Health Horoscope: ನಮ್ಮ ಬದಲಾದ, ಕಳಪೆ ಜೀವನಶೈಲಿ, ಆಹಾರ ಕ್ರಮದಿಂದಾಗಿ ತೂಕ ಹೆಚ್ಚಳ, ಸ್ಥೂಲಕಾಯತೆ ಒಂದು ಸಾಮಾನ್ಯ ಸಮಸ್ಯೆ ಆಗಿದೆ. ಇದಕ್ಕೆ ಹಲವು ಕಾರಣಗಳಿದ್ದರೂ ಸಹ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಮ್ಮ ಜಾತಕದಲ್ಲಿನ ಗ್ರಹಗಳ ಪ್ರಭಾವದಿಂದಲೂ ಕೂಡ ನಮ್ಮ ತೂಕ ಹೆಚ್ಚಾಗಬಹುದು ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಲೆಕ್ಕಾಚಾರಗಳನ್ವಯ ಮುಖ್ಯವಾಗಿ ಕುಂಡಲಿಯಲ್ಲಿ ಗುರು, ರಾಹು ಮತ್ತು ಚಂದ್ರರ ಸ್ಥಾನಮಾನವು ಬೊಜ್ಜು, ತೂಕ ಹೆಚ್ಚಳದ ಮೇಲೆ ಬಲವಾದ ಪ್ರಭಾವವನ್ನು ಉಂಟು ಮಾಡುತ್ತವೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- Weight Loss Tips: ಬೆಲ್ಲಿ ಫ್ಯಾಟ್ ಕರಗಿಸಲು ನಿತ್ಯ ರಾತ್ರಿ ಮಲಗುವ ಮುನ್ನ ಜಸ್ಟ್ ಈ 2 ಡ್ರಿಂಕ್ಸ್ ಸೇವಿಸಿ


ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ದೇವಗುರು ಬೃಹಸ್ಪತಿಯು ಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯ ಆರೋಗ್ಯ ಉತ್ತಮವಾಗಿರುತ್ತದೆ. ಮಾತ್ರವಲ್ಲ, ತೂಕವೂ ನಿಯಂತ್ರಣದಲ್ಲಿರುತ್ತದೆ. ಅದೇ ರೀತಿ ಜಾತಕದಲ್ಲಿ ಗುರು ಅಶುಭನಾಗಿದ್ದರೆ ಅಂತಹ ವ್ಯಕ್ತಿ ಬೊಜ್ಜು, ಸ್ಥೂಲಕಾಯತೆ ಸಂಬಂಧಿತ ಕಾಯಿಲೆಗಳಿಗೆ ಒಳಗಾಗಬಹುದು ಎಂದು ಹೇಳಲಾಗುತ್ತದೆ. 
 
ದೇವಗುರು ಬೃಹಸ್ಪತಿ ಮಾತ್ರವಲ್ಲ, ಚಂದ್ರ ಕೂಡ ತೂಕ, ಸ್ಥೂಲಕಾಯತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಗ್ರಹಗಳಾಗಿವೆ. ನೀರಿನ ಸ್ಥಿತಿಯನ್ನು ನಿಯಂತ್ರಿಸಲ್ಪಡುವ ಚಂದ್ರನು ಜಾತಕದಲ್ಲಿ ಅಮಂಗಳಕರ ಸ್ಥಾನದಲ್ಲಿದ್ದರೆ ಅದು ಉದರದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ಹೊಟ್ಟೆಯ ಭಾಗ ಹೆಚ್ಚಾಗುವಂತೆ ಮಾಡುತ್ತದೆ. 


ಇದನ್ನೂ ಓದಿ- ಹಸಿರು ಚಹಾ ಅಷ್ಟೇ ಅಲ್ಲ ಹಸಿರು ಕಾಫಿ ಕೂಡ ಬೊಜ್ಜು ಕರಗಿಸುತ್ತೆ ಗೊತ್ತಾ?


ವ್ಯಕ್ತಿಯ ಕುಂಡಲಿಯಲ್ಲಿ ರಾಹು ಉಪಸ್ಥಿತನಿದ್ದರೆ ರಾಹುವು ವ್ಯಕ್ತಿಯನ್ನು ಅತಿಯಾಗ್ ತಿನ್ನುವಂತೆ ಪ್ರೇರೇಪಿಸುತ್ತಾನೆ. ಅದೂ ಕೂಡ ಹೊರಗಿನ ಜಂಕ್ ಆಹಾರಗಳಿಗೆ ಹೆಚ್ಚು ಆಕರ್ಷಕರಾಗುವಂತೆ ಮಾಡುತ್ತಾನೆ. ಇದು ಕೂಡ ತೂಕ ಹೆಚ್ಚಳ, ಸ್ಥೂಲಕಾಯತೆ ಹೆಚ್ಚಳಕ್ಕೆ ಕಾರಣವಾಗುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.