Tomato juice in summer : ಟೊಮೆಟೊದಲ್ಲಿ ವಿಟಮಿನ್‌, ಮಿನರಲ್ಸ್‌, ಪ್ರೊಟೀನ್‌, ಪೊಟ್ಯಾಶಿಯಂ ಹಾಗೂ ಫೋಲೇಟ್‌ ಅಂಶವಿದ್ದು, ಇದು ಚರ್ಮದ ಕಾಂತಿ, ತೂಕ ಕಾಪಾಡಲು ಮೂಳೆಗಳ ಆರೋಗ್ಯಕ್ಕೆ ನೆರವಾಗುತ್ತದೆ. ಪ್ರತಿ ದಿನದ ಆಹಾರದಲ್ಲಿ ಟೊಮೆಟೊ ಇದ್ದೇ ಇರುತ್ತದೆ. ಟೊಮೆಟೊ ಆಹಾರ ಖಾದ್ಯಗಳ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯವನ್ನು ಸಹ ಕಾಪಾಡುತ್ತದೆ


COMMERCIAL BREAK
SCROLL TO CONTINUE READING

ಟೊಮೆಟೊ ಹಣ್ಣು ಪೌಷ್ಟಿಕಾಂಶ ಆಹಾರವಾಗಿದ್ದು, ಟೊಮ್ಯಾಟೋ ಯಿಂದ ತಯಾರಿಸಲ್ಪಡುವ ಟೊಮೆಟೊ ಬಾತ್, ಟೊಮೆಟೊ ಉಪ್ಪಿನಕಾಯಿ, ಟೊಮೆಟೊ ರಸಂ, ಟೊಮೆಟೊ ಸಲಾಡ್ , ಟೊಮೆಟೊ ಸೂಪ್ ಗಳನ್ನು ನೀವು ಸಾಮಾನ್ಯವಾಗಿ ಸೇವಿಸಿರುತ್ತೀರಿ. ಅದರ ಜೊತೆಗೆ ಟೊಮೊಟೊ ಜ್ಯೂಸ್ ಅನ್ನು ಒಮ್ಮೆ ಸೇವಿಸಿ ನೋಡಿ 


ಇದನ್ನು ಓದಿ : WhatsApp Update: ಕೋಟ್ಯಾಂತರ ಬಳಕೆದಾರರಿಗೆ ಹೊಸ ಅಪ್ಡೇಟ್ ಬಿಡುಗಡೆಗೆ ಮುಂದಾದ ವಾಟ್ಸ್ ಆಪ್!


ಪ್ರತಿನಿತ್ಯ ನಿಂಬೆ ಜ್ಯೂಸ್‌, ಮಜ್ಜಿಗೆ, ಕಲ್ಲಂಗಡಿ ಜ್ಯೂಸ್ ಕುಡಿದು ಬೋರ್‌ ಆಗಿದ್ದರೆ ಟೊಮೊಟೊ ಜ್ಯೂಸ್ ಸೇವಿಸಿ, ಸಾಮಾನ್ಯವಾಗಿ ಟೊಮ್ಯಾಟೋ ನೀವು ದಿನನಿತ್ಯದ ಒಂದು ಭಾಗವೇ ಆಗಿರುತ್ತದೆ. ಒಮ್ಮೆ ಟೊಮ್ಯಾಟೋ ಜ್ಯೂಸ್ ಅನ್ನು ಸೇವಿಸಿ, ಬೇಸಿಗೆ ಬಿಸಿಲಿಗೆ ತಂಪಾದ ಜ್ಯೂಸ್‌ ಕುಡಿಯಬೇಕು ಅನಿಸಿದರೆ ಇದು ಸಹಕಾರಿಯಾಗುತ್ತದೆ. ಸೆಕೆ ಹಾಗೂ ಬಿಸಿಲಿನಿಂದ ಆಗಾಗ ನೀರು, ತಂಪು ಪಾನೀಯಗಳನ್ನು ಕುಡಿಯಬೇಕು ಅನಿಸುವುದು ಸಾಮಾನ್ಯ.  ಟೊಮ್ಯಾಟೋ ನಿಮ್ಮ ದೇಹಕ್ಕೆ ತಂಪನ್ನು ನೀಡುತ್ತದೆ. 


