ದೀರ್ಘ ಕಾಲದವರೆಗೆ ಕೂದಲನ್ನು ಕಪ್ಪಾಗಿರಿಸಬೇಕೆ? ಇಲ್ಲಿವೆ ಐದು ಸಲಹೆಗಳು!
White Hair Home Remedies: ನಿಮ್ಮ ಕೂದಲನ್ನು ದೀರ್ಘಕಾಲದವರೆಗೆ ಕಪ್ಪಾಗಿಡಲು ನೀವು ಬಯಸುತ್ತಿದ್ದರೆ, ಖಂಡಿತವಾಗಿಯೂ ಈ ಐದು ಸಲಹೆಗಳನ್ನು ಅನುಸರಿಸಿ... (Lifestyle News In Kannada)
ನವದೆಹಲಿ: ಪ್ರತಿಯೊಬ್ಬರೂ ತಮ್ಮ ಕೂದಲು ದಟ್ಟವಾಗಿರಬೇಕು ಮತ್ತು ವರ್ಷಗಳವರೆಗೆ ಕಪ್ಪಾಗಿ ಕಾಣಬೇಕೆಂದು ಬಯಸುತ್ತಾರೆ. ಆದರೆ, ನೀವು ಕಪ್ಪು ಮತ್ತು ದಟ್ಟ ಕೂದಲು ಹೊಂದಲು ಬಯಸಿದರೆ, ನಂತರ ಅದನ್ನು ಕಾಳಜಿ ವಹಿಸುವ ಅವಶ್ಯಕತೆಯಿದೆ. ನೀವು ಸರಿಯಾಗಿ ಕೂದಲಿನ ರಕ್ಷಣೆ ಮಾಡದೆ ಹೋದರೆ ಅಥವಾ ನಿಮ್ಮ ಕೂದಲನ್ನು ಸ್ವಚ್ಛಗೊಳಿಸದಿದ್ದರೆ, ನಿಮ್ಮ ಕೂದಲು ಶೀಳುತ್ತವೆ ಮತ್ತು ಬೂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ದೇಹದಲ್ಲಿನ ಪೋಷಕಾಂಶಗಳ ಕೊರತೆ, ಧೂಳು, ಕೊಳೆ, ಮಾಲಿನ್ಯ, ಆಹಾರದ ತೊಂದರೆಗಳು, ಹಾರ್ಮೋನ್ ಬದಲಾವಣೆಗಳು, ಅನುವಂಶಿಕತೆ ಮುಂತಾದ ಹಲವು ಕಾರಣಗಳಿಂದ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತವೆ. ಅನೇಕ ಬಾರಿ, ಕೂದಲಿನ ಬಣ್ಣ ಮತ್ತು ರಾಸಾಯನಿಕ ಉತ್ಪನ್ನಗಳ ಅತಿಯಾದ ಬಳಕೆಯು ಕೂದಲನ್ನು ಅಕಾಲಿಕವಾಗಿ ಬಿಳಿ ಮಾಡುತ್ತದೆ. ನಿಮ್ಮ ಕೂದಲನ್ನು ಕಪ್ಪಾಗಿಡಲು, ಕೆಳಗೆ ತಿಳಿಸಲಾದ ಈ 5 ಸಲಹೆಗಳನ್ನು ಅನುಸರಿಸಿ (Lifestyle News In Kannada)
ಬಿಸಿ ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡಿ
ಬೆಚ್ಚಗಿನ ಎಣ್ಣೆಯಿಂದ ಕೂದಲು ಮತ್ತು ನೆತ್ತಿಯನ್ನು ಮಸಾಜ್ ಮಾಡಿ. ಇದಕ್ಕಾಗಿ ನೀವು ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಬಹುದು. ಕೂದಲನ್ನು ಕಪ್ಪಾಗಿ, ದಟ್ಟವಾಗಿ ಮತ್ತು ಬಲವಾಗಿಡಲು ಈ ಎರಡೂ ಎಣ್ಣೆಗಳನ್ನು ವರ್ಷಗಳಿಂದ ಬಳಸಲಾಗುತ್ತಿದೆ.
ಬಿಸಿಯಾಗಿಸುವ ಉತ್ಪನ್ನಗಳನ್ನು ತಪ್ಪಿಸಿ
ನೀವು ವಾರದಲ್ಲಿ ಮೂರು-ನಾಲ್ಕು ಬಾರಿ ನಿಮ್ಮ ಕೂದಲನ್ನು ಒನಗಿಸಲು ಅಥವಾ ಸ್ಟ್ರೇಟ್ ಮಾಡಲು ಬಿಸಿ ಉತ್ಪನ್ನಗಳ ಬಳಕೆ ಮಾಡುತ್ತಿದ್ದರೆ, ಅವು ಕೂದಲು ಅಕಾಲಿಕವಾಗಿ ಬಿಳಿಯಾಗಲು ಕಾರಣವಾಗಬಹುದು. ಇದರಿಂದ ತಲೆಬುರುಡೆಗೆ ಹಾನಿಯಾಗುತ್ತದೆ. ಕೂದಲು ಹಾಳಾಗುತ್ತದೆ. ನಿಮ್ಮ ಕೂದಲಿಗೆ ನಿಯಮಿತವಾಗಿ ಯಾವುದೇ ರೀತಿಯ ಕೂದಲು ಬಣ್ಣ, ಕೂದಲು ಉತ್ಪನ್ನಗಳು, ಹೇಟಿಂಗ್ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಿ.
