ಹೆಂಡತಿ ಸದಾ ಖುಷಿಯಾಗಿರಬೇಕೆಂದರೆ.. ಗಂಡ ಈ ಕೆಲಸಗಳನ್ನು ಮಾಡಿದರೆ ಸಾಕು!
relationship tips: ಆಚಾರ್ಯ ಚಾಣಕ್ಯ ಹೇಳುವಂತೆ ಹೆಂಡತಿ ಸದಾ ಸಂತೋಷವಾಗಿರಲು ಗಂಡ ಈ ಕೆಲಸಗಳನ್ನು ಮಾಡಬೇಕು.
relationship tips: ನವವಿವಾಹಿತರು ಆರಂಭಿಕ ದಿನಗಳಲ್ಲಿ ಸಂತೋಷವಾಗಿರುತ್ತಾರೆ. ಆದರೆ ದಿನಗಳು ಕಳೆದಂತೆ ಇಬ್ಬರಿಗೂ ದಾಂಪತ್ಯ ಜೀವನ ಬೇಸರ ತರಿಸುತ್ತದೆ. ಆಚಾರ್ಯ ಚಾಣಕ್ಯ ಹೇಳುವಂತೆ ಹೆಂಡತಿ ಸದಾ ಸಂತೋಷವಾಗಿರಲು ಗಂಡ ಈ ಕೆಲಸಗಳನ್ನು ಮಾಡಬೇಕು. ವೈವಾಹಿಕ ಜೀವನವನ್ನು ಬಲಪಡಿಸಲು ಚಾಣಕ್ಯ ನೀಡಿದ ಸೂತ್ರಗಳು ಯಾವುವು ಎಂದು ತಿಳಿಯೋಣ.
ಯಾವಾಗಲೂ ಗೌರವದಿಂದ ನೋಡಿಕೊಳ್ಳಿ: ಆಚಾರ್ಯ ಚಾಣಕ್ಯ ಹೇಳುವಂತೆ ಹೆಂಡತಿಯನ್ನು ಗೌರವದಿಂದ ಕಾಣುವ ಪುರುಷನು ಅವರ ವೈವಾಹಿಕ ಬಂಧವನ್ನು ಗಟ್ಟಿಗೊಳಿಸಬಹುದು. ಅಂತಹ ವ್ಯಕ್ತಿ ತನ್ನ ಹೆಂಡತಿಯಿಂದ ಗೌರವವನ್ನು ಮರಳಿ ಪಡೆಯುತ್ತಾನೆ. ಪತಿ ತನಗೆ ಸಾಕಷ್ಟು ಗೌರವ ಕೊಡುತ್ತಾನೆ ಎಂದು ಪತ್ನಿ ಸಂತಸವನ್ನೂ ವ್ಯಕ್ತಪಡಿಸುತ್ತಾಳೆ.
ಇದನ್ನೂ ಓದಿ: ಯಾವಾಗೆಂದರೆ ಆವಾಗ ರಾಖಿ ಕಟ್ಟಿದರೆ ಒಳ್ಳೆಯದಾಗಲ್ಲ.. ಅದಕ್ಕೂ ಶುಭ ಸಮಯವಿದೆ ಸಹೋದರಿಯರೇ..!
ಸ್ನೇಹಿತನಂತೆ ವರ್ತಿಸುವುದು: ಪತಿ-ಪತ್ನಿ ಸ್ನೇಹಿತರಂತೆ ಬಾಳುವುದರಿಂದ ದಾಂಪತ್ಯ ಸುಖಮಯವಾಗಿ ಸಾಗುತ್ತದೆ. ಚಾಣಕ್ಯನ ಪ್ರಕಾರ ಗಂಡ ಹೆಂಡತಿ ಇಬ್ಬರೂ ಸ್ನೇಹಿತರಂತೆ ಬಾಳಬೇಕು. ಗೆಳೆಯರು ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯಗಳಲ್ಲಿ ಒಬ್ಬರಿಗೊಬ್ಬರು ಜೊತೆ ಇರುತ್ತಾರೆ. ಪರಸ್ಪರರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಪತಿ ಪತ್ನಿಯರ ಬಾಂಧವ್ಯ ಗಟ್ಟಿಯಾಗುತ್ತದೆ.
