Relationship: ಯಾವುದೇ ಸಂಬಂಧದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಮತ್ತು ಅದನ್ನು ಕಾಪಾಡಿಕೊಂಡು ಹೋಗುವುದು ಒಂದು ದೊಡ್ಡ ಜವಾಬ್ದಾರಿಯಾಗಿದೆ. ಸಂಬಂಧದಲ್ಲಿ ಪ್ರತಿ ಸಂದರ್ಭಗಳಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ತುಂಬಾ ಮುಖ್ಯವಾಗಿರುತ್ತವೆ. ಏಕೆಂದರೆ ಸಂಬಂಧಗಳ ನಡುವಿನ ಬಂಧ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಅವುಗಳನ್ನು ತುಂಬಾ ಗಟ್ಟಿಯಾಗಿ ಎಳೆದಾಡಿದರೆ ಅಥವಾ ನಿರ್ಲಕ್ಷ ಧೋರಣೆಯನ್ನು ತಳೆದರೆ, ಅವು ಕೈಯಿಂದ ಜಾರಿಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಿರುವಾಗ ಸಂಬಂಧಗಳನ್ನು ತುಂಬಾ ಜಾಗ್ರತೆಯಿಂದ ನಿಭಾಯಿಸಬೇಕು. ಇಂದು ನಾವು ನಿಮಗೆ ಕೆಲ ರಾಶಿಗಳ ಜನರ ಬಗ್ಗೆ ಮಾಹಿತಯನ್ನು ನೀಡುತ್ತಿದ್ದು, ಈ ಜನರು ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ತೀರಾ ದುರ್ಬಲರಾಗಿರುತ್ತಾರೆ. (Lifestyle News In Kannada)
ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವವು ಭಿನ್ನವಾಗಿರುತ್ತದೆ. ಹೀಗಿರುವಾಗ ಕೆಲವರು ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರೆ. ಇನ್ನೂ ಕೆಲ ಜನರು ಸಂಬಂಧಗಳನ್ನು ಕಾಪಾಡಿಕೊಳ್ಳಲು ವಿಫಲರಾಗುತ್ತಾರೆ. ಇಂದು ನಾವು ಅಂತಹ ಕೆಲ ರಾಶಿಗಳ (Zodiac Signs) ಜನರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಈ ರಾಶಿಗಳ ಜನರು ಹೆಚ್ಚುಕಾಲ ಒಂದೇ ವ್ಯಕ್ತಿಯ ಜೊತೆಗೆ ಸಂಬಂಧದಲ್ಲಿ ಮುಂದುವರೆಯಲು ಬಯಸುವುದಿಲ್ಲ.
ಮೇಷ ರಾಶಿ - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯ ಜನರು ಕೋಪದ ಸ್ವಭಾವದವಾಗಿರುತ್ತಾರೆ. ಪ್ರತಿಯೊಂದು ಸಣ್ಣ-ಪುಟ್ಟ ವಿಷಯವನ್ನು ಇವರು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ, ಇದರಿಂದಾಗಿ ಅವರು ದೀರ್ಘಕಾಲದವರೆಗೆ ಸಂಬಂಧದಲ್ಲಿ ಇರಲು ಸಾಧ್ಯವಾಗುವುದಿಲ್ಲ. ಇವರ ಇನ್ನೊಂದು ವಿಶೇಷತೆ ಎಂದರೆ, ಒಂದೊಮ್ಮೆ ಸಂಬಂಧದಲ್ಲಿ ಹುಳಿ ನಿರ್ಮಾಣವಾಗುತ್ತಿದೆ ಎಂಬುದನ್ನು ಇವರು ಮನಗಂಡರೆ, ನಿಧಾನವಾಗಿ ತಾವೇ ಸಂಬಂಧದಿಂದ ದೂರ ಸರಿಯುತ್ತಾರೆ.
ವೃಶ್ಚಿಕ ರಾಶಿ - ಈ ರಾಶಿಗಳ ಜನರಿಗೆ ಸಂಬಂಧಗಳ ಮಹತ್ವ ತಿಳಿದಿರುತ್ತದೆ. ಆದರೆ, ಕೆಲವೊಮ್ಮೆ ಅವರು ಅವುಗಳನ್ನು ನಿಭಾಯಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಆದರೆ ವಿಷಯವು ತಮ್ಮ ಕೈಯಿಂದ ಜಾರುತ್ತಿದೆ ಎಂದು ಅವರು ಭಾವಿಸಲು ಪ್ರಾರಂಭಿಸಿದಾಗ, ಅವರು ಆ ಸಂಬಂಧವನ್ನು ಮುಂದುವರೆಸಲು ಬಯಸುವುದಿಲ್ಲ ಅಥವಾ ಸಂಬಂಧವನ್ನು ಹೆಚ್ಚು ಎಳೆದಾಡುವ ಗೋಜಿಗೆ ಹೋಗುವುದಿಲ್ಲ. ಆದರೆ ಈ ರಾಶಿಯ ಜನರ ವಿಶೇಷತೆ ಎಂದರೆ, ಈ ಜನರು ತಮ್ಮ ಸಂಗಾತಿಯ ಜೊತೆಗೆ ಕಳೆದ ಕ್ಷಣಗಳನ್ನು ಸುಲಭವಾಗಿ ಮರೆಯುವುದಿಲ್ಲ.
ಇದನ್ನೂ ಓದಿ-Relationship Secrets: ಮಹಿಳೆಯರು ಇಂತಹ ಪುರುಷರತ್ತ ಹೆಚ್ಚು ಆಕರ್ಷಿತರಾಗ್ತಾರಂತೆ! ಕಾರಣ ರೋಚಕವಾಗಿದೆ!
ಕುಂಭ ರಾಶಿ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯವರು ಚಂಚಲ ಸ್ವಭಾವದವರಾಗಿರುತ್ತಾರೆ. ಇದೇ ಕಾರಣದಿಂದ ಇವರು ಜೀವನದಲ್ಲಿ ಒಂದಲ್ಲ ಹಲವಾರು ಬಾರಿ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ, ಜನರು ಯಾವುದೇ ಒಂದು ಸಂಬಂಧದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಈ ಸ್ವಭಾವದಿಂದಾಗಿ, ಸಂಗಾತಿಯೊಂದಿಗಿನ ವಿಚ್ಛೇದನೆ ತ್ವರಿತವಾಗಿ ಸಂಭವಿಸುತ್ತದೆ. ಈ ಜನರು ಸ್ವಾತಂತ್ರ್ಯವನ್ನು ಇಷ್ಟಪಡುತ್ತಾರೆ ಮತ್ತು ಈ ಕಾರಣದಿಂದಾಗಿ ಅವರು ಯಾರೊಂದಿಗೂ ದೀರ್ಘಕಾಲ ಉಳಿಯಲು ಸಾಧ್ಯವಾಗುವುದಿಲ್ಲ.
(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