Weight Loss Tips: ತೂಕ ಇಳಿಕೆಗೆ ನಿಮ್ಮ ನಿಯಮಿತ ಆಹಾರದಲ್ಲಿರಲ್ಲಿ ಈ ಬೇಳೆ, ಸೇವಿಸುವ ವಿಧಾನ ಇಲ್ಲಿದೆ!
Weight Loss Remedies: ಹೆಸರು ಬೇಳೆ ಸೇವನೆಯು ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಬನ್ನಿ, ಮೂಂಗ್ ದಾಲ್ ಅಥವಾ ಹೆಸರು ಬೇಳೆಯನ್ನು(incude moong dal in your daily diet for weight loss) ನಮ್ಮ ಆಹಾರದಲ್ಲಿ ಹೇಗೆ ಶಾಮೀಲುಗೊಳಿಸಬೇಕು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)
ನವದೆಹಲಿ: ತೂಕ ಇಳಿಸಿಕೊಳ್ಳಲು ಜನರು ಏನೆಲ್ಲಾ ಮಾಡುವುದಿಲ್ಲ? ಇದಕ್ಕಾಗಿ ಅನೇಕ ಜನರು ವಿವಿಧ ರೀತಿಯ ಆಹಾರಕ್ರಮವನ್ನು ಅನುಸರಿಸುತ್ತಾರೆ ಮತ್ತು ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುತ್ತಾರೆ. ಆದರೆ ತೂಕವನ್ನು ಇಳಿಸಿಕೊಳ್ಳಲು ನೀವು ಯಾವುದೇ ಸುಧಾರಿತ ಆಹಾರ ಸೇವಿಸುವ ಅವಶ್ಯಕತೆ ಇಲ್ಲ. ಸರಳವಾದ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸುವ ಮೂಲಕ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ಅನೇಕ ವಿಷಯಗಳಿವೆ, ಇದರ ನಿಯಮಿತ ಸೇವನೆಯು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಈ ವಸ್ತುಗಳ ಪಟ್ಟಿಯಲ್ಲಿ ಹೆಸರು ಬೆಳೆ ಹೆಸರು ಕೂಡ ಶಾಮೇಲಾಗಿದೆ. ಹೌದು, ತೂಕವನ್ನು ಕಳೆದುಕೊಳ್ಳಲು ಹೆಸರು ಬೇಳೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ (incude moong dal in your daily diet for weight loss), ಇದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ತೂಕ ಇಳಿಕೆಗೂ ಕೂಡ ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಂಶವೂ ಇದ್ದು, ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಇದನ್ನು ತಿನ್ನುವುದರಿಂದ ಮತ್ತೆ ಮತ್ತೆ ಹಸಿವಾಗುವುದಿಲ್ಲ, ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ನಿಮ್ಮ ಹೆಚ್ಚುತ್ತಿರುವ ತೂಕವನ್ನು ಸಹ ನೀವು ನಿಯಂತ್ರಿಸಲು ಬಯಸಿದರೆ, ನಿಮ್ಮ ಆಹಾರದಲ್ಲಿ ಖಂಡಿತವಾಗಿಯೂ ಹೆಸರು ಬೇಳೆಯನ್ನು ಸೇರಿಸಿ. ಬನ್ನಿ, ತೂಕ ಇಳಿಸಲು ಹೆಸರು ಬೇಳೆಯನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ. (Lifestyle News In Kannada)
ಹೆಸರು ಬೇಳೆ ಚಿಲ್ಲಾ (yellow moong dal for weight loss)
ಹೆಸರು ಬೇಳೆ ಚಿಲ್ಲಾ ತೂಕ ಇಳಿಕೆಗೆ ಒಂದು ಆರೋಗ್ಯಕರ ಮತ್ತು ಟೇಸ್ಟಿ ಉಪಹಾರ ಆಯ್ಕೆಯಾಗಿದೆ. ಇದನ್ನು ಮಾಡಲು, ಹೆಸರು ಬೇಳೆಯನ್ನು ನೀರಿನಲ್ಲಿ ನೆನೆಸಿ ನಂತರ ಅದನ್ನು ಮ್ಯಾಶ್ ಮಾಡಿ. ನಂತರ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ, ಹಸಿರು ಕೊತ್ತಂಬರಿ, ಮಸಾಲೆ ಮತ್ತು ಉಪ್ಪು ಬೆರೆಸಿ. ಈಗ ಈ ಹಿಟ್ಟಿನಿಂದ ಚಿಲ್ಲಾ ತಯಾರಿಸಿ. ಇದನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆಯು ಸಾಕಷ್ಟು ಸಮಯದವರೆಗೆ ತುಂಬಿರುತ್ತದೆ ಮತ್ತು ನೀವು ಅತಿಯಾಗಿ ತಿನ್ನುವುದರಿಂದ ಪಾರಾಗುತ್ತೀರಿ.