ಸಮಾನವಾಗಿ ಕಾಣುವ ಭಾವನೆ: ಕುಟುಂಬದಲ್ಲಿ ಇಬ್ಬರು ಸಮಾನರಾಗಿರಬೇಕು. ತನ್ನ ಹೆಂಡತಿಯನ್ನು ಸಮಾನವಾಗಿ ಕಾಣುವ ಪತಿ ಅವಳನ್ನು ಸಂತೋಷವಾಗಿರಿಸಬಹುದು. ಪತಿ ತನ್ನ ಹೆಂಡತಿಯ ಮೇಲೆ ಪ್ರಾಬಲ್ಯ ಸಾಧಿಸಬಾರದು. ನಾನು ಹೆಚ್ಚು ಮತ್ತು ನೀನು ಕಡಿಮೆ ಎಂಬ ಭಾವನೆ ಗಂಡ ಮತ್ತು ಹೆಂಡತಿಯ ನಡುವೆ ಇರಬಾರದು. ಇಬ್ಬರೂ ಎಲ್ಲವನ್ನೂ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.
ಇದನ್ನೂ ಓದಿ: ರಾತ್ರಿ ಹುಡುಗಿಯರು Youtubeನಲ್ಲಿ ಈ ಥರದ ವಿಡಿಯೋ ಹೆಚ್ಚು ನೋಡ್ತಾರಂತೆ! ಬಾಯ್ಸ್ ಗೊತ್ತಾದ್ರೇ ಶಾಕ್ ಆಗ್ಬಿಡ್ತೀರಿ!
ಭದ್ರತೆಯ ಭಾವವನ್ನು ಒದಗಿಸುವುದು: ಚಾಣಕ್ಯನ ತತ್ವವು ತನ್ನ ಸಂಗಾತಿಯೊಂದಿಗೆ ಸುರಕ್ಷಿತ ಭಾವನೆಯನ್ನು ಅನುಭವಿಸಿದಾಗ ಮಾತ್ರ.. ಆ ಸಂಬಂಧವು ಉತ್ತಮವಾಗಿರುತ್ತದೆ ಎಂದು ಹೇಳುತ್ತದೆ. ಹೆಂಡತಿ ಯಾವಾಗಲೂ ತನ್ನ ಗಂಡನಲ್ಲಿ ತಂದೆಯನ್ನು ನೋಡುತ್ತಾಳೆ. ತನ್ನ ಪತಿಯು ತನ್ನೊಂದಿಗೆ ಯಾವಾಗಲೂ ಇರುತ್ತಾನೆ ಮತ್ತು ಅವಳನ್ನು ರಕ್ಷಿಸುತ್ತಾನೆ ಎಂದು ಅವಳು ನಂಬುತ್ತಾಳೆ.
ಹೆಂಡತಿಯೊಂದಿಗೆ ಪ್ರಾಮಾಣಿಕತೆ: ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಸಂಬಂಧದಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ. ನೀವು ಪ್ರಾಮಾಣಿಕರಾಗಿದ್ದರೆ ಬಂಧ ಮುರಿಯುವುದಿಲ್ಲ. ನೀವು ಸಂತೋಷದ ವೈವಾಹಿಕ ಜೀವನವನ್ನು ಹೊಂದಲು ಬಯಸಿದರೆ ಯಾವಾಗಲೂ ನಿಮ್ಮ ಹೆಂಡತಿಯೊಂದಿಗೆ ಪ್ರಾಮಾಣಿಕವಾಗಿರಿ.
ದೈಹಿಕ ಆನಂದವನ್ನು ನೀಡುವುದು: ಚಾಣಕ್ಯನ ಪ್ರಕಾರ, ಸಂತೋಷದ ದಾಂಪತ್ಯ ಜೀವನಕ್ಕೆ ದೈಹಿಕ ತೃಪ್ತಿ ಕೂಡ ಮುಖ್ಯವಾಗಿದೆ. ಆದ್ದರಿಂದ, ಪತಿ ತನ್ನ ಸಂಗಾತಿಯ ಮಾನಸಿಕ ಮತ್ತು ದೈಹಿಕ ಸಂತೋಷದ ಮೇಲೆ ಕೇಂದ್ರೀಕರಿಸಬೇಕು. ಶಾರೀರಿಕ ಸಂಭೋಗದ ಮೊದಲು ಪತಿ ತನ್ನ ಹೆಂಡತಿಯ ಒಪ್ಪಿಗೆಯನ್ನು ಪಡೆಯಬೇಕು. ಪತಿ ದೈಹಿಕ ಸಂಪರ್ಕವನ್ನು ತ್ಯಜಿಸಿದರೆ, ಹೆಂಡತಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾಳೆ. ಹಾಗಾಗಿ ದೈಹಿಕ ಸುಖ ನೀಡುವುದು ಗಂಡನ ಕರ್ತವ್ಯ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.