ಆರೋಗ್ಯಕ್ಕೆ ಹಿತ, ನಾಲಿಗೆಗೆ ರುಚಿ ಹಾಗೂ ದೇಹಕ್ಕೆ ತಂಪಾದ ಟೊಮೆಟೊ ಜ್ಯೂಸ್‌ ಅನ್ನು ಬಹಳ ಸುಲಭವಾಗಿ ತಯಾರಿಸಬಹುದು.


ಟೊಮೆಟೊ ಜ್ಯೂಸ್‌ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
 ಮಧ್ಯಮ ಗಾತ್ರದ ಟೊಮೆಟೊ - 4 
ಸಕ್ಕರೆ -8 ಟೀಸ್ಪೂನ್ ಹಾಗೂ ನಿಮ್ಮ ರುಚಿಗೆ ತಕ್ಕಂತೆ
ತುರಿದ ತೆಂಗಿನಕಾಯಿ -1/2 
ಕಪ್ ನೀರು-1.5 ಕಪ್


ಇದನ್ನು ಓದಿ :  ಕೇವಲ 9 ಸೀಟ್‌ಗಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಕಾಂಗ್ರೆಸ್‌ ಮಾರಾಟ ಮಾಡಿದೆ: ಬಿಜೆಪಿ ಆರೋಪ


ಟೊಮೆಟೊ ಜ್ಯೂಸ್‌ ತಯಾರಿಸುವ ವಿಧಾನ 


  • ಮೊದಲು ಮಧ್ಯಮ ಗಾತ್ರದ 4 ಟೊಮೆಟೊ ಹಣ್ಣುಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. 

  • ಬಳಿಕ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ. 

  • ಟೊಮೆಟೊ ತುಂಡುಗಳ ಜೊತೆ ತೆಂಗಿನ ತುರಿ ಮತ್ತು ಸಕ್ಕರೆಯನ್ನು ಸೇರಿದಿ ಮಿಕ್ಸಿ ಜಾರ್‌ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ

  • ಈ ಟೊಮೆಟೊ, ಸಕ್ಕರೆ ಹಾಗೂ ತೆಂಗಿನ ತುರಿ ಮಿಶ್ರಣಕ್ಕೆ ಒಂದು ಕಪ್‌ ನೀರು ಸೇರಿಸಿ ಮತ್ತೆ ರುಬ್ಬಿಕೊಳ್ಳಿ.

  • ಬಳಿಕ ಮಿಕ್ಸಿ ಜಾರ್‌ನಿಂದ ಹೊರ ತೆಗೆದು ಅಗತ್ಯವಿರುವಷ್ಟು ನೀರು ಹಾಗೂ ನಿಮ್ಮ ರುಚಿಗೆ ತಕ್ಕಷ್ಟು ಸಿಹಿ ಸೇರಿಸಿಕೊಳ್ಳಿ. 

  • ಬಳಿಕ ಒಂದು ಪಾತ್ರೆ ಹಾಗೂ ಜಾರು ಬಳಸಿ ಚೆನ್ನಾಗಿ ಸೋಸಿಕೊಂಡು ಜ್ಯೂಸ್‌ ಬೇರರ್ಪಡಿಸಿಕೊಳ್ಳಿ. 

  • ಬಳಿಕ ಇದನ್ನು ಗ್ಲಾಸ್‌ಗೆ ಸರ್ವ್‌ ಮಾಡಿಕೊಂಡು, ನಿಮಗೆ ಅಗತ್ಯವಿದ್ದರೆ ಒಂದು ತುಂಡು ಐಸ್‌ ಕ್ಯೂಬ್‌ ಸೇರಿಸಿ ಕುಡಿಯಿರಿ.

    https://bit.ly/3AClgDd
    Apple Link - https://apple.co/3wPoNgr
    ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
    Twitter Link - https://bit.ly/3n6d2R8
    Facebook Link - https://bit.ly/3Hhqmcj 
    Youtube Link - https://www.youtube.com/live/RNn4I7iIaYE?si=3G4W5dh0oCdFnu-T
    Instagram Link -  https://bit.ly/3LyfY2l 
    Sharechat Link - https://bit.ly/3LCjokI 
    Threads Link-  https://www.threads.net/@zeekannadanews 
    WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.