Weight Loss Foods: ತೂಕ ನಷ್ಟಕ್ಕೆ ಹಾಲು-ಮೊಸರಿನಲ್ಲಿ ಯಾವುದು ಉತ್ತಮ
Weight Loss Foods: ತೂಕ ಕಡಿಮೆ ಮಾಡಲು ಇಚ್ಚಿಸುವವರು ತಮ್ಮ ಡಯಟ್ನಲ್ಲಿ ಆರೋಗ್ಯಕರ ಆಹಾರಗಳನ್ನು ಸೇರಿಸುವುದು ಬಹಳ ಮುಖ್ಯ. ಕೆಲವು ಡೈರಿ ಉತ್ಪನ್ನಗಳು ಸಹ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಲಾಗುತ್ತದೆ.
ತೂಕ ಇಳಿಕೆಗೆ ಹಾಲು- ಮೊಸರು: ಕರೋನವೈರಸ್ ಮತ್ತು ಲಾಕ್‌ಡೌನ್ ಬಳಿಕ ಎಲ್ಲೆಡೆ ಜಾರಿಗೆ ತರಲಾದ ವರ್ಕ್ ಫ್ರಮ್ ಹೋಂ ಸಂಸ್ಕೃತಿಯಿಂದಾಗಿ ಜನರಲ್ಲಿ ತೂಕ ಹೆಚ್ಚಳ ಸಮಸ್ಯೆ ಹಿಂದೆಂದಿಗಿಂತ ತುಂಬಾ ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ದೈಹಿಕ ಚಟುವಟಿಕೆಗಳು ಗಮನಾರ್ಹವಾಗಿ ಕಡಿಮೆಯಾಗಿದೆ ಮತ್ತು ಇದು ತೂಕದ ಮೇಲೆ ನೇರ ಪರಿಣಾಮ ಬೀರಿತು. ಇದು ಮಾತ್ರವಲ್ಲದೆ ತೂಕ ಹೆಚ್ಚಳಕ್ಕೆ ಹಲವು ಕಾರಣಗಳಿರಬಹುದು. ಆದರೆ, ತೂಕ ಕಡಿಮೆ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಆಗತ್ಯವಿರುತ್ತದೆ. ಫಿಟ್ ಆಗಿರಲು ಆರೋಗ್ಯಕರ ಆಹಾರ, ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ. ಕೆಲವು ಡೈರಿ ಉತ್ಪನ್ನಗಳು ಸಹ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಲಾಗುತ್ತದೆ. ಅಂತಹ ಆಹಾರ ಪದಾರ್ಥದ ಬಗ್ಗೆ ತಿಳಿಯೋಣ...
ಸಾಮಾನ್ಯವಾಗಿ, ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಹಾಲು ಕುಡಿಯುವುದನ್ನು ತಪ್ಪಿಸುತ್ತೇವೆ. ಹಲವರು ಮೊಸರು ಸೇವನೆಯನ್ನೂ ಕಡಿಮೆ ಮಾಡುತ್ತಾರೆ. ಇನ್ನೂ ಕೆಲವರಲ್ಲಿ ತೂಕ ಇಳಿಸಿಕೊಳ್ಳಲು ಹಾಲು ಮತ್ತು ಮೊಸರಿನಂತಹ ಡೈರಿ ಉತ್ಪನ್ನಗಳನ್ನು ತಿನ್ನಬೇಕೇ ಅಥವಾ ಬೇಡವೇ ಎಂಬ ಗೊಂದಲವೂ ಇರುತ್ತದೆ. ಹಾಲು ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಆದರೆ ಅದರಲ್ಲಿ ಕೊಬ್ಬಿನಂಶವಿದೆ, ಆದ್ದರಿಂದ ಇದು ತೂಕವನ್ನು ಹೆಚ್ಚಿಸಬಹುದೇ? ಈ ಬಗ್ಗೆ ಖ್ಯಾತ ಪೌಷ್ಟಿಕಾಂಶ ತಜ್ಞ 'ನಿಖಿಲ್ ವಾಟ್ಸ್' ಏನು ಹೇಳುತ್ತಾರೆಂದು ತಿಳಿಯೋಣ...
ತೂಕ ಇಳಿಸಲು ಹಾಲು- ಮೊಸರು ಇವೆರಡರಲ್ಲಿ ಯಾವುದು ಬೆಸ್ಟ್ ?
