ನವದೆಹಲಿ: ಸಾಮಾನ್ಯವಾಗಿ ಜನರು ದೇವರನ್ನು ಪೂಜಿಸಲು ದೇವಸ್ಥಾನಕ್ಕೆ ಹೋಗುತ್ತಾರೆ. ದೇವರಿಗೆ ನೈವೇದ್ಯ, ಪ್ರಸಾದ, ಹೂವುಗಳನ್ನು ಅರ್ಪಿಸಲು ಹೋಗುತ್ತಾರೆ. ಆದರೆ ಇಲ್ಲಿರುವ ದೇವಿಯ ದೇವಸ್ಥಾನದಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಶೂ ಮತ್ತು ಚಪ್ಪಲಿಗಳ ಮಾಲೆ(Footwear Festival)ಗಳನ್ನು ಅರ್ಪಿಸುತ್ತಾರೆ. ಈ ದೇವಸ್ಥಾನದಲ್ಲಿ ಭಕ್ತರು ಇದನ್ನು ಏಕೆ ಮಾಡುತ್ತಾರೆ ಮತ್ತು ಈ ದೇವಾಲಯಕ್ಕೆ ಸಂಬಂಧಿಸಿದ ಸಂಪ್ರದಾಯಗಳು ಯಾವುವು ಎಂಬುದನ್ನು ತಿಳಿಯಿರಿ.
ಪಾದರಕ್ಷೆ ಉತ್ಸವವನ್ನು ಆಯೋಜಿಸಲಾಗುತ್ತದೆ
ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಲಕ್ಷ್ಮಿದೇವಿ ದೇವಸ್ಥಾನ(Laxmidevi Temple)ವಿದೆ. ಪ್ರತಿ ವರ್ಷ ಈ ದೇವಾಲಯದಲ್ಲಿ ಪಾದರಕ್ಷೆ ಉತ್ಸವವನ್ನು ಆಯೋಜಿಸಲಾಗುತ್ತದೆ. ಇಲ್ಲಿಗೆ ದೂರದ ಊರುಗಳಿಂದ ಬರುವ ಭಕ್ತರು ಅಮ್ಮನಿಗೆ ಚಪ್ಪಲಿ ಅರ್ಪಿಸಲು ಬರುತ್ತಾರೆ. ಈ ಹಬ್ಬದಲ್ಲಿ ಪ್ರಮುಖವಾಗಿ ಗೋಳ-ಬಿ ಎಂಬ ಹೆಸರಿನ ಗ್ರಾಮದ ಜನರು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಈ ವಿಶಿಷ್ಟ ಪದ್ಧತಿಯಿಂದ ಈ ದೇವಿಯ ದೇವಾಲಯವು ಪ್ರಸಿದ್ಧವಾಗಿದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: Shani Dev: ಶನಿಯ ನಿಧಾನಗತಿಯ ಚಲನೆಗೂ, ರಾವಣನಿಗೂ ಇದೆಯೇ ನಂಟು!
ಆಸೆಗಳು ಈಡೇರುತ್ತವೆ ಎಂಬುದು ನಂಬಿಕೆ
ಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷ ದೀಪಾವಳಿಯ 6ನೇ ದಿನದಂದು ಪಾದರಕ್ಷೆ ಉತ್ಸವ(Laxmi Devi Temple Karnataka)ವನ್ನು ಆಯೋಜಿಸಲಾಗುತ್ತದೆ. ಜನರು ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ದೇವಾಲಯದ ಆವರಣದಲ್ಲಿರುವ ಮರದ ಮೇಲೆ ಬೂಟುಗಳು ಮತ್ತು ಚಪ್ಪಲಿಗಳನ್ನು ನೇತುಹಾಕುತ್ತಾರೆ. ಹೀಗೆ ಮಾಡುವುದರಿಂದ ಮೊಣಕಾಲು ಸಮಸ್ಯೆ ದೂರವಾಗುತ್ತದೆ ಎಂಬ ನಂಬಿಕೆಯೂ ಇದೆ. ಅಲ್ಲದೆ ದುಷ್ಟ ಶಕ್ತಿಗಳು ಯಾವಾಗಲೂ ದೂರವಿರುತ್ತವೆ. ಇದಲ್ಲದೆ ಈ ದೇವಾಲಯದಲ್ಲಿ ಮಾಂಸಾಹಾರ ಮತ್ತು ಸಸ್ಯಾಹಾರಿ ಭಕ್ಷ್ಯಗಳನ್ನು ನೀಡಲಾಗುತ್ತದೆ. ಈ ದೇವಾಲಯಕ್ಕೆ ಹಿಂದೂಗಳು ಮಾತ್ರವಲ್ಲದೆ ಮುಸ್ಲಿಂ ಸಮುದಾಯದವರೂ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಬರುತ್ತಾರೆ ಎಂಬುದು ಅಚ್ಚರಿಯ ಸಂಗತಿ.
ಇದನ್ನೂ ಓದಿ: Coconut: ಪೂಜೆಗೆ ಬಳಸುವ ತೆಂಗಿನಕಾಯಿಯನ್ನು ಮಹಿಳೆಯರು ಏಕೆ ಒಡೆಯಬಾರದು? ಇಲ್ಲಿದೆ ಕಾರಣ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.