Google ನಲ್ಲಿ ಪುರುಷರು ಮಹಿಳೆಯರ ಈ ವಿಚಾರಗಳ ಕುರಿತು ಅತಿ ಹೆಚ್ಚು ಸರ್ಚ್ ಮಾಡ್ತಾರಂತೆ!
From-Mars.com ನ ವರದಿಯ ಪ್ರಕಾರ, ಪುರುಷರು ಅತಿ ಹೆಚ್ಚು ಹುಡುಕುವ ವಿಷಯಗಳಲ್ಲಿ ಒಂದು ಲೈಂಗಿಕತೆ. ಪ್ರತಿ ವರ್ಷ ಸುಮಾರು 68,000 ಪುರುಷರು ತಾವು ದುರ್ಬಲರೇ ಎನ್ನುವ ವಿಚಾರದ ಬಗ್ಗೆ ಸರ್ಚ್ ಮಾಡುತ್ತಾರೆ ಎಂದು ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ಗೂಗಲ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಒಂದು ವಿಚಾರದ ಬಗ್ಗೆ ಮಾಹಿತಿ ಬೇಕಾದರೆ ಎಲ್ಲರೂ ಸಾಮಾನ್ಯವಾಗಿ ಗೂಗಲ್‌ನಲ್ಲಿ ಸರ್ಚ್ ಮಾಡಿ ತಿಳಿದುಕೊಳ್ಳುತ್ತಾರೆ. ಆದರೆ ಮಹಿಳೆಯರ ಯಾವ ವಿಚಾರಗಳ ಬಗ್ಗೆ ಪುರುಷರು ತಿಳಿದುಕೊಳ್ಳಲು ಬಯಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ.
ಇದನ್ನೂ ಓದಿ: ನಿಮ್ಮ ಅಡುಗೆ ಮನೆಯ ಸಿಂಕ್ ಬ್ಲಾಕ್ ಆಗಿದೆಯಾ? ಸರಿಪಡಿಸಲು ಇದನ್ನು ಬಳಸಿ!
From-Mars.com ನ ವರದಿಯ ಪ್ರಕಾರ, ಪುರುಷರು ಅತಿ ಹೆಚ್ಚು ಹುಡುಕುವ ವಿಷಯಗಳಲ್ಲಿ ಒಂದು ಲೈಂಗಿಕತೆ. ಪ್ರತಿ ವರ್ಷ ಸುಮಾರು 68,000 ಪುರುಷರು ತಾವು ದುರ್ಬಲರೇ ಎನ್ನುವ ವಿಚಾರದ ಬಗ್ಗೆ ಸರ್ಚ್ ಮಾಡುತ್ತಾರೆ ಎಂದು ತಿಳಿದುಬಂದಿದೆ. ಇದಲ್ಲದೇ ಕ್ಷೌರ ಮಾಡುವುದರಿಂದ ಗಡ್ಡ, ಕೂದಲು ಹೆಚ್ಚು ಬೆಳೆಯುತ್ತದೆಯೇ? ಗಡ್ಡವನ್ನು ದಪ್ಪವಾಗಿಸುವ ಮಾರ್ಗಗಳು ಯಾವುವು? ಹೀಗೆ ತಮ್ಮ ಬ್ಯೂಟಿ ಬಗ್ಗೆ ಸಹ ಅನೇಕ ವಿಚಾರಗಳನ್ನು ಹುಡುಗರು ಗೂಗಲ್‌ನಲ್ಲಿ ಸರ್ಚ್ ಮಾಡುತ್ತಾರೆ.
ಟೋಪಿ ಧರಿಸುವುದರಿಂದ ಕೂದಲಿಗೆ ಹಾನಿಯಾಗುತ್ತದೆಯೇ? ವರ್ಕೌಟ್ ದಿನಚರಿ, ಬಾಡಿ ಬಿಲ್ಡಿಂಗ್ ಹೇಗೆ ಮಾಡಬೇಕು? ಎಂಬ ಬಗ್ಗೆ ಸಹ ಹುಡುಗರು ಗೂಗಲ್ ಸರ್ಚ್ ಮಾಡುತ್ತಾರೆಂದು ವರದಿಯಿಂದ ತಿಳಿದುಬಂದಿದೆ.
ಇನ್ನೂ ಹುಡುಗಿಯರ ಕೆಲ ವಿಚಾರಗಳ ಬಗ್ಗೆ ಸಹ ಪುರುಷರು ಗೂಗಲ್‌ನಲ್ಲಿ ಸರ್ಚ್ ಮಾಡುತ್ತಾರೆ. ಹೆಚ್ಚಾಗಿ ಪುರುಷರು ಸ್ತನ ಕ್ಯಾನ್ಸರ್ ಬಗ್ಗೆ ಸರ್ಚ್ ಮಾಡುತ್ತಾರೆ ಎಂದು ಬಹಿರಂಗವಾಗಿದೆ. ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಸಾಮಾನ್ಯ ಕಾಯಿಲೆ ಆಗಿದೆ. ಆದರೆ ಪುರುಷರಿಗೆ ಸ್ತನ ಕ್ಯಾನ್ಸರ್ ಬರುತ್ತದೆಯೇ ಎಂದು ಹುಡುಗರು ಹೆಚ್ಚಾಗಿ ಸರ್ಚ್ ಮಾಡುತ್ತಾರಂತೆ.
ಇದನ್ನೂ ಓದಿ: ಮನೆಯಲ್ಲಿ ಈ ಸಸ್ಯವನ್ನು ನೆಟ್ಟರೆ ಇರಲಿದೆ ಲಕ್ಷ್ಮೀ ಕಟಾಕ್ಷ
ವರದಿಯ ಪ್ರಕಾರ, ಹುಡುಗರು ಹುಡುಗಿಯರನ್ನು ಮೆಚ್ಚಿಸುವುದು ಹೇಗೆ? ಹುಡುಗಿಯರು ಹೇಗೆ ಸಂತೋಷವಾಗಿರುತ್ತಾರೆ? ಮಹಿಳೆಯರ ಇಷ್ಟಗಳೇನು? ಏನನ್ನು ಹುಡುಗಿಯರು ಲೈಕ್ ಮಾಡುವುದಿಲ್ಲ? ಯಾವ ರೀತಿ ಪ್ರಪೋಸ್ ಮಾಡಿದರೆ ಹುಡುಗಿ ಮೆಚ್ಚುತ್ತಾಳೆ? ಎಂಬ ಬಗ್ಗೆಯೂ ಹುಡುಗರು ಸರ್ಚ್ ಮಾಡುತ್ತಾರೆಂದು ತಿಳಿದುಬಂದಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.