ಸಾಮಾಜಿಕ ಅಂಡಾಣು ಫ್ರೀಜಿಂಗ್ ಪ್ರಮಾಣದಲ್ಲಿ ಏರಿಕೆ.. ಏನಿದು `ಎಗ್ ಫ್ರೀಜಿಂಗ್`?
Egg Freezing: ಈ ಹಿಂದೆ ಎಗ್ ಫ್ರೀಜಿಂಗ್ ಮಹಿಳೆಗೆ ವೈದ್ಯಕೀಯ ಸ್ಥಿತಿಗತಿಗೆ ಅನುಗುಣವಾಗಿ ಕೆಲ ಸಂದರ್ಭಗಳಲ್ಲಿ ಮಾತ್ರ ಪ್ರಚಲಿತವಾಗುತ್ತಿದೆ.
ಎಗ್ ಫ್ರೀಜಿಂಗ್ (Egg Freezing) ಎಂಬುದು ಮಹಿಳೆಯ ಅಂಡಾಶಯಗಳಿಂದ ಮೊಟ್ಟೆಗಳನ್ನು ಹಾರ್ವೆಸ್ಟ ಮಾಡುವ ಮತ್ತು ನಂತರದ ಬಳಕೆಗಾಗಿ ಹೆಪ್ಪುಗಟ್ಟಿಸುವ ಒಂದು ಕಾರ್ಯ ವಿಧಾನವಾಗಿದೆ.
ಇದನ್ನೂ ಓದಿ: ಪದೆ ಪದೇ ತಲೆ ಕೂದಲು ಕತ್ತರಿಸುವುದರಿಂದ ಆಗುವ ಪರಿಣಾಮವೇನು?
ಇದು ಮಹಿಳೆಯರಿಗೆ ಫಲವತ್ತತೆ (Fertility) ಸಂರಕ್ಷಣೆಯ ವಿಧಾನವಾಗಿದ್ದು, ಭವಿಷ್ಯದಲ್ಲಿ ಗರ್ಭ ಧರಿಸುವ ಸಾಮರ್ಥ್ಯವನ್ನು ನೀಡುತ್ತದೆ. ಈ ಹಿಂದೆ ಎಗ್ ಫ್ರೀಜಿಂಗ್ ಮಹಿಳೆಗೆ ವೈದ್ಯಕೀಯ ಸ್ಥಿತಿಗತಿಗೆ ಅನುಗುಣವಾಗಿ ಕೆಲ ಸಂದರ್ಭಗಳಲ್ಲಿ ಮಾತ್ರ ಪ್ರಚಲಿತವಾಗುತ್ತಿದೆ. ಕೆಲ ವೈದಯಕೀಯ ಸಂದರ್ಭಗಳಲ್ಲಿ ಗರ್ಭಿಣಿಯಾಗುವ ಅವಳ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
ಉದಾಹರಣೆಗೆ, ಕ್ಯಾನ್ಸರ್ ಚಿಕಿತ್ಸೆಗೆ (Cancer Treatment) ಒಳಗಾಗುವ ಮಹಿಳೆಯರು ಎಗ್ ಫ್ರೀಜಿಂಗ್ ಗೆ ಹೋಗಲು ಆಯ್ಕೆ ಮಾಡುತ್ತಾರೆ. ಏಕೆಂದರೆ ಕೀಮೋಥೆರಪಿ ಅಥವಾ ವಿಕರಣವು ಅವರ ಫಲವತ್ತತೆಯನ್ನು ಹಾನಿಗೊಳಿಸುತ್ತದೆ. ಅಂತಹ ಚಿಕಿತ್ಸೆಗಳಿಗೆ ಮೊದಲು ಎಗ್ ಫ್ರೀಜಿಂಗ್ ಮಾಡುವುದರಿಂದ ಭವಿಷ್ಯದಲ್ಲಿ ಗರ್ಭಿಣಿಯಾಗುವ ಅವಕಾಶವನ್ನು ನೀಡುತ್ತದೆ.
ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಕಳೆದ 5 ವರ್ಷಗಳಲ್ಲಿ ಸೋಶಿಯಲ್ ಎಗ್ ಫ್ರೀಜಿಂಗ್ (Social Egg Freezing) ಪ್ರವೃತ್ತಿಯಲ್ಲಿ ಏರಿಕೆಯಾಗಿದೆ. ಇದು ಯಾವುದೇ ವೈದ್ಯಕೀಯ ಸಮಸ್ಯೆ ಇಲ್ಲದೆ ಆರೋಗ್ಯವಂತ ಮಹಿಳೆಗೆ ಎಗ್ ಫ್ರೀಜಿಂಗ್ ಮಾಡುವ ವಿಧಾನವಾಗಿದೆ. ವೈಯಕ್ತಿಕ ಕಾರಣಗಳಗಾಗಿ ಎಗ್ ಫ್ರೀಜಿಂಗ್ ಆಯ್ಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Weight Loss Tips : Belly Fat ಕರಗಿಸಬೇಕೆ? ಹಾಗಿದ್ರೆ, ಬೆಳಗಿನ ಉಪಾಹಾರದಲ್ಲಿ ಈ ಆಹಾರಗಳನ್ನು ಸೇವಿಸಿ!
ಈ ಬಗ್ಗೆ ಡಾ.ಮಹೇಶ ಕೋರೆಗೋಳ, ಐವಿಎಫ್, ಸಂತಾನಹೀನತೆ ಚಿಕಿತ್ಸಾ ತಜ್ಞರು, ನೋವಾ ಐವಿಎಫ್ ಫರ್ಟಿಲಿಟಿ, ಕೋರಮಂಗಲ, ಬೆಂಗಳೂರು ಇವರು ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.