ಉತ್ತಮ ಜೀರ್ಣಕ್ರಿಯೆಗೆ ಮೊಸರು ಅತ್ಯಂತ ಪರಿಣಾಮಕಾರಿ ಆಹಾರವಾಗಿದೆ, ಇದರಲ್ಲಿರುವ ಪೋಷಕಾಂಶಗಳು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ, ಜೊತೆಗೆ ಇದು ಹೊಟ್ಟೆಯನ್ನು ತಂಪಾಗಿರಿಸುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ, ತೂಕ ಇಳಿಸುವ ಪ್ರಕ್ರಿಯೆಯಲ್ಲಿ ನೀವು ಹಾಲಿಗೆ ಬದಲಾಗಿ ಮೊಸರಿಗೆ ಆದ್ಯತೆ ನೀಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ನೀವು ಕಪ್ಪು ಉಪ್ಪಿನೊಂದಿಗೆ ಮೊಸರು ತಿನ್ನುವುದು ಉತ್ತಮ.
ಇದನ್ನೂ ಓದಿ- Meningococcal: ಕೊರೊನಾ - ಮಂಕಿಪಾಕ್ಸ್ ನಡುವೆ ಮತ್ತೊಂದು ಮಾರಣಾಂತಿಕ ವೈರಸ್ ಪತ್ತೆ
ಒಬ್ಬ ವ್ಯಕ್ತಿಯು ತೂಕವನ್ನು ಕಳೆದುಕೊಳ್ಳುವ ಪ್ರಕ್ರಿಯೆಯಲ್ಲಿದ್ದರೆ ಮತ್ತು ವ್ಯಾಯಾಮವನ್ನು ಮಾಡುತ್ತಿದ್ದರೆ, ಅವನು ಆಗಾಗ್ಗೆ ಹಾಲು ಮತ್ತು ಹಣ್ಣುಗಳನ್ನು ಸೇವಿಸುತ್ತಾರೆ. ಆದರೆ ಹಾಲು ಮತ್ತು ಹಣ್ಣುಗಳನ್ನು ಒಟ್ಟಿಗೆ ಸೇವಿಸದಂತೆ ನೋಡಿಕೊಳ್ಳ.ಿ ಏಕೆಂದರೆ ಹಾಲಿನೊಂದಿಗೆ ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.
ನೀವು ತೂಕ ಇಳಿಸಿಕೊಳ್ಳಬೇಕೆಂದರೆ ಹಸಿರು ಸೊಪ್ಪಿನ ತರಕಾರಿಗಳನ್ನು ಸೇವಿಸಲೇಬೇಕು ಆದರೆ ಇದರೊಂದಿಗೆ ಮೊಸರನ್ನು ಸೇರಿಸಿಕೊಂಡರೆ ಕರುಳಿನ ಆರೋಗ್ಯ ಚೆನ್ನಾಗಿರುವುದರ ಜೊತೆಗೆ ತೂಕವೂ ಬೇಗ ಕಡಿಮೆಯಾಗುತ್ತದೆ.
ಮೊಸರು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಬಹಳ ಮುಖ್ಯವಾದ ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ, ಅವು ಪೌಷ್ಟಿಕಾಂಶ ಮತ್ತು ಆಹಾರ ಪದಾರ್ಥಗಳಲ್ಲಿ ಕಂಡುಬರುವುದಿಲ್ಲ, ಆದರೆ ಮೊಸರು ತುಂಬಾ ಅಗ್ಗದ ಆಯ್ಕೆಯಾಗಿದೆ.
ಇದನ್ನೂ ಓದಿ- Yellow Teeth: ಹಳದಿ ಹಲ್ಲುಗಳಿಗೆ ಸರಳ ಮನೆಮದ್ದು!
ತೂಕ ನಷ್ಟದ ಸಮಯದಲ್ಲಿ, ನೀವು ಅನೇಕ ರೀತಿಯ ವ್ಯಾಯಾಮಗಳನ್ನು ಮಾಡುತ್ತೀರಿ, ಇದಕ್ಕಾಗಿ ಬಲವಾದ ಮೂಳೆಗಳನ್ನು ಹೊಂದಿರುವುದು ಮುಖ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮಗೆ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಅಗತ್ಯವಿರುತ್ತದೆ, ಇದನ್ನು ಹಾಲಿನ ಮೂಲಕ ಪಡೆಯಬಹುದು, ಈ ಪೋಷಕಾಂಶವು ಮೊಸರಿನಲ್ಲಿ ಸ್ವಲ್ಪ ಕಡಿಮೆ ಕಂಡುಬರುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.