ನವದೆಹಲಿ : ಮನಿಪ್ಲಾಂಟ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಕೆಲವರು ಮನೆಯ ಸೌಂದರ್ಯಕ್ಕೆ ಅಂತ ಮನಿ ಪ್ಲಾಂಟ್ (Money plant) ಹಾಕಿದರೆ, ಇನ್ನು ಕೆಲವರು ವಾಸ್ತು ದೋಷ ನಿವಾರಣೆಗೆಂದು ಹಾಕುತ್ತಾರೆ. ವಾಸ್ತು ದೋಷಗಳನ್ನು ತೆಗೆದುಹಾಕಲು ಮನೆಯಲ್ಲಿ ಮನಿ ಪ್ಲಾಂಟ್ ನೆಡುವಂತೆ ಸಲಹೆ ನೀಡಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ, ಮನಿ ಪ್ಲಾಂಟ್ (money plant in vastu shastra) ಬಗ್ಗೆ ಉಲ್ಲೇಖಿಸಲಾಗಿದೆ. ಇದರೊಂದಿಗೆ, ಮನೆಯಲ್ಲಿ ಮನಿ ಪ್ಲಾಂಟ್ ಇಡುವಾಗ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

-ವಾಸ್ತು ಪ್ರಕಾರ (Vastu tips), ಮನೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡಿದರೆ ಮನೆಯಲ್ಲಿ ಪಾಸಿಟಿವ್ ಎನರ್ಜಿ (Positive energy) ಇರುತ್ತದೆ ಎಂದು ಹೇಳಲಾಗುತ್ತದೆ.  ಮನಿ ಪ್ಲಾಂಟ್ ಹೇಗೆ ಬೆಳೆಯುತ್ತದೆ ಮನೆಯ ಆರ್ಥಿಕ ಪರಿಸ್ಥಿತಿ ಕೂಡಾ ಹಾಗೆ ಇರುತ್ತದೆ ಎನ್ನಲಾಗಿದೆ. ಅಂದರೆ ಮನಿ ಪ್ಲಾಂಟ್ (Money plant) ಚೆನ್ನಾಗಿ ಬೆಳೆದರೆ, ಮನೆಯ ಸದಸ್ಯರ ಆರ್ಥಿಕ ಪರಿಸ್ಥಿತಿ ಕೂಡಾ ಎತ್ತರಕ್ಕೆ ಏರುತ್ತದೆಯಂತೆ.


ಇದನ್ನೂ ಓದಿ : Palmistry: ಸರ್ಕಾರಿ ನೌಕರಿ ಕೊಡಿಸುವ ಹಸ್ತರೇಖೆ ಈ ರೀತಿಯಾಗಿರುತ್ತದೆ, ನಿಮ್ಮ ಕೈಯಲ್ಲಿದೆಯಾ?


-ಮನಿಪ್ಲಾಂಟ್ ಅನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿಕ್ಕು ಗಣೇಶನಿಗೆ (Lord Ganesha) ಸೇರಿದೆ. ಈ ದಿಕ್ಕಿನಲ್ಲಿ ಮನಿಪ್ಲಾಂಟ್ ಇರಿಸುವುದು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. 


-ಮನಿ ಪ್ಲಾಂಟ್‌ಗೆ ನೀರು ನೀಡುವಾಗ, ಅದಕ್ಕೆ ಕೆಲವು ಹನಿ ಹಾಲನ್ನು (Milk) ಸೇರಿಸಬೇಕು. ಹೀಗೆ ಮಾಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ.


-ಹಗ್ಗ ಅಥವಾ ಕೋಲಿನ ಸಹಾಯದಿಂದ ಮನಿ ಪ್ಲಾಂಟ್ ಕಟ್ಟಬೇಕು. ಮನಿ ಪ್ಲಾಂಟ್ ಅನ್ನು ಕಟ್ಟಿದರೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಧನಾತ್ಮಕ ಶಕ್ತಿಯು ನೆಲೆಸು ಸಹಾಯ ಮಾಡುತ್ತದೆ. 


ಇದನ್ನೂ ಓದಿ : ಆಗಸ್ಟ್ ತಿಂಗಳಲ್ಲಿ ಹುಟ್ಟಿದ ಮಕ್ಕಳು ಪ್ರತಿಭಾನ್ವಿತರು, ಆದರೆ ಈ ಗುಣ ಕೂಡಾ ಅವರಲ್ಲಿರುತ್ತದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