದ ದೂರವಿರಲು ಬಯಸುವವರು, ಕಾನೂನಿನ ತೊಡಕುಗಳಿಂದ ದೂರ ಇರಬೇಕು.

ಧನು - ಈ ರಾಶಿಯ ಜನರು ಮುಂದಿನ ಒಂದು ವಾರದ ಕಾಲ ಎಲ್ಲಾ ಜನರೊಂದಿಗೆ ಸಂಪರ್ಕವನ್ನು ಕಾಪಾಡಿಕೊಳ್ಳಬೇಕು. ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿಯಾದರು ಕೂಡ ಸಂಪರ್ಕದಲ್ಲಿರಿ. ನಿಮ್ಮ ಕೆಲಸವನ್ನು ಬುದ್ಧಿವಂತಿಕೆಯಿಂದ ಮತ್ತು ಸರಿಯಾಗಿ ಮಾಡಿ. ಅಸಡ್ಡೆತನ ತೋರಬೇಡಿ.ಏಕೆಂದರೆ ಇದು ನಿಮ್ಮ ಕೆಲಸಕ್ಕೂ ಅಪಾಯಕಾರಿಯಾಗಲಿದೆ. ವ್ಯಾಪಾರ ಆರಂಭಿಸಲು ಪಾರ್ಟ್ನರ್ ಹುಡುಕಾಟದಲ್ಲಿವವರಿಗೆ ಈ ವಾರ ಉತ್ತಮವಾಗಿರಲಿದೆ. ಕಿಡ್ನಿ ಸ್ಟೋನ್ ನಿಂದ ಬಳಲುತ್ತಿರುವ ರೋಗಿಗಳು ಜಾಗರೂಕರಾಗಿರಬೇಕು. ಈ ವಾರ ಅವರ ಸಮಸ್ಯೆ ಇನ್ನಷ್ಟು ಉಲ್ಭಣಿಸುವ ಸಾಧ್ಯತೆ ಇದೆ. ಈ ವಾರ ನೀವು ಪ್ರತಿ ಹಂತದಲ್ಲೂ ನಿಮ್ಮ ಜೀವನ ಸಂಗಾತಿಯ ಬೆಂಬಲ ಪಡೆಯುವಿರಿ, ಇದು ನಿಮ್ಮ ಜೀವನ ಪಯಣವನ್ನು ಹೆಚ್ಚು ಸುಗಮಗೊಳಿಸಲಿದೆ. ಯುವಕರಿಗೆ ಈ ವಾರ ಗೌರವಗಳು ಮತ್ತು ಪ್ರಶಸ್ತಿಗಳು ಪ್ರಾಪ್ತಿಯಾಗಲಿವೆ. ಇದರಿಂದ ಅವರ ಸಾಮಾಜಿಕ ಸ್ಥಾನಮಾನದಲ್ಲಿ ಹೆಚ್ಚಳವಾಗಲಿದೆ.

ಮಕರ - ಈ ರಾಶಿಯ ಜನರು ಮುಂದಿನ ವಾರದಲ್ಲಿ ತಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಸಿದ್ಧರಾಗಿರಬೇಕು. ಏಕೆಂದರೆ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿವೆ. ಕಚೇರಿಯಲ್ಲಿ ಅಧಿಕೃತ ದತ್ತಾಂಶ ನಷ್ಟದ ಸಾಧ್ಯತೆಯಿದೆ, ಕೆಲಸದ ಸಮಯದಲ್ಲಿ ನಿಮ್ಮ ಬ್ಯಾಕಪ್ ತೆಗೆದುಕೊಳ್ಳಲು ಮರೆಯಬೇಡಿ. ಇದರಿಂದ ನಿಮಗಾಗುವ ಹಾನಿ ತಪ್ಪಲಿದೆ. ಸಾರಿಗೆ ವ್ಯಾಪಾರದಲ್ಲಿರುವವರಿಗೆ ಈ ವಾರದಲ್ಲಿ ವ್ಯಾಪಾರ ಹೆಚ್ಚಾಗುವ ಸಾಧ್ಯತೆ ಇದೆ. ದೇಹ ಆಯಾಸ ಹೆಚ್ಚಾಗಲಿದೆ. ಮಸಾಜ್ ಮಾಡಿಕೊಳ್ಳುವ ಮೂಲಕ ನೀವು ಆಯಾಸವನ್ನು ನಿವಾರಿಸಬಹುದು. ನಿಯಮಿತವಾಗಿ ಯೋಗ ಮಾಡಿ ಮತ್ತು ಚೈತನ್ಯದಿಂದಿರಿ. ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗಲಿವೆ. ಇದರಲ್ಲಿ ನೀವು ನಿಮ್ಮ ಪ್ರೀತಿಪಾತ್ರರ ಬೆಂಬಲ ಪಡೆಯುವಿರಿ. ವಿದ್ಯಾಭ್ಯಾಸ ವಿದ್ಯಾರ್ಥಿಗಳಿಗೆ ಈ ವಾರ ಉತ್ತಮವಾಗಿರಲಿದೆ. ನಿಮ್ಮ ಅಧ್ಯಯನದ ತಯಾರಿ ನಡೆಸಿ ಮತ್ತು ಈಗಾಗಲೇ ತಯಾರಿ ಪೂರ್ಣಗೊಳಿಸಿದವರು ರಿವೈಸ್ ಮಾಡಿ.


