PSI Scam: ‘ಸರ್ಕಾರಕ್ಕೆ ನೈತಿಕತೆ ಇದ್ದರೆ ಗೃಹಸಚಿವರ ರಾಜೀನಾಮೆ ಪಡೆದು, ತನಿಖೆಗೆ ಒಳಪಡಿಸಬೇಕು’

ಕುಂಬಳಕಾಯಿ ಕಳ್ಳ ಎಂದಾಕ್ಷಣ ಅಶ್ವತ್ಥ್ ನಾರಾಯಣ್ ಅವರು ಹೆಗಲು ಮುಟ್ಟಿಕೊಳ್ಳುವುದಷ್ಟೇ ಅಲ್ಲ ಹಾವು ತುಳಿದಂತೆ ಗಾಭರಿ ಆಗಿರುವುದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Zee Kannada News Desk | Last Updated : May 2, 2022, 06:22 PM IST
  • 545 PSI ಹುದ್ದೆಗಳ ನೇಮಕಾತಿ ಪರೀಕ್ಷೆ ಅಕ್ರಮ ಇಡೀ ಕರ್ನಾಟಕಕ್ಕೆ ಸುತ್ತಿಕೊಂಡಿದೆ
  • ಕಲಬುರಗಿ ಭಾಗದ ರೂವಾರಿಗಳ ಬಂಧನವಾಗಿದೆ, ಬೆಂಗಳೂರು ಭಾಗದವರ ಒಳಸುಳಿಗಳು ಈಗ ಹೊರಬರುತ್ತಿದೆ
  • ಕುಂಬಳಕಾಯಿ ಕಳ್ಳ ಎಂದಾಕ್ಷಣ ಸಿ.ಎನ್.ಅಶ್ವತ್ಥ್ ನಾರಾಯಣ್ ಹಾವು ತುಳಿದಂತೆ ಗಾಭರಿ ಆಗಿರುವುದೇಕೆ?
PSI Scam: ‘ಸರ್ಕಾರಕ್ಕೆ ನೈತಿಕತೆ ಇದ್ದರೆ ಗೃಹಸಚಿವರ ರಾಜೀನಾಮೆ ಪಡೆದು, ತನಿಖೆಗೆ ಒಳಪಡಿಸಬೇಕು’ title=
ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ವಿರುದ್ಧ ಕಾಂಗ್ರೆಸ್ ಆರೋಪ

ಬೆಂಗಳೂರು: 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಪ್ರಕರಣ ಸಂಬಂಧ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದ್ದು, ‘ಸರ್ಕಾರಕ್ಕೆ ನೈತಿಕತೆ ಇದ್ದರೆ ಗೃಹಸಚಿವ ಆರಗ ಜ್ನಾನೇಂದ್ರ ಅವರ ರಾಜೀನಾಮೆ ಪಡೆದು, ಅವರನ್ನು ತನಿಖೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದೆ.

‘PSI ಪರೀಕ್ಷೆ ಅಕ್ರಮ ಇಡೀ ಕರ್ನಾಟಕಕ್ಕೆ ಸುತ್ತಿಕೊಂಡಿದೆ, ಅಂದು ಸದನದಲ್ಲಿ ಗೃಹಸಚಿವರ ಜೊತೆಗೆ ಸಮರ್ಥನೆಗೆ ನಿಂತಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರೇ ಅಂದಿನ ನಿಮ್ಮ ‘ಹಗರಣವೇ ನಡೆದಿಲ್ಲ’ ಎಂಬ ಸಮರ್ಥನೆಗೆ ಕಾರಣ ಈಗ ಹೊರಬರುತ್ತಿದೆ. ವಿಚಾರಣೆಯಿಂದ ದರ್ಶನ್ ಗೌಡನನ್ನು ರಕ್ಷಣೆಗೆ ನಿಂತಿದ್ದು ಯಾರು ಎಂದು ಪ್ರತ್ಯೇಕವಾಗಿ ಹೇಳಬೇಕೆ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಎಂಇಎಸ್ ಕಿರಾತಕರ ಬಗ್ಗೆ ಬಿಜೆಪಿ ಸರ್ಕಾರ ಮೃದುದೋರಣೆ ತಾಳಿದೆ: ಎಚ್‍ಡಿಕೆ ಆರೋಪ

‘ಕುಂಬಳಕಾಯಿ ಕಳ್ಳ ಎಂದಾಕ್ಷಣ ಅಶ್ವತ್ಥ್ ನಾರಾಯಣ್ ಅವರು ಹೆಗಲು ಮುಟ್ಟಿಕೊಳ್ಳುವುದಷ್ಟೇ ಅಲ್ಲ ಹಾವು ತುಳಿದಂತೆ ಗಾಭರಿ ಆಗಿರುವುದೇಕೆ? ಅವರ ನಡುವಳಿಕೆಯೇ PSI ಅಕ್ರಮದಲ್ಲಿ ಅವರ ಪಾತ್ರವಿರುವ ಸಾಕ್ಷಿ ಹೇಳುತ್ತಿದೆ. ಅಷ್ಟೇ ಅಲ್ಲ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಅಕ್ರಮದಲ್ಲಿನ ಅವರ ‘ಮೌನ’ದ ರಹಸ್ಯ ಈಗ ಬಯಲಾಗುತ್ತಿದೆ’ ಎಂದು ಕಾಂಗ್ರೆಸ್ ಕುಟುಕಿದೆ.

PSI ಹುದ್ದೆಗಳ ನೇಮಕಾತಿ ಪರೀಕ್ಷೆ ಅಕ್ರಮದ ಕಬಂದ ಬಾಹುಗಳು ರಾಜ್ಯದಾದ್ಯಂತ ಹಬ್ಬಿದೆ. ಕಲಬುರಗಿ ಭಾಗದ ರೂವಾರಿಗಳ ಬಂಧನವಾಗಿದೆ, ಬೆಂಗಳೂರು ಭಾಗದವರ ಒಳಸುಳಿಗಳು ಈಗ ಹೊರಬರುತ್ತಿದೆ. ಇಷ್ಟು ದೊಡ್ಡ ಹಗರಣ ಗೃಹಸಚಿವರ ಗಮನಕ್ಕೆ ಬಾರದೆ ನಡೆದಿರಲು ಸಾಧ್ಯವೇ ಇಲ್ಲ. ಈ ಸರ್ಕಾರಕ್ಕೆ ನೈತಿಕತೆ ಇದ್ದರೆ ಗೃಹಸಚಿವರ ರಾಜೀನಾಮೆ ಪಡೆದು, ಅವರನ್ನು ತನಿಖೆಗೆ ಒಳಪಡಿಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಇದನ್ನೂ ಓದಿ: ‘ಲೂಟಿಕೊರರು ಬಿಜೆಪಿ ಸರ್ಕಾರದ ಮಂತ್ರಿಗಳಾಗಿರುವಾಗ, ಕಳ್ಳರಾದವರೆಲ್ಲ ಪೊಲೀಸರಾಗುತ್ತಿದ್ದಾರೆ!’

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News