ದಿನವಿಡೀ ಸಾಕಷ್ಟು ನೀರು ಕುಡಿಯಿರಿ
ನೀರು ಕುಡಿಯುವುದು ಚರ್ಮ ಮತ್ತು ಒಟ್ಟಾರೆ ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲು ಕಪ್ಪು ಮತ್ತು ದಟ್ಟವಾಗಿಸಲು ಸಹ ಮುಖ್ಯವಾಗಿದೆ ಎಂಬುದು ನಿಮಗೆ ತಿಳಿದಿದೆಯೇ? ದಿನವಿಡೀ ದೇಹದ ಅಗತ್ಯಕ್ಕೆ ತಕ್ಕಂತೆ ನೀರು ಕುಡಿದರೆ ದೇಹವು ನಿರ್ಜಲೀಕರಣ ಎದುರಿಸುವುದಿಲ್ಲ. ಇದು ಕೂದಲಿಗೆ ಪ್ರಯೋಜನವನ್ನು ಸಹ ನೀಡುತ್ತದೆ. ನೀರು ನೆತ್ತಿಯನ್ನು ಹೈಡ್ರೆಟ್ ಆಗಿರಿಸುತ್ತದೆ, ಇದು ಸೀಳು ತುದಿಗಳ ಸಮಸ್ಯೆಯನ್ನು ಪರಿಹರಿಸುತ್ತದೆ. ಕೂದಲು ಕಪ್ಪು, ಆರೋಗ್ಯಕರ ಮತ್ತು ಬಲವಾಗಿರುತ್ತದೆ
ಓಟ್ಸ್ ಕೂದಲನ್ನು ಕಪ್ಪಾಗಿಸುತ್ತದೆ
ನಿಮಗೆ ಕಪ್ಪು ಕೂದಲು ಬೇಕಿದ್ದರೆ ಖಂಡಿತ ಬೆಳಗಿನ ಉಪಾಹಾರದಲ್ಲಿ ಓಟ್ಸ್ ಸೇವಿಸಿ. ಇದು ಬಯೋಟಿನ್ ಅನ್ನು ಹೊಂದಿರುತ್ತದೆ, ಇದು ಕೂದಲನ್ನು ಕಪ್ಪು ಮಾಡಲು ಸಹಾಯ ಮಾಡುತ್ತದೆ. ಓಟ್ಸ್ ಮುಖದ ಚರ್ಮಕ್ಕೂ ತುಂಬಾ ಪ್ರಯೋಜನಕಾರಿ.
ಇದನ್ನೂ ಓದಿ-ತಲೆ ಬೋಳಾಗುವಿಕೆಯನ್ನು ತಡೆಯುತ್ತೇ ಬೀಟ್ ರೂಟ್, ಈ ರೀತಿ ಬಳಕೆ ಮಾಡಿ!
ಧೂಮಪಾನ ನಿಲ್ಲಿಸಿ
ನೀವು ಧೂಮಪಾನ ಮಾಡುವ ಅಭ್ಯಾಸವನ್ನು ಹೊಂದಿದ್ದರೆ, ಅದು ನಿಮ್ಮ ಕೂದಲಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ಕೂದಲು ಅಕಾಲಿಕವಾಗಿ ಬಿಳಿಯಾಗಲು ಪ್ರಾರಂಭಿಸುತ್ತದೆ. ಧೂಮಪಾನವು ದೇಹದಲ್ಲಿ ಫ್ರೀ ರಾಡಿಕಲ್ಗಳನ್ನು ಹೆಚ್ಚಿಸಲು ಕಾರಣವಾಗಿದೆ, ಇದು ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಕಾರಣವಾಗುತ್ತದೆ. ಧೂಮಪಾನವನ್ನು ತ್ಯಜಿಸುವುದರಿಂದ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ ಮತ್ತು ಶ್ವಾಸಕೋಶಗಳು ಸಹ ಆರೋಗ್ಯಕರವಾಗಿರುತ್ತವೆ.
ಇದನ್ನೂ ಓದಿ-ಈ 2 ಆಯುರ್ವೇದ ವಿಧಾನಗಳಿಂದ ಪರ್ಮನೆಂಟಾಗಿ ನಿಮ್ಮ ಬಿಳಿ ಕೂದಲುಗಳನ್ನು ಬುಡದಿಂದ ಕಪ್ಪಾಗಿಸಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.