ಹೊಸ ವೈರಸ್ ಆತಂಕ: ಕರೋನಾವೈರಸ್, ಮಂಕಿಪಾಕ್ಸ್ ನಡುವೆ ಇದೀಗ ಮತ್ತೊಂದು ಮಾರಣಾಂತಿಕ ವೈರಸ್ ಪತ್ತೆ ಆಗಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಫ್ಲೋರಿಡಾದಲ್ಲಿ ಸಲಿಂಗಕಾಮಿಗಳಲ್ಲಿ ಮೆನಿಂಗೊಕೊಕಲ್ ಕಾಯಿಲೆಯ ಕೆಟ್ಟ ಏಕಾಏಕಿ ತನಿಖೆ ನಡೆಸುತ್ತಿದೆ ಎಂದು ಹೇಳಿದೆ. ಈ ಕಾಯಿಲೆಯಿಂದ ಇಲ್ಲಿಯವರೆಗೆ 6 ಸಲಿಂಗಕಾಮಿಗಳು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಹೆಲ್ತ್ ಏಜೆನ್ಸಿ ಹೇಳಿದೆ. ಇದರೊಂದಿಗೆ 24 ಪ್ರಕರಣಗಳು ವರದಿಯಾಗಿವೆ.
ಲಸಿಕೆಗೆ ಶಿಫಾರಸು:
ಈ ಗಂಭೀರ ರೋಗವನ್ನು ತಡೆಗಟ್ಟಲು ಮೆನಿಂಗೊಕೊಕಲ್ ವಿರುದ್ಧ ವ್ಯಾಕ್ಸಿನೇಷನ್ ಉತ್ತಮ ಮಾರ್ಗವಾಗಿದೆ. ಸಿಡಿಸಿ ಸಲಿಂಗಕಾಮಿಗಳಿಗೆ ಮೆನಿಂಗೊಕೊಕಲ್ ಮೆನಾಸಿಡಬ್ಲ್ಯುವೈ ಲಸಿಕೆಯನ್ನು ಶಿಫಾರಸು ಮಾಡುತ್ತದೆ ಎಂದು ಯುಎಸ್ ನ್ಯಾಷನಲ್ ಸೆಂಟರ್ ಫಾರ್ ಇಮ್ಯುನೈಸೇಶನ್ ಮತ್ತು ರೆಸ್ಪಿರೇಟರಿ ಡಿಸೀಸ್‌ನ ನಿರ್ದೇಶಕ ಜೋಸ್ ಆರ್ ರೊಮೆರೊ ಹೇಳಿದ್ದಾರೆ. ಈ ರೋಗ ಬಹುಬೇಗ ಮಾರಣಾಂತಿಕವಾಗುತ್ತಿದೆ ಎಂದು ರೊಮೆರೊ ಹೇಳಿದ್ದಾರೆ.
ಇದನ್ನೂ ಓದಿ- Coronavirus 4th Wave: ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಶುರುವಾಗಿದೆಯೇ? ಅಂಕಿಅಂಶಗಳು ಏನು ಹೇಳುತ್ತಿವೆ?
ಸಲಿಂಗಕಾಮಿ ಪುರುಷರಿಗೆ ಲಸಿಕೆ ಅಗತ್ಯ:
ಫ್ಲೋರಿಡಾದಲ್ಲಿ ಕಂಡು ಬಂದಿರುವ ಈ ಏಕಾಏಕಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಹರಡುವ ಭೀತಿ ಇದ್ದು, ಫ್ಲೋರಿಡಾದಲ್ಲಿ ವಾಸಿಸುವ ಸಲಿಂಗಕಾಮಿ ಪುರುಷರು ಲಸಿಕೆ ಪಡೆಯುವುದು ಮುಖ್ಯ ಎಂದು ರೊಮೆರೊ ಸಲಹೆ ನೀಡಿದ್ದಾರೆ.
ಮೆನಿಂಗೊಕೊಕಲ್ ಕಾಯಿಲೆಯ ರೋಗಲಕ್ಷಣಗಳು :
ಮೆನಿಂಗೊಕೊಕಲ್ ರೋಗಲಕ್ಷಣಗಳು ಅಧಿಕ ಜ್ವರ, ತಲೆನೋವು, ಗಂಟಲು ನೋವು, ವಾಕರಿಕೆ ಮತ್ತು ಕಡು ನೇರಳೆ ದದ್ದುಗಳನ್ನು ಒಳಗೊಂಡಿರುತ್ತದೆ. ಇದು ಮೊದಲು ಜ್ವರ ತರಹದ ಕಾಯಿಲೆಯಾಗಿ ಕಾಣಿಸಿಕೊಳ್ಳುತ್ತದೆ ಎಂದು ಸಿಡಿಸಿ ಹೇಳಿದೆ. ಜನರು ಉಸಿರಾಟದ ಮತ್ತು ಗಂಟಲಿನ ಸೋಂಕಿನ ಮೂಲಕ ಮೆನಿಂಗೊಕೊಕಲ್ ಬ್ಯಾಕ್ಟೀರಿಯಾವನ್ನು ಇತರರಿಗೆ ಹರಡಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ- Covid-19: : ಓಮಿಕ್ರಾನ್‌ನ ಉಪ-ರೂಪಾಂತರಗಳಾದ BA.4, BA.5 ಎಷ್ಟು ಅಪಾಯಕಾರಿ?
ಮನುಷ್ಯರಿಗೆ ಅಪಾಯಕಾರಿ :
ಸಿಡಿಸಿ ಪ್ರಕಾರ, ಮೆನಿಂಗೊಕೊಕಲ್ ಕಾಯಿಲೆಯು ಯಾರ ಮೇಲೂ ಪರಿಣಾಮ ಬೀರಬಹುದು ಮತ್ತು ರಕ್ತಪ್ರವಾಹ ಸೇರಿದಂತೆ ಮೆದುಳು ಮತ್ತು ಬೆನ್ನುಹುರಿಯ ಸೋಂಕನ್ನು ಉಂಟುಮಾಡಬಹುದು. ಲಸಿಕೆಯನ್ನು ಪಡೆಯುವುದು ರೋಗದ ವಿರುದ್ಧ ಉತ್ತಮ ರಕ್ಷಣೆಯಾಗಿದೆ ಎಂದು ಸಿಡಿಸಿ ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.