White Hair Natural Hair Mask: ನಮ್ಮ ವಯಸ್ಸಿನ ಒಂದು ನಿರ್ಧಿಷ್ಟ ವಯಸ್ಸಿನ ಬಳಿಕ ನಮ್ಮ ಕಪ್ಪು ಕೂದಲು ಬಿಳಿಯಾಗುವುದು ಒಂದು ಸಹಜ ಪ್ರಕ್ರಿಯೆ. ಆದರೆ 20 ರಿಂದ 30 ವಯಸ್ಸಿನಲ್ಲಿಯೇ ಕಪ್ಪು ಕೂದಲುಗಳು ಬಿಳಿಯಾಗಲು ಆರಂಭಿಸಿದರೆ, ಅದು ಚಿಂತಾಜನಕ ವಿಷಯವಾಗಿದೆ.  ಕೂದಲು ಬಿಳಿಯಾಗುವುದು ನಿಮಗೆ ವಯಸ್ಸಾಗಿದೆ ಎಂಬುದರ ಸೂಚಕ ಅಷ್ಟೇ ಅಲ್ಲ,  ಅದು ಕೆಲವೊಮ್ಮೆ ನಿಮ್ಮ ಆತ್ಮವಿಶ್ವಾಸದ ಮಟ್ಟದ ಮೇಲೂ ಕೂಡ ಪ್ರಭಾವ ಬೀರುತ್ತದೆ . ಹೀಗಾಗಿ, ಕೂದಲು ಬಿಳಿಯಾಗುವ ಸಮಸ್ಯೆಯಿಂದ ದೂರವಿರಲು ಪ್ರತಿಯೊಬ್ಬರೂ ಬಯಸುತ್ತಾರೆ. ಕೂದಲು ಬಿಳಿಯಾಗುವ ಸಮಸ್ಯೆಯ ವಿರುದ್ದ ನೀವು ಹೋರಾಡುತ್ತಿದ್ದರೆ, ವಿವಿಧ ರಾಸಾಯನಿಕಗಳನ್ನು ಹೊಂದಿರುವ ಹೇರ್ ಡೈಗಳನ್ನು ಬಳಸುವ ಬದಲು, ನೈಸರ್ಗಿಕ ಪರಿಹಾರಗಳನ್ನು ಆಶ್ರಯಿಸುವುದು ಉತ್ತಮ. (Lifestyle News In Kannada)


COMMERCIAL BREAK
SCROLL TO CONTINUE READING

ವಾಸ್ತವದಲ್ಲಿ ನೀವು ನಿಮ್ಮ ಕೂದಲಿಗೆ ರಾಸಾಯನಿಕ ಪದಾರ್ಥಗಳಿಂದ ಕೂಡಿದ ಸಂಗತಿಗಳನ್ನು ಬಳಸಿದಾಗ, ನಿಮ್ಮ ಕೂದಲು ತುಂಬಾ ಹಾನಿಗೊಳಗಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಕೂದಲಿನಲ್ಲಿ ಇತರ ಹಲವು ರೀತಿಯ ಸಮಸ್ಯೆಗಳು ಉಂಟಾಗಲು ಪ್ರಾರಂಭಿಸುತ್ತವೆ. ಕೂದಲು ಬಿಳಿಯಾಗುವುದನ್ನು ಕಡಿಮೆ ಮಾಡಲು ನೀವು ಬಯಸುತ್ತಿದ್ದರೆ, ಮನೆಯಲ್ಲಿಯೇ ಒಂದು ಪರಿಣಾಮಕಾರಿ ಮತ್ತು ನೈಸರ್ಗಿಕ ಹೇಯರ್ ಪ್ಯಾಕ್ ತಯಾರಿಸಿ, ಅದರಿಂದ ನಿಮ್ಮ ಬಿಳಿಕೂದಲನ್ನು ಕಪ್ಪಾಗಿಸಬಹುದು.  ಈ ಹೇರ್ ಪ್ಯಾಕ್‌ನಿಂದ ಕೂದಲು ಬಿಳಿಯಾಗುವ ಸಮಸ್ಯೆಯನ್ನು ಹೋಗಲಾಡಿಸಲು ಇದು ಹೇಗೆ ಕಾರ್ಯನಿರ್ವಹಿಸುತ್ತದೆ ತಿಳಿದುಕೊಳ್ಳೋಣ ಬನ್ನಿ?


