ಸೌತೆಕಾಯಿ ಅಥವಾ ಮುಳ್ಳುಸೌತೆಕಾಯಿ ತಿಂದ ಬಳಿಕ ನೀರು ಕುಡಿದರೆ ಆರೋಗ್ಯಕ್ಕೆ ದೊಡ್ಡ ಹಾನಿಯಾಗುತ್ತದೆ. ಸೌತೆಕಾಯಿಯಲ್ಲಿ ನೀರು ಮತ್ತು ಇತರ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿರುತ್ತವೆ ಆದರೆ ಅದನ್ನು ತಿಂದ ನಂತರ ನೀರು ಕುಡಿಯುವುದರಿಂದ ದೇಹಕ್ಕೆ ಪೋಷಕಾಂಶಗಳು ಸರಿಯಾದ ರೀತಿಯಲ್ಲಿ ಸಿಗುವುದಿಲ್ಲ. ಇದು ಜೀರ್ಣಕ್ರಿಯೆ ಮತ್ತು ಹೀರಿಕೊಳ್ಳುವಿಕೆಯ ನೈಸರ್ಗಿಕ ಪ್ರಕ್ರಿಯೆಯನ್ನು ಸಹ ಹಾನಿಗೊಳಿಸುತ್ತದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: PSI Scam: ‘ಸರ್ಕಾರಕ್ಕೆ ನೈತಿಕತೆ ಇದ್ದರೆ ಗೃಹಸಚಿವರ ರಾಜೀನಾಮೆ ಪಡೆದು, ತನಿಖೆಗೆ ಒಳಪಡಿಸಬೇಕು’


ದುಷ್ಪರಿಣಾಮಗಳು:
ಹೆಚ್ಚಿನವರು ಸೌತೆಕಾಯಿಯನ್ನು ಸಲಾಡ್ ರೂಪದಲ್ಲಿ ಸೇವಿಸುತ್ತಾರೆ. ಇನ್ನು ವಿದೇಶಗಳಲ್ಲಿ ಇದನ್ನು ಉಪ್ಪಿನಕಾಯಿಯ ರೀತಿ ತಯಾರಿಸಿ ತಿನ್ನುತ್ತಾರೆ.  ಸೌತೆಕಾಯಿಯಲ್ಲಿ ಶೇಕಡಾ 95ರಷ್ಟು ಪ್ರಮಾಣದಲ್ಲಿ ನೀರು ಇರುತ್ತದೆ. ಇದಲ್ಲದೆ ವಿಟಮಿನ್ ಸಿ, ವಿಟಮಿನ್ ಕೆ, ತಾಮ್ರ, ಮೆಗ್ನೀಶಿಯಮ್, ಪೊಟ್ಯಾಶಿಯಮ್ ಮತ್ತು ಮ್ಯಾಂಗನೀಸ್‌ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಸೌತೆಕಾಯಿಯನ್ನು ತಿಂದ ನಂತರ ನೀರು ಕುಡಿದರೆ GI ಚಲನಶೀಲತೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಜೀರ್ಣಕ್ರಿಯೆ ಮತ್ತು ಹೀರಿಕೊಳ್ಳುವಿಕೆಯ ನೈಸರ್ಗಿಕ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತದೆ.


ಜೀರ್ಣಕ್ರಿಯೆ ಸಮಸ್ಯೆಗಳು:
ಆಹಾರವನ್ನು ಜೀರ್ಣಿಸಿಕೊಳ್ಳಲು pH ಮಟ್ಟ ಅಗತ್ಯವಿದೆ. ಸೌತೆಕಾಯಿಯೊಂದಿಗೆ ಅಥವಾ ನಂತರ ನೀರು ಕುಡಿಯುವುದು pH ಮಟ್ಟವನ್ನು ದುರ್ಬಲಗೊಳಿಸುತ್ತದೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. 


ಅತಿಸಾರ :
ಸೌತೆಕಾಯಿಯನ್ನು ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಆದರೆ ನೀವು ಸೌತೆಕಾಯಿ ತಿಂದ ನಂತರ ನೀರು ಕುಡಿದರೆ ಅದು ಅತಿಸಾರವನ್ನು ಉಂಟುಮಾಡಬಹುದು. ಸೌತೆಕಾಯಿ ತಿನ್ನುವ ಮತ್ತು ಕುಡಿಯುವ ನೀರಿನ ನಡುವೆ ಕನಿಷ್ಠ 20 ನಿಮಿಷಗಳ ಅಂತರವನ್ನು ಇರಿಸಿದರೆ ಒಳಿತು.


ಇದನ್ನು ಓದಿ: ಪ್ರಧಾನಿ ಮೋದಿಯವರ ಸಲಹೆಗಾರರಾಗಿ ತರುಣ್‌ ಕಪೂರ್‌ ನೇಮಕ


ಆಹಾರ ಮಾನವನ ದೇಹಕ್ಕೆ ಎಷ್ಟರ ಮಟ್ಟಿಗೆ ಮುಖ್ಯವೋ ಅವುಗಳನ್ನು ಯಾವ ರೀತಿ ಸೇವಿಸುತ್ತೇವೆ ಎಂಬುದು ಸಹ ಮುಖ್ಯವಾಗುತ್ತದೆ. ಪದ್ಧತಿ ಪ್ರಕಾರ ತಿಂದರೆ ಆಹಾರ ಅಮೃತವಾಗುತ್ತದೆ, ಅದನ್ನು ಹೊರತು ಮನಸ್ಸಿಗೆ ತೋಚಿದನ್ನು ಸೇವಿಸಿದರೆ ವಿಷವಾಗಿಯೂ ಪರಿಣಮಿಸಬಹುದು. ಈ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರ ಸಲಹೆಯೊಂದಿಗೆ ಉತ್ತಮ ಆಹಾರ ಪದ್ಧತಿಯನ್ನು ಬೆಳೆಸಿಕೊಳ್ಳುವುದು ಸೂಕ್ತ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.