Budh Rashi Parivartan: ಬುಧನ ರಾಶಿ ಬದಲಾವಣೆ ಈ 6 ರಾಶಿಗಳ ಭಾಗ್ಯ ಬದಲಾಯಿಸಲಿದೆ

Budh Rashi Parivartan 2022: ಬುಧ ಗ್ರಹ ಶುಕ್ರನ ರಾಶಿಯಾಗಿರುವ ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಬುಧನ ಈ ರಾಶಿ ಪರಿವರ್ತನೆ 6 ರಾಶಿಗಳ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಈ ರಾಶಿಗಳ ಜನರಿಗೆ ಯಶಸ್ಸಿನ ಜೊತೆಗೆ ಧನಲಾಭ ಕೂಡ ಪ್ರಾಪ್ತಿಯಾಗಲಿದೆ.  

Written by - Nitin Tabib | Last Updated : Apr 23, 2022, 01:59 PM IST
  • ಏಪ್ರಿಲ್ 25ರಿಂದ ಈ ರಾಶಿಗಳ ಜನರ ಭಾಗ್ಯ ಬದಲಾವಣೆ
  • ಅಪಾರ ಧನಲಾಭದ ಜೊತೆಗೆ, ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳ ಸೃಷ್ಟಿ
  • ಈ ರಾಶಿಯ ಜನರು ತಮ್ಮ ಕೋಪದ ಮೇಲೆ ನಿಯಂತ್ರಣ ಹೊಂದಿರುವುದು ತುಂಬಾ ಮುಖ್ಯ
Budh Rashi Parivartan: ಬುಧನ ರಾಶಿ ಬದಲಾವಣೆ ಈ 6 ರಾಶಿಗಳ ಭಾಗ್ಯ ಬದಲಾಯಿಸಲಿದೆ title=
Budh Rashi Parivartan 2022

Mercury Transit in Taurus 2022: ಧನ, ಬುದ್ಧಿ ವ್ಯಾಪಾರ ಹಾಗೂ ಮಾತಿನ ಕಾರಕ ಗ್ರಹವಾಗಿರುವ ಬುಧ ಏಪ್ರಿಲ್ 25, 2022ರಂದು ತನ್ನ ರಾಶಿ ಬದಲಾಯಿಸಲಿದೆ. ಬುಧ ಶುಕ್ರನ ರಾಶಿಯಾಗಿರುವ ವೃಷಭ ರಾಶಿಗೆ ಪ್ರವೇಶಿಸಲಿದೆ. ಬುಧನ ಈ ರಾಶಿ ಪರಿವರ್ತನೆ ಹಲವು ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಶುಭ ದಿನಗಳನ್ನು ತರಲಿದೆ. ದೀರ್ಘಕಾಲದಿಂದ ತನ್ನ ವೃತ್ತಿ ಜೀವನ ಹಾಗೂ ಆರ್ಥಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಒಳ್ಳೆಯ ದಿನಗಳು ಕೂಡಿ ಬರಲಿವೆ. ಹಾಗಾದರೆ ಬನ್ನಿ ಯಾವ ರಾಶಿಗಳಿಗೆ ಬುಧನ ಈ ರಾಶಿ ಪರಿವರ್ತನೆ ಶುಭ ಸಾಬೀತಾಗಲಿದೆ ತಿಳಿದುಕೊಳ್ಳೋಣ. 

ಬುಧನ ರಾಶಿ ಪರಿವರ್ತನೆ ಈ ಜನರ ಭಾಗ್ಯ ಬದಲಾಯಿಸಲಿದೆ
ಮೇಷ ರಾಶಿ:
 ಮೇಷ ರಾಶಿಯ ಜಾತಕದವರಿಗೆ ಬುಧನ ಈ ಗೋಚರ ಅತ್ಯಂತ ಶುಭ ಸಾಬೀತಾಗಲಿದೆ. ಮೇಷ ರಾಶಿಯವರಿಗೆ ಧನಲಾಭದ ಜೊತೆಗೆ, ಅಪ್ರತ್ಯಕ್ಷ ರೂಪದಲ್ಲಿ ಧನಾಗಮನವಾಗಲಿದೆ. ಕೇವಲ ಮಾತಿನಲ್ಲಿಯೇ ನೀವು ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವಿರಿ. ವಕೀಲ, ಮಾಧ್ಯಮ, ಮಾರ್ಕೆಟಿಂಗ್, ಶಿಕ್ಷಣಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ಅತ್ಯುತ್ತಮ ಸಾಬೀತಾಗಲಿದೆ. ಶತ್ರುಗಳ ಮೇಲೆ ಹಿಡಿತ ಸಾಧಿಸುವಿರಿ. ಪ್ರೇಮಿಗಳಿಗೆ ಈ ಸಮಯ ಉತ್ತಮವಾಗಿರಲಿದೆ. ಸಂಗಾತಿಗೆ ಸಾಕಷ್ಟು ಸಮಯ ನೀಡಿ. 

ವೃಷಭ ರಾಶಿ : ನೌಕರಿಯ ಹುಡುಕಾಟದಲ್ಲಿರುವವರಿಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ವೃತ್ತಿ ಜೀವನದಲ್ಲಿ ಬಡ್ತಿಯ ಅವಕಾಶಗಳಿವೆ. ಹೊಸ ನೌಕರಿ ಸಿಗುವ ಅತ್ಯುತ್ತಮ ಸಂಕೇತಗಳು ಗೋಚರಿಸುತ್ತಿವೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ಹೊಸ ಮನೆ ಹಾಗೂ ನಿವೇಶನ ಖರೀದಿಸಲು ಬಯಸುವವರಿಗೆ ಈ ಸಮಯ ಉತ್ತಮವಾಗಿರಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಸಂಗಾತಿಯ ಸಾಥ್ ಸಿಗಲಿದೆ. 

