ಬೆಂಗಳೂರು: Soaking Almonds Benefits- ಹಸಿ ಅಥವಾ ಹುರಿದ ಬಾದಾಮಿಯನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿಯೇ ಅಥವಾ ನೆನೆಸಿದ ಬಾದಾಮಿಯನ್ನು ತಿನ್ನುವುದು ಆರೋಗ್ಯಕರವೇ? ಎಂಬ ಬಗ್ಗೆ ಹಲವರಲ್ಲಿ ಗೊಂದಲವಿದೆ. ಹೆಚ್ಚಿನ ಜನರು ಬಾದಾಮಿಯನ್ನು ನೆನೆಸಿ ಅದರ ಸಿಪ್ಪೆ ತೆಗೆದು ಬಳಿಕ ಸೇವಿಸುತ್ತಾರೆ. ಬಾದಾಮಿಯನ್ನು ಹಸಿಯಾಗಿ ಅಥವಾ ಹುರಿದು ತಿನ್ನುವುದಕ್ಕಿಂತ ಅದನ್ನು ರಾತ್ರಿಯಿಡೀ ನೆನೆಸಿಟ್ಟು, ಬೆಳಿಗ್ಗೆ ಅದರ ಸಿಪ್ಪೆ ತೆಗೆದು ಸೇವಿಸುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹಾಗಾಗಿ, ನೆನೆಸಿ, ಸಿಪ್ಪೆ ತೆಗೆದ ಬಾದಾಮಿ ಆರೋಗ್ಯಕ್ಕೆ ಹೇಗೆ ಲಾಭದಾಯಕವಾಗಿದೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಬಾದಾಮಿಯು ಅನೇಕ ಪೋಷಕಾಂಶಗಳನ್ನು ಹೊಂದಿದ್ದು ಫೈಬರ್ (Fiber), ಪ್ರೋಟೀನ್ (Protein), ವಿಟಮಿನ್ ಇ (Vitamin E), ಮೆಗ್ನೀಶಿಯಂ (Magnesium), ಮ್ಯಾಂಗನೀಸ್ (Manganese), ತಾಮ್ರ (Coppper) ಮತ್ತು ರಂಜಕದ (Phosphorous) ಅತ್ಯುತ್ತಮ ಮೂಲವಾಗಿದೆ. ಹಾಗಾಗಿ ಬಾದಾಮಿಯು ತೂಕ ನಷ್ಟದಿಂದ (Weight Loss) ಹಿಡಿದು ಮೂಳೆಗಳ ಆರೋಗ್ಯ, ಮನಸ್ಥಿತಿಯನ್ನು ಸುಧಾರಿಸಲು ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹ ಕೆಲಸ ಮಾಡುತ್ತದೆ.


ಒಂದು ಅಧ್ಯಯನದ ಪ್ರಕಾರ, ಬಾದಾಮಿ, ಕಡಲೆಕಾಯಿ ಮತ್ತು ವಾಲ್ನಟ್ಸ್ ನಂತಹ ಆಹಾರ ಪದಾರ್ಥಗಳನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಈ ಆಹಾರಗಳನ್ನು ತಿನ್ನದವರಿಗಿಂತ ನಿಮಗೆ ಸ್ತನ ಕ್ಯಾನ್ಸರ್ ಬರುವ ಅಪಾಯ ಕಡಿಮೆ ಎಂದು ತಿಳಿದುಬಂದಿದೆ. 


ಇದನ್ನೂ ಓದಿ- Clove For Skin: ಲವಂಗವನ್ನು ಈ ರೀತಿ ಬಳಸಿ ಮುಖದ ಸುಕ್ಕಿನ ಸಮಸ್ಯೆ ನಿವಾರಿಸಿ


ಉತ್ಕರ್ಷಣ ನಿರೋಧಕಗಳ ಮಟ್ಟವನ್ನು ಹೆಚ್ಚಿಸುತ್ತದೆ (Increases the level of antioxidants) :
ಬಾದಾಮಿಯನ್ನು ತಿನ್ನುವುದರಿಂದ ರಕ್ತದಲ್ಲಿನ ಉತ್ಕರ್ಷಣ ನಿರೋಧಕಗಳ ಮಟ್ಟವು ಹೆಚ್ಚಾಗುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ. ಟೈಪ್ 2 ಡಯಾಬಿಟಿಸ್ ರೋಗಿಗಳಿಗೂ ಬಾದಾಮಿ ಪ್ರಯೋಜನಕಾರಿ. ಇದರಲ್ಲಿರುವ ಮೆಗ್ನೀಸಿಯಮ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀವು ಬಾದಾಮಿಯನ್ನು ರಾತ್ರಿ ಪೂರ್ತಿ ನೆನೆಸಿಟ್ಟು, ಬೆಳಿಗ್ಗೆ ಅದರ ಸಿಪ್ಪೆ ತೆಗೆದು ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ.


