ಹೆಂಡತಿ ಗಂಡನ ಎಡಭಾಗದಲ್ಲಿ ಏಕೆ ಕುಳಿತುಕೊಳ್ಳುತ್ತಾಳೆ?: ಕಾರಣವೇನೆಂದು ತಿಳಿಯಿರಿ
ಪುರಾಣದ ನಂಬಿಕೆಗಳ ಪ್ರಕಾರ ಬ್ರಹ್ಮನ ಬಲ ಭುಜದಿಂದ ಪುರುಷ ಮತ್ತು ಎಡ ಭುಜದಿಂದ ಮಹಿಳೆ ಜನಿಸಿದರು. ಈ ಕಾರಣಕ್ಕಾಗಿ ಮಹಿಳೆಯನ್ನು ವಾಮಾಂಗಿ ಎಂದು ಕರೆಯಲಾಗುತ್ತದೆ. ಅಲ್ಲದೆ ಮದುವೆಯ ನಂತರ ಮಹಿಳೆಯರು ಸಾಮಾನ್ಯವಾಗಿ ಗಂಡನ ಎಡಭಾಗದಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ ಯಾವುದೇ ವಿಶೇಷ ಧಾರ್ಮಿಕ ಆಚರಣೆಗಳಲ್ಲಿ ಹೆಂಡತಿಯು ಪತಿಯ ಬಲಭಾಗದಲ್ಲಿ ಕುಳಿತುಕೊಳ್ಳಬೇಕು
ನವದೆಹಲಿ: ಪತಿ-ಪತ್ನಿಯರ ನಡುವಿನ ಸಂಬಂಧ ತುಂಬಾ ಕೋಮಲ ಮತ್ತು ಪರಿಶುದ್ಧ. ಏಕೆಂದರೆ ಇದು ನಂಬಿಕೆಯ ಬಲವಾದ ಬಂಧದಿಂದ ಬಂಧಿಸಲ್ಪಟ್ಟಿದೆ. ಹೆಂಡತಿ ಗಂಡನ ಅರ್ಧ ಭಾಗ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಅವರನ್ನು ಅರ್ಧಾಂಗಿನಿ ಎಂದು ಕರೆಯಲಾಗುತ್ತದೆ. ಧಾರ್ಮಿಕ ಗ್ರಂಥಗಳಲ್ಲಿ ಮಹಿಳೆಯನ್ನು ಪುರುಷನ ವಾಮಾಂಗಿ ಎಂದು ಕರೆಯಲಾಗುತ್ತದೆ. ಹೆಂಡತಿ ಪುರುಷನ ಎಡಭಾಗದಲ್ಲಿ ಕುಳಿತುಕೊಳ್ಳಬೇಕು ಎಂದು ನೀವು ಆಗಾಗ ಕೇಳಿರಬಹುದು. ಮದುವೆಯಲ್ಲಿಯೂ ಹೆಂಡತಿಯನ್ನು ಎಡಭಾಗದಲ್ಲಿ ಕೂರಿಸಲಾಗುತ್ತದೆ. ಅಷ್ಟಕ್ಕೂ ಇದು ಏಕೆ ಹೀಗೆ ಎಂಬುದು ಗೊತ್ತೆ..?