ಕರ್ಕ ರಾಶಿ: ಕರ್ಕ ರಾಶಿಯ ಜಾತಕದವರಿಗೆ ಬುಧನ ಈ ರಾಶಿ ಪರಿವರ್ತನೆ ಧನ ಲಾಭ ನೀಡಲಿದೆ. ಎಲ್ಲಾ ಆಕಾಂಕ್ಷೆಗಳು ಪೂರ್ಣಗೊಳ್ಳಲಿವೆ. ಪದೋನ್ನತಿ-ವೇತನ ಹೆಚ್ಚಳದ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. ಹೂಡಿಕೆ ಮಾಡಲು ಬಯಸುವವರಿಗೆ ಈ ಸಮಯ ಉತ್ತಮವಾಗಿರಲಿದೆ. ಅದರಲ್ಲಿಯೂ ವಿಶೇಷವಾಗಿ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಉತ್ತಮ ಲಾಭ ಸಿಗಲಿದೆ. ಒಂದು ವೇಳೆ ನೀವು ಯಾವುದೇ ಹೊಸ ಕೆಲಸ ಆರಂಭಿಸಲು ಬಯಸುತ್ತಿದ್ದರೆ. ಸಮಯ ಉತ್ತಮವಾಗಿರಲಿದೆ.

ಸಿಂಹ ರಾಶಿ: ಸಿಂಹ ರಾಶಿಯ ಜಾತಕದವರಿಗೆ ಬುಧನ ಈ ರಾಶಿ ಪರಿವರ್ತನೆ ನೌಕರಿ-ವ್ಯಾಪಾರದಲ್ಲಿ ಸುವರ್ಣಾವಕಾಶಗಳನ್ನು ತರಲಿದೆ. ಹೊಸ ನೌಕರಿಯ ಅವಕಾಶ ಸಿಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ಪ್ರಮೋಶನ್-ಇನ್ಕ್ರಿಮೆಂಟ್ ಸಿಗುವ ಯೋಗವಿದೆ. ಹೊಸ ನೌಕರಿಯ ಅವಕಾಶ ಸಿಗುವ ಸಾಧ್ಯತೆ ಇದೆ. ಉದ್ಯಮದಲ್ಲಿ ತೊಡಗಿಸಿಕೊಂಡವರಿಗೆ ತಮ್ಮ ಉದ್ಯಮ ವಿಸ್ತರಣೆಯ ಅವಕಾಶ ಒದಗಿಬರಲಿದೆ. ದೊಡ್ಡ ಪ್ರಮಾಣದ ಆರ್ಡರ್ ಸಿಗುವ ಸಾಧ್ಯತೆ ಇದ್ದು, ದೀರ್ಘಕಾಲದಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ.

ಕನ್ಯಾ ರಾಶಿ: ನಿಮ್ಮ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಆದಾಯ ಹೆಚ್ಚಾಗಲಿದೆ. ಇನ್ನೊಂದೆಡೆ ಖರ್ಚು ಕೂಡ ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ನಿಮಗೆ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ಕುಟುಂಬ ಸದಸ್ಯರಿಗೆ ಪ್ರೀತಿ ಮತ್ತು ಗೌರವ ನೀಡಿ. ಜೀವನ ಖುಷಿಯಿಂದ ಕೂಡಿರಲಿದೆ. ಕೋಪದ ಮೇಲೆ ನಿಯಂತ್ರಣವಿರಲಿ.

ಇದನ್ನೂ ಓದಿ-Shukra Gochar April 2022: ಪ್ರೀತಿ-ಹಣ-ರೋಮಾನ್ಸ್ ನಿಂದ ತುಂಬಲಿದೆ ಈ 3 ರಾಶಿಗಳ ಜನರ ಜೀವನ

ಧನು ರಾಶಿ: ಧನು ರಾಶಿಯ ಜಾತಕದವರಿಗೆ ನೌಕರಿ-ವ್ಯಾಪಾರ ಎರಡರಲ್ಲಿಯೂ ಕೂಡ ಲಾಭ ಸಿಗಲಿದೆ. ಯಶಸ್ಸಿನ ಜೊತೆಗೆ ಆದಾಯ ಕೂಡ ಹೆಚ್ಚಾಗಲಿದೆ. ಉನ್ನತ ಹುದ್ದೆ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ವಿದ್ಯಾರ್ಥಿಗಳ ಶ್ರಮ ಹೆಚ್ಚಾಗಲಿದೆ. ಹೊಸ ಕೆಲಸ ಆರಂಭಿಸಲು ಈ ಸಮಯ ಉತ್ತಮವಾಗಿರಲಿದೆ. ಆದರೆ, ಸಂಪೂರ್ಣ ತನಿಖೆ ಹಾಗೂ ಸಿದ್ಧತೆಗಳ ನಂತರವೇ ಮುಂದಕ್ಕೆ ಅಡಿ ಇಡಿ. 

ಇದನ್ನೂ ಓದಿ-ASTROLOGY: ಮನೆ ಈ ಸದಸ್ಯರಿಂದ ಗ್ರಹಗಳ ಅಶುಭ ಪರಿಣಾಮ ಅಂತ್ಯವಾಗುತ್ತದೆ, ಹೇಗೆ?

(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News