ಇದನ್ನೂ ಓದಿ-Astro Prediction: ಈ ಬಾರಿ ಈ ರಾಶಿಯ ಜನರಿಗೆ ಸಿಗಲಿದೆ ಜಬರ್ದಸ್ತ್ ಅಪ್ರೆಸಲ್

ಕುಂಭ - ಈ ರಾಶಿಯ ಜನರಲ್ಲಿ ಈ ವಾರದಲ್ಲಿ ಭಾವನಾತ್ಮಕ ದೌರ್ಬಲ್ಯ ಕಂಡುಬರಲಿದೆ. ಚಿಂತೆಯಿಂದ ದೂರವಿರಿ. ಪ್ರಯಾಣಕ್ಕೆ ಸಿದ್ಧತೆ ನಡೆಸಿ. ಕಚೇರಿ ಕಡೆಯಿಂದ ನಿಮಗೆ ಹೆಚ್ಚು ಪ್ರಯಾಣ ಇರಲಿದೆ. ಈ ವಾರ ಆಗುವ ನಷ್ಟದ ಬಗ್ಗೆ ವ್ಯಾಪಾರಿಗಳು ಎಚ್ಚರದಿಂದಿರಬೇಕು. ವ್ಯಾಪಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಸಂಧಿವಾತದಿಂದ ಬಳಲುತ್ತಿರುವವರಿಗೆ ನೋವಿನ ಸಮಸ್ಯೆ ಹೆಚ್ಚಾಗಬಹುದು. ಅನಗತ್ಯ ಓಡಾಟವನ್ನು ತಪ್ಪಿಸಿ. ಅವಿವಾಹಿತ ಯುವತಿಯರಿಗೆ, ಈ ವಾರ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ. ಬಹುಶಃ ಮದುವೆ ಕೂಡ ಫಿಕ್ಸ್ ಆಗಬಹುದು. ಸಮಾಜಸೇವೆಯನ್ನು ಎಂದಿಗೂ ಸ್ವಂತ ಲಾಭಕ್ಕಾಗಿ ಮಾಡಬೇಡಿ. ಸಮಾಜಸೇವೆಯಲ್ಲಿ ನಿಸ್ವಾರ್ಥದಿಂದ ತೊಡಗಿಸಿಕೊಂಡರೆ ನೆಮ್ಮದಿ ನಿಮ್ಮದಾಗಲಿದೆ.


ಇದನ್ನೂ ಓದಿ-ಮಿಥುನ-ತುಲಾ ರಾಶಿಯವರಿಗೊಂದು ಸಂತಸದ ಸುದ್ದಿ, ಒಂದೂವರೆ ತಿಂಗಳು ನಿಷ್ಕ್ರೀಯವಾಗಲಿದೆ ಈ ಗ್ರಹದ ಪ್ರಭಾವ

ಮೀನ - ಈ ರಾಶಿಯವರಿಗೆ ಈ ವಾರ ಶುಭವಾಗಿರಲಿದೆ. ನಿಮ್ಮ ಎಲ್ಲಾ ಪೂರ್ವ ಯೋಜಿತ ಕೆಲಸಗಳು ಪೂರ್ಣಗೊಳ್ಳಲಿವೆ. ಕಚೇರಿಯಲ್ಲಿ ಪ್ರಮೋಶನ್ ಕುರಿತಾದ ಸಂತಸದ ಸುದ್ದಿ ನಿಮಗೆ ಸಿಗುವ ಸಾಧ್ಯತೆ ಇದೆ. ಆದರೆ ಇದರೊಂದಿಗೆ ಜವಾಬ್ದಾರಿಗಳ ಹೊರೆಯೂ ಹೆಚ್ಚಾಗಲಿದೆ. ಧಾನ್ಯಗಳ ವ್ಯಾಪಾರದಲ್ಲಿ ತೊಡಗಿರುವವರು ಈ ವಾರ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು, ನಷ್ಟ ಸಂಭವಿಸುವ ಸಾಧ್ಯತೆ ಇದೆ. ಉಗ್ರ ಗ್ರಹಗಳು ನಿಮಗೆ  ಅಪಘಾತವನ್ನು ಉಂಟುಮಾಡಬಹುದು, ನೀವು ಬಹಳ ಜಾಗರೂಕರಾಗಿರಬೇಕು. ಮನೆ-ನಿವೇಶನ ಖರೀದಿಯ ಯೋಗವಿದೆ. ಇದು ಭವಿಷ್ಯದಲ್ಲಿ ನಿಮ್ಮ ಪಾಲಿಗೆ ಅನುಕೂಲವಾಗಿರಲಿದೆ. ಆಡಳಿತ ಮತ್ತು ಅಧಿಕಾರಕ್ಕೆ ಸಂಬಂಧಿಸಿದ ಜನರಿಗೆ ಈ ಇಡೀ ವಾರ ಉತ್ತಮ ಫಲಿತಾಂಶಗಳನ್ನು ನೀಡಲಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.