ನವದೆಹಲಿ: ನಾವು ಪ್ರತಿನಿತ್ಯ ಸೇವಿಸುವ ಆಹಾರ(Food)ದಲ್ಲಿ ಸಾಕಷ್ಟು ರೀತಿಯ ಕಲ್ಮಶಗಳು ದೇಹದ ಒಳಸೇರುತ್ತದೆ. ಯೂರಿಯಾ, ಯೂರಿಕ್ ಆಸಿಡ್, ಕ್ರಿಯೇಟಿನೈನ್, ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವ, ಸತ್ತ ಚರ್ಮದ ಜೀವಕೋಶಗಳು ಮತ್ತು ಕೈಗಾರಿಕಾ ವಿಷಗಳಂತಹ ಹಲವಾರು ಕಲ್ಮಶಗಳು ದೇಹದಲ್ಲಿರುತ್ತದೆ. ಇದರಿಂದ ನಮ್ಮ ದೇಹಕ್ಕೆ ಆಯಾಸವಾಗಿ ನಾನಾ ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ. ಇದರಲ್ಲಿ ನೀದ್ರಾಹಿನತೆ, ಕರುಳಿಗೆ ಸಂಬಂಧಪಟ್ಟ ಸಮಸ್ಯೆ, ಚರ್ಮಕ್ಕೆ ಸಂಬಂಧಿಸಿದ ಅನೇಕ ರೀತಿಯ ತೊಂದರೆಗಳು(Health Diseases) ಕಾಣಿಸಿಕೊಳ್ಳುತ್ತವೆ.


COMMERCIAL BREAK
SCROLL TO CONTINUE READING

ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ನಾವು ಬಲಿಯಾಗಬಾರದು ಎಂದರೆ ದೇಹದಲ್ಲಿರುವ ಕಲ್ಮಶ ಹೊರಹಾಕಬೇಕು. ಇದಕ್ಕೆ ನಾವು ಏನು ಮಾಡಬೇಕು? ಯಾವ ರೀತಿಯ ಮನೆಮದ್ದುಗಳನ್ನು ಟ್ರೈ ಮಾಡಬೇಕು..? ದೇಹದಲ್ಲಿರುವ ಕಲುಷಿತ ಪದಾರ್ಥಗಳನ್ನು ಹೊರ ಹಾಕಿ, ದೇಹದ ಅತಿಯಾದ ತೂಕ ಇಳಿಸಿಕೊಳ್ಳಲು(Weight loss) ನಾವು ಸೂಚಿಸುವ 3 ಪಾನೀಯಗಳನ್ನು ಸೇವಿಸಿ ನೋಡಿ. ಪ್ರತಿನಿತ್ಯ ಈ ಪಾನೀಯಗಳನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ ಜೊತೆಗೆ ಅನೇಕ ಕಾಯಿಲೆಗಳು ಕೂಡ ದೂರವಾಗುತ್ತವೆ.


ಇದನ್ನೂ ಓದಿ: Tulsi ಹಾಗೂ ಎಲೋವೆರಾ ಈ ರೀತಿ ಬಳಸಿದರೆ, Thyroid ನಿಮಗೆ ಸಮಸ್ಯೆಯಾಗಿ ಉಳಿಯದು


1) ನಿಂಬೆ ಮತ್ತು ಶುಂಠಿ


1 ಲೀಟರ್ ನೀರಿಗೆ ಅರ್ಧ ಹೊಳು ನಿಂಬೆ ಹಣ್ಣಿನ ತುಂಡುಗಳು ಹಾಗೂ ಒಂದಿಂಚು ಜಜ್ಜಿದ ಶುಂಠಿಯನ್ನು ನೀರಿನೊಳಗೆ ಹಾಕಿ ಆ ನೀರನ್ನು ಕುಡಿಯುವುದರಿಂದ ದೇಹದ ಕಲ್ಮಶ ಹೊರಹೊಗಿ ಆಯಾಸ ದೂರವಾಗುತ್ತದೆ.


2) ಸೌತೆಕಾಯಿ ಮತ್ತು ಪುದೀನ


ನೀವು ಪ್ರತಿದಿನ ಕುಡಿಯುವ ನೀರಿನ ಬಾಟಲ್‍ಗೆ 10 ಸೌತೆಕಾಯಿ ಪೀಸ್‍ಗಳನ್ನು ಸೇರಿಸಿ ಮತ್ತು 15 ಎಲೆ ಪುದೀನವನ್ನು ಸೇರಿಸಿ ಕುಡಿಯುತ್ತ(Health Drink)ಬನ್ನಿ. ಇದರಿಂದ ನಿಮ್ಮ ಕರುಳಿನಲ್ಲಿರುವ ಸಣ್ಣ ಸಣ್ಣ ಧೂಳಿನ ಕಣಗಳು ದೇಹದಿಂದ ಹೊರಬಂದು ದೇಹಕ್ಕೆ ಚೈತನ್ಯ ಮತ್ತು ಉಲ್ಲಾಸ ನೀಡುತ್ತದೆ.


3) ಕಾಮ ಕಸ್ತೂರಿ ಬೀಜ ಮತ್ತು ಚಕ್ಕೆ, ಲವಂಗ 


ಈ ಡಿಟಾಕ್ಸ್ ಡ್ರಿಂಕ್(Detox Drinks) ಗಳು ನಿಮ್ಮ ಜೀರ್ಣಕ್ರಿಯೆಗೆ ಉತ್ತಮ. ಇನ್ನೂ ನಿಮ್ಮ ಜೀರ್ಣಕ್ರಿಯೆಯು ಉತ್ತಮವಾಗಿದ್ದರೆ ತೂಕ ನಷ್ಟಕ್ಕೂ ಬಹಳ ಸುಲಭವಾಗುತ್ತದೆ. ಡಿಟಾಕ್ಸ್ ಡ್ರಿಂಕ್ ಗಳು ದೇಹದಿಂದ ವಿಷವನ್ನು ಹೊರಹಾಕಿ, ದೇಹದ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರತಿದಿನ ನೀವು ಕುಡಿಯುವ ನೀರಿನ ಪಾತ್ರೆಗೆ ಕಾಮ ಕಸ್ತೂರಿ ಬೀಜ, ಚಕ್ಕೆ ಮತ್ತು ಲವಂಗವನ್ನು ಒಂದು ಗಂಟೆ ಮುಂಚೆ ನೆನೆಹಾಕಿ ಕುಡಿಯುತ್ತ ಬಂದರೆ ಮುಂದೆ ಎದುರಾಗುವ ಅನೇಕ ರೀತಿಯ ಮಾರಣಾಂತಿಕ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು.  


ಇದನ್ನೂ ಓದಿ: ಡಯಾಬಿಟೀಸ್ ರೋಗಿಗಳು ಕಬ್ಬಿನ ಹಾಲು ಸೇವಿಸಬಹುದೇ ? ಏನೆನ್ನುತ್ತಾರೆ ತಜ್ಞರು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.