ಮೂಂಗ್ ದಾಲ್ ಖಿಚಡಿ (Moong dal for weight loss recipe)
ಹೆಸರು ಬೇಳೆ ಖಿಚಡಿ ತೂಕ ಇಳಿಕೆಗೆ ಪರಿಪೂರ್ಣ ಆಯ್ಕೆಯಾಗಿದೆ. ಇದನ್ನು ತಿನ್ನುವುದರಿಂದ ನೀವು ಸಾಕಷ್ಟು ಪೌಷ್ಟಿಕಾಂಶವನ್ನು ಪಡೆಯುತ್ತೀರಿ ಮತ್ತು ನಿಮ್ಮ ತೂಕವನ್ನು ಸಹ ನೀವು ನಿಯಂತ್ರಿಸಬಹುದು. ಇದನ್ನು ಮಾಡಲು ನಿಮಗೆ ಹಳದಿ ಹೆಸರು ಬೇಳೆ ಮತ್ತು ಅಕ್ಕಿ ಬೇಕಾಗುತ್ತದೆ. ನೀವು ಬಯಸಿದರೆ, ಅದರಲ್ಲಿ ನಿಮ್ಮ ಆಯ್ಕೆಯ ಹಸಿರು ತರಕಾರಿಗಳನ್ನು ಸಹ ಸೇರಿಸಬಹುದು. ಕೊನೆಗೆ ತುಪ್ಪ ಕಾಕಿ ಬಡಿಸಿ. ನೀವು ಅದನ್ನು ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ತಿನ್ನಬಹುದು.
ಮೊಳಕೆಯೊಡೆದ ಹೆಸರು ಬೇಳೆ (incude moong dal in your daily diet for weight loss)
ಮೊಳಕೆಯೊಡೆದ ಹೆಸರು ಬೇಳೆ ಸೇವನೆಯು ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ತೂಕ ಇಳಿಕೆಗೂ ಕೂಡ್ ಸಹಾಯ ಮಾಡುತ್ತದೆ. ಇದಕ್ಕಾಗಿ, ಮೊಳಕೆಯೊಡೆದ ಮೂಂಗ್ ದಾಲ್‌ನಲ್ಲಿ ಕತ್ತರಿಸಿದ ಈರುಳ್ಳಿ, ಟೊಮೆಟೊ, ಸೌತೆಕಾಯಿ, ಹಸಿರು ಮೆಣಸಿನಕಾಯಿ, ನಿಂಬೆ ರಸ ಮತ್ತು ಉಪ್ಪನ್ನು ಮಿಶ್ರಣ ಮಾಡಿ. ಇದು ರುಚಿಕರವಾದ ಮತ್ತು ಪ್ರೋಟೀನ್ ಭರಿತ ಉಪಹಾರವಾಗಿದೆ.
ಹೆಸರು ಬೇಳೆ ಸೂಪ್
ನಿಮ್ಮ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ನೀವು ಬಯಸುತ್ತಿದ್ದರೆ, ನೀವು ಮೂಂಗ್ ದಾಲ್ ಸೂಪ್ ಅನ್ನು ಸೇವಿಸಬಹುದು. ಇದು ರುಚಿಕರವಾಗಿರುವುದರ ಜೊತೆಗೆ, ಇದನ್ನು ಮಾಡುವುದು ತುಂಬಾ ಸುಲಭ. ಇದಕ್ಕಾಗಿ ನೆನೆಸಿದ ಹೆಸರು ಬೆಳೆಗೆ ಬೆಳ್ಳುಳ್ಳಿ, ಶುಂಠಿ, ಜೀರಿಗೆ, ಮಸಾಲೆ, ಇಂಗು ಮತ್ತು ಉಪ್ಪನ್ನು ಸೇರಿಸಿ ಕುದಿಸಿ. ನಂತರ ಅದನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕೆ ರುಬ್ಬಿದ ಕರಿಮೆಣಸು ಸೇರಿಸಿ ಸೇವಿಸಿ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳಲು ನಿಮಗೆ ಸಾಕಷ್ಟು ಸಹಾಯ ಸಿಗುತ್ತದೆ.
ಹೆಸರು ಬೇಳೆ ಇಡ್ಲಿ
ತೂಕ ಇಳಿಸಿಕೊಳ್ಳಲು ಹೆಸರು ಬೇಳೆ ಇಡ್ಲಿಯನ್ನು ತಯಾರಿಸಿ ತಿನ್ನಬಹುದು. ಇದಕ್ಕಾಗಿ ನೀವು ನೆನೆಸಿದ ಹೆಸರು ಬೇಳೆಯನ್ನು ರುಬ್ಬಬೇಕು. ನಂತರ ನಿಮ್ಮ ಆಯ್ಕೆಯ ತರಕಾರಿಗಳು, ಮಸಾಲೆಗಳು ಮತ್ತು ಉಪ್ಪು ಸೇರಿಸಿ. ಈಗ ಈ ಹಿಟ್ಟಿನಿಂದ ಇಡ್ಲಿ ತಯಾರಿಸಿ. ಬೆಳಗಿನ ಉಪಾಹಾರಕ್ಕಾಗಿ ನೀವು ಮೂಂಗ್ ದಾಲ್ ಇಡ್ಲಿಯನ್ನು ತಿನ್ನಬಹುದು. ಇದು ನಿಮ್ಮನ್ನು ಮತ್ತೆ ಮತ್ತೆ ಹಸಿವಾಗದಂತೆ ಮಾಡುತ್ತದೆ, ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ-Hyperthyroidism: ಹೈಪರ್ ಥೈರಾಯಿಡಿಸಮ್ ನಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ಇಗ್ನೋರ್ ಮಾಡಬೇಡಿ!
(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