ನವದೆಹಲಿ : ನೀವು ಸಹ ಕಾಫಿ ಕುಡಿಯಲು ಬಯಸಿದರೆ, ಈ ಸುದ್ದಿ ನಿಮಗೆ ಒಳ್ಳೆಯ ಸುದ್ದಿ ಆಗಲಿದೆ. ನೀವು ಕಾಫಿ ಕುಡಿಯದಿದ್ದರೆ, ಈ ಸುದ್ದಿಯನ್ನು ಓದಿದ ನಂತರ, ನೀವೂ ಸಹ ಖಂಡಿತವಾಗಿಯೂ ಕಾಫಿ ಕುಡಿಯಲು ಪ್ರಾರಂಭಿಸುತ್ತೀರಿ. ಆದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಏಕೈಕ ವಿಷಯವೆಂದರೆ ಒಂದು ಸೀಮಿತ ಪ್ರಮಾಣದಲ್ಲಿ ಕಾಫಿ ಕುಡಿಯಬೇಕು. ಹೊಸ ಅಧ್ಯಯನವು ಪ್ರತಿದಿನ 1 ಕಪ್ ಕಾಫಿ ಕುಡಿಯುವುದರಿಂದ ಹೃದಯ ವೈಫಲ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ.
ಕಾಫಿ ಹೃದಯ ವೈಫಲ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ:
ಹೃದ್ರೋಗಕ್ಕೆ ಸಂಬಂಧಿಸಿದ 3 ಪ್ರಮುಖ ಅಧ್ಯಯನಗಳನ್ನು ಪರಿಶೀಲಿಸಿದ ನಂತರ, ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರತಿದಿನ 1 ಕಪ್ ಅಥವಾ ಹೆಚ್ಚಿನ ಕೆಫೀನ್ ಕಾಫಿಯನ್ನು (Caffienated Coffee) ಕುಡಿಯುವುದರಿಂದ ಹೃದಯ ವೈಫಲ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸೂಚಿಸಿತು. ಅಧ್ಯಯನದ ಫಲಿತಾಂಶಗಳನ್ನು ನಂಬಬೇಕಾದರೆ, ಡಿಕೆಫೀನೇಟೆಡ್ ಕಾಫಿ (Coffee) ಅಂದರೆ ಕೆಫೀನ್ ಇಲ್ಲದೆ ಇರುವ ಕಾಫಿ ಕುರಿಯುವುದರಿಂದ ಈ ಪ್ರಯೋಜನಗಳು ಲಭ್ಯವಿರುವುದಿಲ್ಲ ಮತ್ತು ಹೃದಯ ವೈಫಲ್ಯದ ಅಪಾಯವು ಕಡಿಮೆಯಾಗುವುದಕ್ಕಿಂತ ಹೆಚ್ಚಾಗಬಹುದು ಎಂದು ತಿಳಿದುಬಂದಿದೆ.
ಕಾಫಿ ಮತ್ತು ಕೆಫೀನ್ ಹೃದಯಕ್ಕೆ ಕೆಟ್ಟದ್ದಲ್ಲ :
'ಕೆಫೀನ್ ಮತ್ತು ಹೃದಯ ವೈಫಲ್ಯದ ಅಪಾಯದ ನಡುವಿನ ಸಂಬಂಧ ಏನು ಎಂದು ತಿಳಿದರೆ ಆಶ್ಚರ್ಯವಾಯಿತು. ಹೆಚ್ಚಿನ ಜನರು ಕೆಫೀನ್ ಮತ್ತು ಕಾಫಿಯನ್ನು ಹೃದಯದ ಆರೋಗ್ಯಕ್ಕೆ ಕೆಟ್ಟದ್ದಾಗಿ ಪರಿಗಣಿಸುತ್ತಾರೆ. ಏಕೆಂದರೆ ಹೆಚ್ಚು ಕಾಫಿ ಕುಡಿಯುವುದರಿಂದ ಅಧಿಕ ರಕ್ತದೊತ್ತಡ (High Blood Pressure) ಮತ್ತು ಹೃದಯ ಬಡಿತದಂತಹ ಸಮಸ್ಯೆಗಳು ಉಂಟಾಗಬಹುದು. ಹೆಚ್ಚುತ್ತಿರುವ ಕೆಫೀನ್ ಬಳಕೆ ಮತ್ತು ಹೃದಯ ವೈಫಲ್ಯದ ಅಪಾಯ ಕಡಿಮೆಯಾಗುವುದರ ನಡುವಿನ ನಿರಂತರ ಸಂಬಂಧವು ಸಾಮಾನ್ಯ ಜನರ ಗ್ರಹಿಕೆಯನ್ನು ಬದಲಾಯಿಸುತ್ತಿದೆ. ಹೇಗಾದರೂ, ಹೃದಯವನ್ನು ಆರೋಗ್ಯಕರವಾಗಿಡುವ ವಿಷಯಕ್ಕೆ ಬಂದಾಗ, ಆರೋಗ್ಯಕರ ವಸ್ತುಗಳ ಬದಲಿಗೆ ನೀವು ಕಾಫಿಯನ್ನು ಕುಡಿಯಲು ಪ್ರಾರಂಭಿಸಿ ಎಂದು ಅರ್ಥವಲ್ಲ ಎಂದು ಈ ಅಧ್ಯಯನದ ಹಿರಿಯ ಲೇಖಕ ಡಾ. ಡೇವಿಡ್ ಕಾವೊ ಹೇಳುತ್ತಾರೆ.