ದಾಸವಾಳ ಹೂಗಳಿಂದ ಮನೆಯಲ್ಲೇ ತಯಾರಿಸಿ ಈ ಹೇಯರ್ ಮಾಸ್ಕ್
ಬೇಕಾಗುವ ಸಾಮಗ್ರಿಗಳು

ಒಣಗಿದ ದಾಸವಾಳದ ಹೂವುಗಳು - ಅರ್ಧ ಟೀಚಮಚ
ಮೊಸರು - 2 ಚಮಚಗಳು
ಕಾಫಿ ಪುಡಿ - 2 ಟೀಸ್ಪೂನ್
ವಿಟಮಿನ್ ಇ ಕ್ಯಾಪ್ಸುಲ್ಗಳು - 2 ಟೀಸ್ಪೂನ್
ಅಲೋವೆರಾ ಜೆಲ್ - 1 ಟೇಬಲ್ ಸ್ಪೂನ್ 


ತಯಾರಿಸುವ ವಿಧಾನ (Hibiscus hair mask for white hair recipe)
ಮೊದಲನೆಯದಾಗಿ, ಒಣಗಿದ ದಾಸವಾಳದ ಹೂವುಗಳನ್ನು ಚೆನ್ನಾಗಿ ಪುಡಿಮಾಡಿ. ನಂತರ, ಅದರಲ್ಲಿ ಮೊಸರು, ಕಾಫಿ ಪುಡಿ, ವಿಟಮಿನ್ ಇ ಕ್ಯಾಪ್ಸುಲ್, ಅಲೋವೆರಾ ಜೆಲ್ ಮುಂತಾದ ಪದಾರ್ಥಗಳನ್ನು ಬೆರೆಸಿ ಸರಿಯಾಗಿ ಮಿಶ್ರಣ ಮಾಡಿ. ಇದರ ನಂತರ, ನಿಮ್ಮ ಕೂದಲನ್ನು ಎರಡು ಭಾಗಗಳಾಗಿ ವಿಂಗಡಿಸಿ ಮತ್ತು ತಯಾರಿಸಿದ ಹೇಯರ್ ಮಾಸ್ಕ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ. (How to make hibiscus hair mask for white hair)


ಇದನ್ನೂ ಓದಿ-Relationship Astro: ದೀರ್ಘಕಾಲ ಒಂದೇ ರಿಲೇಷನ್ ನಲ್ಲಿ ಉಳಿಯಲು ಬಯಸುವುದಿಲ್ಲ ಈ ಜನ!


ಇದಾದ ಬಳಿಕ ಒಂದು ಟವೆಲ್ ತೆಗೆದುಕೊಂಡು ಅದನ್ನು ಬಿಸಿ ನೀರಿನಲ್ಲಿ ಅದ್ದಿ ಮತ್ತು ಅದನ್ನು ಹಿಂದಿ. ಈಗ ಇದನ್ನು ತಲೆಗೆ ಸುತ್ತಿ ಸುಮಾರು 30 ನಿಮಿಷಗಳ ಕಾಲ ಬಿಡಿ. 30 ನಿಮಿಷಗಳ ನಂತರ, ನಿಮ್ಮ ಕೂದಲನ್ನು ನೀರಿನಿಂದ ತೊಳೆಯಿರಿ. ನೀವು ಬಯಸಿದರೆ, ಸೌಮ್ಯವಾದ ಶಾಂಪೂ ಬಳಸಿ ಕೂಡ ನಿಮ್ಮ ಕೂದಲನ್ನು ಸ್ವಚ್ಛಗೊಳಿಸಬಹುದು. ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ-Health And Sleeping: ಮದ್ಯಾಹ್ನದ ನಿದ್ದೆಯ ಕುರಿತಾದ ಈ ಇಂಟರೆಸ್ಟಿಂಗ್ ಫ್ಯಾಕ್ಟ್ ನಿಮಗೆ ತಿಳಿದೆಯಾ?

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