White Hair Turns Black Naturally : ಕೆಲವು ವರ್ಷಗಳ ಹಿಂದೆ ವೃದ್ಧಾಪ್ಯದಲ್ಲಿ ಬಿಳಿ ಕೂದಲು ಬರುತ್ತಿತ್ತು.. ಆದರೆ ಆಧುನಿಕ ಜೀವನ ಶೈಲಿಯಿಂದಾಗಿ ಯೌವನದಲ್ಲೂ ಬಿಳಿ ಕೂದಲು ಬರಲಾರಂಭಿಸಿದೆ. ಇಂದಿನ ದಿನಗಳಲ್ಲಿ ದೊಡ್ಡ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಬಿಳಿ ಕೂದಲು ಬರುತ್ತಿದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಹಲವು ಬಗೆಯ ಉತ್ಪನ್ನಗಳನ್ನು ಬಳಸುತ್ತಾರೆ. ಇವುಗಳ ಬಳಕೆಯಿಂದ ಕೂದಲು ಕಪ್ಪಾಗಬಹುದು. ಆದರೆ ಇದರ ಪರಿಣಾಮ ಕೆಲವೇ ದಿನಗಳವರೆಗೆ ಇರುತ್ತದೆ. ನಂತರ ಕೂದಲು ಎಂದಿನಂತೆ ಬೆಳ್ಳಗಾಗುತ್ತದೆ. ಜೊತೆಗೆ ಕೆಮಿಕಲ್ ಇರುವ ಹೇರ್ ಪ್ರಾಡಕ್ಟ್ ಬಳಕೆಯಿಂದ ಹಲವಾರು ಮಂದಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬದಲಿಗೆ ಆಯುರ್ವೇದ ತಜ್ಞರು ಸೂಚಿಸಿದ ಕೆಲವು ಸಲಹೆಗಳನ್ನು ಅನುಸರಿಸಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇದಲ್ಲದೆ, ಬಿಳಿ ಕೂದಲು ಶಾಶ್ವತವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ.


COMMERCIAL BREAK
SCROLL TO CONTINUE READING

ಬ್ಲ್ಯಾಕ್ ಟೀ : ಬಿಳಿ ಕೂದಲಿಗೆ ಬ್ಲ್ಯಾಕ್ ಟೀ ಪರಿಣಾಮಕಾರಿ ಎನ್ನುತ್ತಾರೆ ಆಯುರ್ವೇದ ತಜ್ಞರು. ಇದರಲ್ಲಿರುವ ಆಯುರ್ವೇದ ಗುಣಗಳು ಕೂದಲನ್ನು ಕಪ್ಪಾಗಿಸುವುದು ಮಾತ್ರವಲ್ಲದೆ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಮೊದಲು ಕಪ್ಪು ಚಹಾ ಎಲೆಗಳನ್ನು ತೆಗೆದುಕೊಳ್ಳಬೇಕು. ಅವುಗಳನ್ನು ನುಣ್ಣಗೆ ರುಬ್ಬಿಕೊಳ್ಳಿ ಮತ್ತು ಒಂದು ಪಾತ್ರೆಯಲ್ಲಿ ಹಾಕಿ. ಇದರಲ್ಲಿ ಎರಡು ಗ್ರೀನ್ ಟೀ ಬ್ಯಾಗ್ ಗಳನ್ನು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ಕುದಿಯಲು ಆರಂಭಿಸಿದಾಗ ಗ್ಯಾಸ್‌ ಆಫ್‌ ಮಾಡಿ. ಹೀಗೆ ತಯಾರಿಸಿದ ಬ್ಲ್ಯಾಕ್ ಟೀಯನ್ನು ತಣ್ಣಗಾದ ನಂತರ ಹತ್ತಿ ಬಟ್ಟೆಯಿಂದ ಕೂದಲಿಗೆ ಹಚ್ಚಿದರೆ ಸಾಕು. ಇದನ್ನು ನಿಯಮಿತವಾಗಿ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುವುದಲ್ಲದೆ ಸ್ಟ್ರಾಂಗ್ ಆಗುತ್ತದೆ.


ಇದನ್ನೂ ಓದಿ : 


ನಿಂಬೆ ರಸ, ತೆಂಗಿನ ಎಣ್ಣೆ: ನಿಂಬೆ ರಸವು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ತಲೆಹೊಟ್ಟು ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಕೂದಲಿಗೆ ಹಚ್ಚುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಅದೇ ನಿಂಬೆರಸಕ್ಕೆ ನಾಲ್ಕು ಚಮಚ ತೆಂಗಿನೆಣ್ಣೆ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ಇದರಿಂದ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.


ಕರಿಬೇವಿನ ಎಲೆಗಳು ಮತ್ತು ತೆಂಗಿನ ಎಣ್ಣೆಯ ಮಿಶ್ರಣ: ಕರಿಬೇವಿನ ಎಲೆಗಳು ಬಿಳಿ ಕೂದಲಿಗೆ ಪರಿಣಾಮಕಾರಿ. ಇದರಲ್ಲಿರುವ ಆಯುರ್ವೇದ ಗುಣಗಳು ಎಲ್ಲಾ ರೀತಿಯ ಕೂದಲಿನ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಆದರೆ ಈ ಪರಿಹಾರವನ್ನು ತಯಾರಿಸಲು, ಕರಿಬೇವಿನ ಎಲೆಗಳನ್ನು ಮೊದಲು ತೆಗೆದುಕೊಳ್ಳಿ. ಅದನ್ನು ಪೇಸ್ಟ್‌ ಮಾಡಿ. ಅದಕ್ಕೆ ಬೇಕಾದಷ್ಟು ತೆಂಗಿನೆಣ್ಣೆ ಸೇರಿಸಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಒಣಗಿದ ನಂತರ ತೊಳೆದರೆ ಉತ್ತಮ ಫಲಿತಾಂಶ ಸಿಗುತ್ತದೆ.


ಇದನ್ನೂ ಓದಿ : ಈ ಸೊಪ್ಪಿನಲ್ಲಿದೆ ತ್ವಚೆಯನ್ನು ಹೊಳೆಯುವಂತೆ ಮಾಡುವ ಶಕ್ತಿ..! ಆದರೆ ಹೀಗೆ ಬಳಸಿ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.