Pitrupaksha: ಪೂರ್ವಜರನ್ನು ಮೆಚ್ಚಿಸಲು ಅವರನ್ನು ತೃಪ್ತಿಪಡಿಸಲು ಮತ್ತು ಪಿತೃ ದೋಷದಿಂದ ಪರಿಹಾರ ಪಡೆಯಲು ಪಿತೃ ಪಕ್ಷ ಅತ್ಯುತ್ತಮ ಸಮಯವಾಗಿದೆ. ಈ ಸಮಯದಲ್ಲಿ ತರ್ಪಣ ಬಿಡುವುದು, ಪಿಂಡದಾನ, ಶ್ರಾದ್ಧ ಮಾಡುವುದರಿಂದ ಹಿರಿಯರು ಸಂತುಷ್ಟರಾಗುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಪಿತೃ ಪಕ್ಷದಲ್ಲಿ ಮಹಿಳೆಯರು ಕೆಲವು ಪದಾರ್ಥಗಳನ್ನು ದಾನ ಮಾಡುವುದರಿಂದ ಹಿರಿಯರ ಆಶೀರ್ವಾದವನ್ನು ಪಡೆಯಬಹುದು ಎನ್ನಲಾಗುತ್ತದೆ. 


COMMERCIAL BREAK
SCROLL TO CONTINUE READING

ದಾನಕ್ಕಿಂತ ಮಿಗಿಲಾದ ಪುಣ್ಯದ ಕೆಲಸವಿಲ್ಲ ಎಂದು ಹೇಳಲಾಗುತ್ತದೆ. ಅದರಲ್ಲೂ ಪಿತೃ ಪಕ್ಷದಲ್ಲಿ ದಾನ ಮಾಡುವುದರಿಂದ ಪೂರ್ವಜನರನ್ನು ತೃಪ್ತಿಪಡಿಸಬಹುದು. ಇದರಿಂದ ಮನೆಯಲ್ಲಿ ಸುಖ-ಶಾಂತಿಯ ಜೊತೆಗೆ ಸಂಪತ್ತು ವೃದ್ಧಿಯಾಗುತ್ತದೆ. ಕುಟುಂಬದಲ್ಲಿ ಯಾವುದೇ ರೀತಿಯ ಕೊರತೆ ಇರುವುದಿಲ್ಲ ಎಂದು ನಂಬಲಾಗಿದೆ. ಹಾಗಿದ್ದರೆ, ಪಿತೃಪಕ್ಷದಲ್ಲಿ ಮಹಿಳೆಯರು ಯಾವ ಪದಾರ್ಥಗಳನ್ನು ದಾನ ಮಾಡಬೇಕು ಎಂದು ನೋಡುವುದಾದರೆ... 


ಮಹಿಳೆಯರು ಪಿತೃ ಪಕ್ಷದಲ್ಲಿ ಈ 5 ಪದಾರ್ಥಗಳನ್ನು ದಾನ ಮಾಡಿದರೆ ಅಂತಹ ಮನೆಯಲ್ಲಿ ಎಂದಿಗೂ ಹಣದ ಕೊರತೆಯಾಗಲ್ಲ! 
1. ಬಾಳೆಹಣ್ಣು:

ಪಿತೃಪಕ್ಷದಲ್ಲಿ ಬಾಳೆಹಣ್ಣನ್ನು ದಾನ ಮಾಡುವುದು ಶ್ರೇಷ್ಠ ಕೆಲಸ. ಬಾಳೆಹಣ್ಣು ನಿತ್ಯಹರಿದ್ವರ್ಣ ಹಣ್ಣು ಮತ್ತು ವಿಷ್ಣುವಿಗೆ ಪ್ರಿಯವಾದ ಹಣ್ಣು.  ಭಗವಾನ್ ವಿಷ್ಣುವು ವೈಕುಂಠ ಧಾಮದ ಒಡೆಯ ಮತ್ತು ಮೋಕ್ಷವನ್ನು ಒದಗಿಸುವವನು. ಪೂರ್ವಜರು ಬಾಳೆಹಣ್ಣಿನ ದಾನವನ್ನು ಸ್ವೀಕರಿಸಿದ ನಂತರ ಸಂತೋಷಗೊಂಡು ತಮ್ಮ ವಂಶಸ್ಥರಿಗೆ ಆಶೀರ್ವಾದ ನೀಡಿ ಆಶೀರ್ವದಿಸುತ್ತಾರೆ. 


ಇದನ್ನೂ ಓದಿ- ಪಿತೃ ಪಕ್ಷ : ಮಹಿಳೆಯರೂ ಪಿಂಡ ದಾನ ಮಾಡಬಹುದು, ಈ ಒಂದು ಕೆಲಸವನ್ನು ಮಾತ್ರ ನಿಷೇಧಿಸಲಾಗಿದೆ


2. ಕಪ್ಪು ಎಳ್ಳು: 
ಶ್ರಾದ್ಧ ಕಾರ್ಯದಲ್ಲಿ ಕಪ್ಪು ಎಳ್ಳನ್ನು ಬಳಸಲಾಗುತ್ತದೆ. ಶ್ರಾದ್ಧದಲ್ಲಿ ದಾನದ ದೃಷ್ಟಿಯಿಂದ, ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ತೊಂದರೆ ಮತ್ತು ವಿಪತ್ತುಗಳಿಂದ ರಕ್ಷಿಸುತ್ತದೆ.


3. ತುಪ್ಪ: 
ಪಿತೃಪಕ್ಷದಲ್ಲಿ ಒಂದು ಸಣ್ಣ ಬಟ್ಟಲಿನಷ್ಟಾದರೂ ಹಸುವಿನ ತುಪ್ಪವನ್ನು ದಾನ ಮಾಡಿ. ಈ ರೀತಿ ಮಾಡುವುದರಿಂದ ಕುಟುಂಬಕ್ಕೆ ಒಳಿತಾಗುತ್ತದೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- Pitru Dosh: ‘ಪಿತೃ ದೋಷ’ದಿಂದ ಜೀವನದಲ್ಲಿ ಈ ಸಮಸ್ಯೆಗಳು ಬರುತ್ತವೆ! ಪರಿಹಾರ ತಿಳಿಯಿರಿ


4. ಮೊಸರು:
ಪಿತೃ ಪಕ್ಷದಲ್ಲಿ ಹಾಲಿಗಿಂತ ಮೊಸರಿಗೆ ಹೆಚ್ಚಿನ ಮಹತ್ವವಿದೆ. ಪಿತೃ ಪಕ್ಷದಲ್ಲಿ ಮೊಸರನ್ನು ದಾನ ಮಾಡುವುದರಿಂದ ಜೀವನದಲ್ಲಿ ಸ್ಥಿರತೆ ಕಂಡು ಬರುತ್ತದೆ. 


5. ಬಿಳಿ ಬಣ್ಣದ ಸಿಹಿತಿಂಡಿಗಳು: 
ಪಿತೃ ಪಕ್ಷದ ಸಮಯದಲ್ಲಿ ಬಿಳಿ ಸಿಹಿತಿಂಡಿಗಳನ್ನು ದಾನ ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ. ಬಿಳಿ ಬಣ್ಣವು ಸಕಾರಾತ್ಮಕತೆಯ ಸಂಕೇತವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.