ಇದನ್ನೂ ಓದಿ - Coffee ಚಟದಿಂದ ಉಂಟಾಗುವ ಅಡ್ಡಪರಿಣಾಮಗಳು ಮತ್ತದನ್ನು ತ್ಯಜಿಸುವ ಮಾರ್ಗಗಳಿವು
1 ಕಪ್ ಕಾಫಿ ಹೃದಯ ವೈಫಲ್ಯದ ಅಪಾಯವನ್ನು 12% ಕಡಿಮೆ ಮಾಡುತ್ತದೆ :
ಈ ಅಧ್ಯಯನದಲ್ಲಿ ಕಾವೊ ಮತ್ತು ಅವರ ಸಹೋದ್ಯೋಗಿಗಳು 3 ಪ್ರಮುಖ ಅಧ್ಯಯನಗಳಲ್ಲಿ ಭಾಗಿಯಾಗಿರುವ 21 ಸಾವಿರಕ್ಕೂ ಹೆಚ್ಚು ಅಮೆರಿಕನ್ ವಯಸ್ಕರ ಡೇಟಾವನ್ನು ಪರಿಶೀಲಿಸಿದರು. ಅಧ್ಯಯನದಲ್ಲಿ ಭಾಗವಹಿಸಿದವರನ್ನು 10 ವರ್ಷಗಳವರೆಗೆ ಮೇಲ್ವಿಚಾರಣೆ ಮಾಡಲಾಯಿತು. ಎಲ್ಲಾ ಮೂರು ಅಧ್ಯಯನಗಳಲ್ಲಿ 1 ಅಥವಾ ಹೆಚ್ಚಿನ ಕಪ್ ಕೆಫೀನ್ ಕಾಫಿಯನ್ನು ಪ್ರತಿದಿನ ಕುಡಿಯುವುದು ದೀರ್ಘಾವಧಿಯಲ್ಲಿ ಹೃದಯ ವೈಫಲ್ಯದ ಕಡಿಮೆ ಅಪಾಯಕ್ಕೆ ಸಂಬಂಧಿಸಿದೆ ಎಂದು ಕಂಡುಬಂದಿದೆ. ಕಾಫಿ ಕುಡಿಯದವರಿಗೆ ಹೋಲಿಸಿದರೆ ಪ್ರತಿದಿನ 1 ಕಪ್ ಕಾಫಿ ಕುಡಿಯುವವರಲ್ಲಿ ಹೃದಯ ವೈಫಲ್ಯದ ಅಪಾಯವು 5 ರಿಂದ 12 ರಷ್ಟು ಕಡಿಮೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ - Coffee ಸೇವಿಸುವುದನ್ನು ಬಿಟ್ಟು ಕೋಟ್ಯಾಧಿಪತಿಯಾಗುವ ಸರಳ ಸೂತ್ರ ಇಲ್ಲಿದೆ
ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ನ ಪೆನ್ನಿ ಕ್ರಿಸ್-ಅಥರ್ಟನ್ ಪ್ರಕಾರ, ಸಕ್ಕರೆ ಮತ್ತು ಕೆನೆ ಇಲ್ಲದೆ ಸರಳವಾದ ಕಾಫಿಯನ್ನು ಸೇವಿಸಿ, ಆದರೆ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಹಾಗೆಯೇ ಆರೋಗ್ಯಕರ ಹೃದಯ ಆಹಾರಗಳಾದ ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು, ಕಡಿಮೆ ಕೊಬ್ಬಿನ ಅಂಶಗಳನ್ನು ಹೊಂದಿರುವ ಡೈರಿ ಪದಾರ್ಥಗಳು ಹಾಗೂ ಕಡಿಮೆ ಸೋಡಿಯಂ ಮತ್ತು ಕಡಿಮೆ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಆಹಾರವನ್ನು ಸೇವಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.