ಬೆಂಗಳೂರು: Weight Loss Coffee- ಕರೋನಾವೈರಸ್ ಎಂಬ ಮಹಾಮಾರಿ ಇನ್ನೂ ಕೂಡ ಎಲ್ಲರಿಗೂ ತಲೆನೋವಾಗಿ ಕಾಡುತ್ತಿದೆ. ಇದರೊಂದಿಗೆ ಇತ್ತೀಚಿನ ಜೀವನಶೈಲಿಯಿಂದಾಗಿ ದೈಹಿಕ ಚಟುವಟಿಕೆ ಕಡಿಮೆಯಾಗಿದ್ದು ಇದು ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತಿದೆ. ಅದರಲ್ಲಿ ಬಹುತೇಕ ಮಂದಿಗೆ ಸಾಮಾನ್ಯವಾಗಿ ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದರೆ ತೂಕ ಹೆಚ್ಚಳ. ಹೆಚ್ಚುತ್ತಿರುವ ತೂಕದಿಂದ ನೀವು ಸಹ ತೊಂದರೆಗೀಡಾಗಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಈ ಸುದ್ದಿಯಲ್ಲಿ ತೂಕವನ್ನು ವೇಗವಾಗಿ ಕಡಿಮೆ ಮಾಡಲು ಮತ್ತು ಹೊಟ್ಟೆಯ ಕೊಬ್ಬನ್ನು ಕರಿಗಿಸಲು ಸಹಕಾರಿಯಾಗುವಂತಹ ಸಿಂಪಲ್ ಸಲಹೆಯನ್ನು ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ತೂಕ ಹೆಚ್ಚಾಗುವುದರಿಂದ ಅನೇಕ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಡಯಟ್ ತಜ್ಞರಾದ ಡಾ.ರಂಜನಾ ಸಿಂಗ್ ಹೇಳುತ್ತಾರೆ. ಇದಲ್ಲದೆ, ಮುಖ ಮತ್ತು ದೇಹದ ಸೌಂದರ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ತೂಕ ಹೆಚ್ಚಳದಿಂದ ನಿಮ್ಮ ವಯಸ್ಸು ಕೂಡ ಹೆಚ್ಚಾದಂತೆ ಕಾಣುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಉತ್ತಮ ಆರೋಗ್ಯಕ್ಕಾಗಿ ತೂಕವನ್ನು ಕಡಿಮೆ (Weight Loss) ಮಾಡುವುದು ಬಹಳ ಮುಖ್ಯವಾಗುತ್ತದೆ.


ಮ್ಯಾಜಿಕ್ ಬ್ಲ್ಯಾಕ್ ಕಾಫಿಯ (Black Coffee) ಸಹಾಯದಿಂದ ನೀವು ಕೆಲವೇ ದಿನಗಳಲ್ಲಿ ತೂಕವನ್ನು ಕಳೆದುಕೊಳ್ಳಬಹುದು. ಅದನ್ನು ಹೇಗೆ ತಯಾರಿಸಬೇಕು ಮತ್ತು ಹೇಗೆ ಸೇವಿಸಬೇಕು ಎಂದು ತಿಳಿಯಲು ಮುಂದೆ ಓದಿ...


ಇದನ್ನೂ ಓದಿ-  Healthy Diet: ಆಯುರ್ವೇದದ ಪ್ರಕಾರ, ಬೆಳಿಗ್ಗೆ ಉಪಹಾರದಲ್ಲಿ ಏನು ತಿನ್ನಬೇಕು? ಏನನ್ನು ತಿನ್ನಬಾರದು ಎಂದು ತಿಳಿಯಿರಿ


ಬ್ಲಾಕ್ ಕಾಫಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
* 1/2 ಕಪ್ ನೀರು
* 1 ಟೀಸ್ಪೂನ್ ಕಾಫಿ ಪುಡಿ
* 1 ಟೀಸ್ಪೂನ್ ಜಾಯಿಕಾಯಿ ಪುಡಿ
* 1 ಟೀಸ್ಪೂನ್ ಕೋಕೋ ಪೌಡರ್
* 1 ಟೀಸ್ಪೂನ್ ದಾಲ್ಚಿನ್ನಿ ಪುಡಿ
* 1 ಟೀಸ್ಪೂನ್ ತೆಂಗಿನ ಎಣ್ಣೆ