ನೆನೆಸಿದ ಬಾದಾಮಿಯ ಕೆಲವು ಮುಖ್ಯ ಪ್ರಯೋಜನಗಳಿವು (Soaking Almonds Benefits): 
ಜೀರ್ಣಕ್ರಿಯೆಗಾಗಿ (For Digestion) :
ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಜೀರ್ಣಕ್ರಿಯೆಯು (Digestion) ಉತ್ತಮವಾಗಿರುತ್ತದೆ. ಇದರೊಂದಿಗೆ ನೆನೆಸುವುದರಿಂದ ಅವು ಮೃದುವಾಗುತ್ತವೆ ಮತ್ತು ಅವುಗಳನ್ನು ಅಗಿಯಲು ಸುಲಭವಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯಲ್ಲಿ ಆಹಾರದ ವಿಭಜನೆಯ ಸಮಯದಲ್ಲಿ ಸಹಾಯ ಮಾಡುತ್ತದೆ. ಬಾದಾಮಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ ಮತ್ತು ನಾವು ಅದನ್ನು ನೆನೆಸಿದಾಗ, ಅದರ ಪ್ರಯೋಜನಗಳು ದ್ವಿಗುಣಗೊಳ್ಳುತ್ತವೆ.


ಹೆಚ್ಚಿನ ಪೌಷ್ಠಿಕಾಂಶವನ್ನು ಪಡೆಯುವಿರಿ (Get More Nutrition) :
ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ (Soaking Almonds Benefits), ನೀವು ಅದರಿಂದ ಹೆಚ್ಚಿನ ಪೋಷಣೆಯನ್ನು ಪಡೆಯುತ್ತೀರಿ. ಈ ಕಾರಣದಿಂದಾಗಿ, ಬಾದಾಮಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನ ಪ್ರಯೋಜನಗಳು ಮತ್ತಷ್ಟು ಹೆಚ್ಚಾಗುತ್ತವೆ. ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ, ಆ ಕಲ್ಮಶಗಳು ಸಹ ಹೋಗುತ್ತವೆ, ಇದು ದೇಹವು ಕೆಲವು ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.


ಇದನ್ನೂ ಓದಿ- Dark Spots on Face: ಚರ್ಮದ ಮೇಲಿನ ಕಲೆ ನಿವಾರಣೆಗೆ ಶುಂಠಿಯನ್ನು ಈ ರೀತಿ ಬಳಸಿ


ತೂಕ ಇಳಿಸುವಲ್ಲಿ ಸಹಾಯಕ (Reducing Weight) :
ನೆನೆಸಿದ ಬಾದಾಮಿಯನ್ನು ತಿನ್ನುವುದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಲಿಪೇಸ್ ನಂತಹ ಕೆಲವು ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. 


ನೀವು ಬಾದಾಮಿಯನ್ನು ನೆನೆಸದೆ, ಹಸಿಯಾಗಿ ಅಥವಾ ಹುರಿದು ತಿನ್ನುವುದರಿಂದ ಅದರಲ್ಲಿರುವ ಫೈಟಿಕ್ ಆಮ್ಲವನ್ನು ತೆಗೆದುಹಾಕಲಾಗುವುದಿಲ್ಲ, ಇದು ನಂತರ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ನೀವು ಹಸಿ ಬಾದಾಮಿಯನ್ನು ಸೇವಿಸಿದರೆ, ನಿಮ್ಮ ದೇಹವು ಅದರಲ್ಲಿರುವ ಸತು ಮತ್ತು ಕಬ್ಬಿಣದ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.


ಇಂತಹ ಜನರು ನೆನೆಸಿದ ಬಾದಾಮಿಯನ್ನು ಮಾತ್ರ ಸೇವಿಸಬೇಕು:
ವಯಸ್ಸಾದವರು ಮತ್ತು ಜೀರ್ಣಕ್ರಿಯೆ ಅಥವಾ ಹಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರು ಬಾದಾಮಿಯನ್ನು ನೆನೆಸಿ ತಿನ್ನುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ.


ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.