ಸ್ತ್ರೀ ಆಧಾರಿತ ಕೆಲಸದಲ್ಲಿ ಹೆಂಡತಿ ಎಡಭಾಗದಲ್ಲಿರುತ್ತಾಳೆ
ಪುರಾಣದ ನಂಬಿಕೆಗಳ ಪ್ರಕಾರ ಬ್ರಹ್ಮನ ಬಲ ಭುಜದಿಂದ ಪುರುಷ ಮತ್ತು ಎಡ ಭುಜದಿಂದ ಮಹಿಳೆ ಜನಿಸಿದರು. ಈ ಕಾರಣಕ್ಕಾಗಿ ಮಹಿಳೆಯನ್ನು ವಾಮಾಂಗಿ ಎಂದು ಕರೆಯಲಾಗುತ್ತದೆ. ಅಲ್ಲದೆ ಮದುವೆಯ ನಂತರ ಮಹಿಳೆಯರು ಸಾಮಾನ್ಯವಾಗಿ ಗಂಡನ ಎಡಭಾಗದಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ ಯಾವುದೇ ವಿಶೇಷ ಧಾರ್ಮಿಕ ಆಚರಣೆಗಳಲ್ಲಿ ಹೆಂಡತಿಯು ಪತಿಯ ಬಲಭಾಗದಲ್ಲಿ ಕುಳಿತುಕೊಳ್ಳಬೇಕು. ಅದೇ ರೀತಿ ಸ್ತ್ರೀ-ಆಧಾರಿತ ಧಾರ್ಮಿಕ ಕಾರ್ಯಗಳನ್ನು ನಡೆಸಿದಾಗ ಹೆಂಡತಿ ಕೂಡ ಗಂಡನ ಎಡಭಾಗದಲ್ಲಿ ಕುಳಿತುಕೊಳ್ಳುತ್ತಾಳೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಸಿಂಧೂರ, ಆಹಾರ, ನಿದ್ರೆ ಮತ್ತು ಸೇವೆಯ ಸಮಯದಲ್ಲಿ ಹೆಂಡತಿ ತನ್ನ ಗಂಡನ ಎಡಭಾಗದಲ್ಲಿ ಇರಬೇಕು ಎಂದು ನಂಬಲಾಗಿದೆ.
ಇದನ್ನೂ ಓದಿ: ನೀವೂ ಕಬ್ಬಿಣದ ಉಂಗುರ ಧರಿಸುತ್ತೀರಾ..?: ಹಾಗಾದರೆ ಈ ವಿಷಯಗಳನ್ನು ತಿಳಿದುಕೊಳ್ಳಿ
ಜ್ಯೋತಿಷ್ಯ ಏನು ಹೇಳುತ್ತದೆ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಿಳೆಯ ಎಡಭಾಗ ಮತ್ತು ಪುರುಷನ ಬಲಭಾಗವು ಮಂಗಳಕರವಾಗಿದೆ. ಇದಲ್ಲದೆ ಶರೀರಶಾಸ್ತ್ರದ ಪ್ರಕಾರ ಮಾನವ ಮೆದುಳಿನ ಎಡಭಾಗವು ಸೃಜನಶೀಲವಾಗಿದೆ. ಅಲ್ಲದೆ ಬಲಭಾಗವು ಕರ್ಮ-ಆಧಾರಿತವಾಗಿದೆ. ಮಹಿಳೆಯರು ಪುರುಷರ ಎಡಭಾಗದಲ್ಲಿ ಕುಳಿತುಕೊಳ್ಳಲು ಇದೂ ಒಂದು ಕಾರಣ.
ಈ ಕಾರ್ಯಗಳ ವೇಳೆ ಹೆಂಡತಿ ಬಲಭಾಗದಲ್ಲಿರುತ್ತಾಳೆ
ಶಾಸ್ತ್ರಗಳ ಪ್ರಕಾರ ಕನ್ಯಾದಾನ, ವಿವಾಹ, ಪೂಜೆ, ಯಾಗದ ಸಂದರ್ಭದಲ್ಲಿ ಪತ್ನಿಯು ಪತಿಯ ಬಲಭಾಗದಲ್ಲಿ ಕುಳಿತುಕೊಳ್ಳುವುದು ಮಂಗಳಕರ. ಅದೇ ರೀತಿ ಸಹಬಾಳ್ವೆಯ ಸಮಯದಲ್ಲಿ, ಆಶೀರ್ವಾದವನ್ನು ತೆಗೆದುಕೊಳ್ಳುವಾಗ ಹೆಂಡತಿಯು ತನ್ನ ಗಂಡನ ಎಡಭಾಗದಲ್ಲಿರುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಈ ದೇವಾಲಯದಲ್ಲಿ ಶೂ-ಚಪ್ಪಲಿ ಅರ್ಪಿಸುವುದರಿಂದ ವ್ರತಗಳು ನೆರವೇರುತ್ತವೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.