ನವದೆಹಲಿ: ಇಲ್ಲಿಯವರೆಗೆ ನೀವು ತರಕಾರಿಗಳು, ಸಲಾಡ್‌ಗಳಲ್ಲಿ ಎಲೆಕೋಸು ಬಳಸುತ್ತಿದ್ದೀರಿ. ಆದರೆ ಎಲೆಕೋಸು ಜ್ಯೂಸ್ ಸೇವನೆಯಿಂದ ನೀವು ಹಲವಾರು ಪ್ರಯೋಜನ ಪಡೆಯಬಹುದು. ಏಕೆಂದರೆ ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಇ ಮುಂತಾದ ಹಲವು ಪೋಷಕಾಂಶಗಳು ಎಲೆಕೋಸಿನ ರಸದಲ್ಲಿ ಕಂಡುಬರುತ್ತವೆ. ಅದೇ ರೀತಿ ಎಲೆಕೋಸು ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ. ನೀವು ಪ್ರತಿದಿನ ಎಲೆಕೋಸು ಜ್ಯೂಸ್ ಸೇವಿಸಿದ್ರೆ ಯಾವ ಪ್ರಯೋಜನಗಳಿವೆ ಎಂಬುದನ್ನು ತಿಳಿಯಿರಿ.


COMMERCIAL BREAK
SCROLL TO CONTINUE READING

ಎಲೆಕೋಸು ಜ್ಯೂಸ್‍ನ ಪ್ರಯೋಜನಗಳು


1. ರಕ್ತದೊತ್ತಡ ನಿಯಂತ್ರಿಸುತ್ತದೆ


ಎಲೆಕೋಸಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಇದೆ, ಇದು ಹೆಚ್ಚಿನ ಕೊಲೆಸ್ಟ್ರಾಲ್ ನಿಯಂತ್ರಿಸಲು ಕೆಲಸ ಮಾಡುತ್ತದೆ. ಈ ರೀತಿ ರಕ್ತದೊತ್ತಡದ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ನೀವು ಪ್ರತಿದಿನ ಎಲೆಕೋಸು ಜ್ಯೂಸ್ ಸೇವಿಸಬಹುದು.


ಇದನ್ನೂ ಓದಿ: High BP : ಅಧಿಕ ರಕ್ತದೊತ್ತಡವನ್ನು ತಕ್ಷಣವೇ ನಿಯಂತ್ರಿಸುತ್ತೆ ಈ ತರಕಾರಿ ಜ್ಯೂಸ್‌


2. ತೂಕ ಕಡಿಮೆ ಮಾಡಲು ಸಹಕಾರಿ


ಎಲೆಕೋಸು ಜ್ಯೂಸ್ ಕುಡಿಯುವ ಮೂಲಕ ನಿಮ್ಮ ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಮತ್ತೊಂದೆಡೆ ನೀವು ಪ್ರತಿದಿನ ಎಲೆಕೋಸು ಜ್ಯೂಸ್ ಸೇವಿಸಿದ್ರೆ ಬೊಜ್ಜು, ಗ್ಯಾಸ್ ಸಮಸ್ಯೆ ಮತ್ತು ಇತರ ಅನೇಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.


3. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ


ಎಲೆಕೋಸಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಅದೇ ರೀತಿ ವಿಟಮಿನ್ ಸಿ ರೋಗನಿರೋಧಕ ಶಕ್ತಿ ಬಲಪಡಿಸಲು ಸಹಕಾರಿ. ನಿಮ್ಮ ಆಹಾರದಲ್ಲಿ ಎಲೆಕೋಸು ಜ್ಯೂಸ್ ಸೇರಿಸಿದರೆ ನಿಮ್ಮ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ.


ಇದನ್ನೂ ಓದಿ: Cancer ಕಾಯಿಲೆಯಿಂದ ಹಿಡಿದು ಮಧುಮೇಹದವರೆಗೆ ಹಲವು ಕಾಯಿಲೆ ನಿವಾರಣೆಗೆ ವರದಾನ 'ಸಿಹಿ ತುಳಸಿ'!


ಎಲೆಕೋಸು ಜ್ಯೂಸ್ ಹೀಗೆ ತಯಾರಿಸಿರಿ


ಎಲೆಕೋಸು ಜ್ಯೂಸ್ ಮಾಡಲು ಮೊದಲು ಎಲೆಕೋಸು ಕತ್ತರಿಸಿ ಶುದ್ಧ ನೀರಿನಿಂದ ತೊಳೆಯಿರಿ. ಈಗ ಬ್ಲೆಂಡರ್ನಲ್ಲಿ ಎಲೆಕೋಸು ಮತ್ತು ಸ್ವಲ್ಪ ನೀರು ಹಾಕಿ. ಈಗ ಜರಡಿಯಿಂದ ಶೋಧಿಸಿ, ಬೇಕಿದ್ದರೆ ಅದಕ್ಕೆ ನಿಂಬೆಯನ್ನೂ ಹಾಕಬಹುದು. ಜ್ಯೂಸ್‍ಗೆ ಕಪ್ಪು ಉಪ್ಪನ್ನು ಕೂಡ ಬಳಸಬಹುದು. ಎಲೆಕೋಸು ರಸವನ್ನು ಈ ರೀತಿಯಲ್ಲಿ ತಯಾರಿಸಲಾಗುತ್ತದೆ.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಸಲಹೆ ಪಾಲಿಸುವ ಮೊದಲು ವೈದ್ಯರ ಸಲಹೆ ಪಾಲಿಸಿರಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