ಬ್ಲಾಕ್ ಕಾಫಿ ತಯಾರಿಸುವ ವಿಧಾನ:
>> ಮೊದಲಿಗೆ ನೀರನ್ನು ಕುದಿಸಿ ಮತ್ತು ಅದಕ್ಕೆ ಕಾಫಿ ಪುಡಿ ಸೇರಿಸಿ.
>> ಬಳಿಕ ಅದಕ್ಕೆ ಜಾಯಿಕಾಯಿ ಪುಡಿ, ಕೋಕೋ ಪೌಡರ್ ಮತ್ತು ದಾಲ್ಚಿನ್ನಿ ಪುಡಿ ಸೇರಿಸಿ
>> ಮೂರನ್ನೂ ಚೆನ್ನಾಗಿ ಮಿಶ್ರಣ ಮಾಡಿ.
>> ನಂತರ ಇದಕ್ಕೆ 1 ಟೀಸ್ಪೂನ್ ತೆಂಗಿನ ಎಣ್ಣೆ ಸೇರಿಸಿ.
>> ನಿಮ್ಮ ಮ್ಯಾಜಿಕ್ ಬ್ಲಾಕ್ ಕಾಫಿ ಈ ರೀತಿ ಸಿದ್ಧವಾಗಲಿದೆ
ವಾಕಿಂಗ್ ಅಥವಾ ವ್ಯಾಯಾಮ ಮಾಡುವ ಮೊದಲು ಬೆಳಿಗ್ಗೆ ಇದನ್ನು ಕುಡಿಯಿರಿ.


ಇದನ್ನೂ ಓದಿ- ಪ್ರತಿದಿನ 1 ಕಪ್ Coffee ಕುಡಿದು, ಈ ಮಾರಕ ಕಾಯಿಲೆಗಳಿಂದ ದೂರವಿರಿ


ಬ್ಲಾಕ್ ಕಾಫಿ ಸೇವನೆಯ ಅನುಕೂಲಗಳು :
1. ನೀವು ಪ್ರತಿದಿನ ಅರ್ಧ ಕಪ್ ಬ್ಲಾಕ್ ಕಾಫಿ (Black Coffee) ಕುಡಿಯುವುದರಿಂದ ನಿಮ್ಮ ಚರ್ಮವು ಯೌವ್ವನದಂತೆ ಉಳಿಯುತ್ತದೆ. ಕಾಫಿಯನ್ನು ವಿಶ್ವದ ಅತ್ಯುತ್ತಮ ಉತ್ಕರ್ಷಣ ನಿರೋಧಕವೆಂದು ಪರಿಗಣಿಸಲಾಗಿದೆ.


2. ಕಾಫಿಯಲ್ಲಿರುವ ಜಾಯಿಕಾಯಿ ಫೈಬರ್ನ ಉತ್ತಮ ಮೂಲವಾಗಿದೆ, ಇದು ತೂಕವನ್ನು ವೇಗವಾಗಿ ಕಡಿಮೆ ಮಾಡುತ್ತದೆ. ಇದರ ನಿಯಮಿತ ಸೇವನೆಯು ಹಸಿವನ್ನು ಕಡಿಮೆ ಮಾಡುತ್ತದೆ.


3. ದಾಲ್ಚಿನ್ನಿ ಕೊಬ್ಬನ್ನು ಕಡಿಮೆ ಮಾಡುವ ಹಾರ್ಮೋನುಗಳ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ತೂಕ ಕಡಿಮೆಯಾಗಲು ಪ್ರಾರಂಭಿಸುತ್ತದೆ.


4. ವರ್ಜಿನ್ ತೆಂಗಿನ ಎಣ್ಣೆ ಮತ್ತು ಕೋಕೋ ಪೌಡರ್ ಚಯಾಪಚಯವನ್ನು ಹೆಚ್ಚಿಸುತ್ತದೆ, ಇದು ವೇಗವಾಗಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.