Samudrik Shastra: ದೇಹದ ಮೇಲೆ ಈ ಗುರುತುಗಳಿರುವ ಸ್ತ್ರೀಯರು ಲಕ್ಷ್ಮಿಯ ಪ್ರತಿರೂಪ.!
Lucky Signs on Women Body: ಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವದ ಬಗ್ಗೆ ತಿಳಿಸಲಾಗಿದೆ. ಕೈಯಲ್ಲಿರುವ ರೇಖೆಗಳ ಹೊರತಾಗಿ, ದೇಹದ ವಿವಿಧ ಭಾಗಗಳಲ್ಲಿರುವ ಗುರುತುಗಳು ಮತ್ತು ಮಚ್ಚೆಗಳ ಮೂಲಕ ವ್ಯಕ್ತಿಯ ಸ್ವಭಾವ ಮತ್ತು ಇತರ ಗುಣಗಳನ್ನು ಸಹ ಸುಲಭವಾಗಿ ತಿಳಿಯಬಹುದು.
Samudrik Shastra: ವ್ಯಕ್ತಿಯ ದೇಹದ ಮೇಲೆ ಇರುವ ಕೆಲವು ವಿಶೇಷ ಗುರುತುಗಳು ವ್ಯಕ್ತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಮಹಿಳೆಯರ ದೇಹದಲ್ಲಿ ಕೆಲವು ಮಚ್ಚೆಗಳು ಮತ್ತು ಗುರುತುಗಳಿದ್ದರೆ ಅವರು ತುಂಬಾ ಲಕ್ಕಿ ಆಗಿರುತ್ತಾರೆ. ಅದು ಅವರನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ, ದೇಹದ ಈ ಭಾಗಗಳಲ್ಲಿ ಮಚ್ಚೆಗಳಿದ್ದರೆ ಅವರನ್ನು ಲಕ್ಷ್ಮಿಯ ರೂಪ ಎನ್ನಲಾಗುತ್ತದೆ. ಇದೇ ಅವರನ್ನು ಶ್ರೀಮಂತರನ್ನಾಗಿ ಮಾಡುತ್ತದೆ.
ಪಾದದ ಮೇಲೆ ಶಂಖ: ಮಹಿಳೆಯರ ಪಾದದ ಮೇಲೆ ಶಂಖ, ಕಮಲ ಅಥವಾ ಚಕ್ರದ ಗುರುತಿದ್ದರೆ ಅಂತಹ ಮಹಿಳೆಯರಿಗೆ ಬಹಳ ಅದೃಷ್ಟವೆಂದು ಪರಿಗಣಿಸಲಾಗಿದೆ. ಅಂತಹ ಗುರುತು ಹೊಂದಿರುವ ಮಹಿಳೆಯರು ತಮ್ಮ ಕುಟುಂಬಕ್ಕೆ ತುಂಬಾ ಲಕ್ಕಿ. ಅವರು ಜೀವನದಲ್ಲಿ ಉನ್ನತಿ ಹೊಂದುತ್ತಾರೆ. ಸಮಾಜದಲ್ಲಿ ಅವರಿಗೆ ಹೆಚ್ಚು ಗೌರವ ಸಿಗುತ್ತದೆ.
ಇದನ್ನೂ ಓದಿ : Peepal Tree: ಹಲವು ಕಾಯಿಲೆಗಳ ನಿವಾರಣೆಗೆ ರಾಮಬಾಣ ಉಪಾಯ ಈ ಅಶ್ವತ್ಥ ಮರ!
ಕಾಲ್ಬೆರಳು ದುಂಡಾಗಿರುವುದು : ಕಾಲ್ಬೆರಳುಗಳು ದುಂಡಾಗಿರುವ ಮತ್ತು ಅಗಲವಾಗಿರುವ ಮಹಿಳೆಯರನ್ನು ಸಹ ಅದೃಷ್ಟವಂತರೆಂದು ಪರಿಗಣಿಸಲಾಗುತ್ತದೆ. ಮಹಿಳೆಯರು ಎಲ್ಲಿಗೆ ಹೋದರೂ ಸಂಪತ್ತಿನ ಮಳೆ ಸುರಿಯುತ್ತದೆ ಎಂಬ ನಂಬಿಕೆ ಇದೆ. ಜೀವನವೂ ಸಂತೋಷದಿಂದ ಕೂಡಿರುತ್ತದೆ.
ಉದ್ದನೆಯ ಕುತ್ತಿಗೆ: ಉದ್ದನೆಯ ಕುತ್ತಿಗೆಯನ್ನು ಹೊಂದಿರುವ ಮಹಿಳೆಯರು ತುಂಬಾ ಅದೃಷ್ಟವಂತರು. ಈ ಮಹಿಳೆಯರು ತಮ್ಮ ಜೀವನದಲ್ಲಿ ಸಾಕಷ್ಟು ಗೌರವವನ್ನು ಪಡೆಯುತ್ತಾರೆ. ಸಾಕಷ್ಟು ಜನಪ್ರಿಯತೆ ಮತ್ತು ಖ್ಯಾತಿಯನ್ನು ಗಳಿಸುತ್ತಾರೆ. ಈ ಮಹಿಳೆಯರು ತಮ್ಮ ಅತ್ತೆ ಮನೆಗೆ ಅದೃಷ್ಟವಂತರು. ಇವರು ಹೋಗುವ ಮನೆ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ.
ಇದನ್ನೂ ಓದಿ : Surya Gochar 2023: ಈ ರಾಶಿಯವರ ಭಾಗ್ಯದ ಬಾಗಿಲು ತೆರೆದ ಸೂರ್ಯ ದೇವ, ಇನ್ನು ನೀವು ಮುಟ್ಟಿದ್ದೆಲ್ಲ ಚಿನ್ನವೇ.!
ಉದ್ದವಾದ ಕೈ ಬೆರಳು: ಉದ್ದವಾದ ಬೆರಳುಗಳನ್ನು ಹೊಂದಿರುವ ಮಹಿಳೆಯರು ತಮ್ಮ ಗಂಡನಿಂದ ತುಂಬಾ ಪ್ರೀತಿಯನ್ನು ಪಡೆಯುತ್ತಾರೆ. ಈ ಹುಡುಗಿಯರು ತಮ್ಮ ಗಂಡಂದಿರಿಗೆ ಅತ್ಯಂತ ಅದೃಷ್ಟಶಾಲಿ. ಅಷ್ಟೇ ಅಲ್ಲ, ಆಕೆಯ ಪತಿ ತನ್ನ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿಯನ್ನು ಪಡೆಯುತ್ತಾನೆ. ಅಂತಹ ಮಹಿಳೆಯರು ಜೀವನದಲ್ಲಿ ಯಾವುದೇ ರೀತಿಯ ಕೊರತೆ ಅಥವಾ ತೊಂದರೆಗಳನ್ನು ಎದುರಿಸಬೇಕಾಗಿಲ್ಲ.
ಹಣೆಯ ಮೇಲೆ ತ್ರಿಶೂಲದ ಗುರುತು: ಶಾಸ್ತ್ರದ ಪ್ರಕಾರ, ಮಹಿಳೆಯ ಹಣೆಯ ಮೇಲೆ ತ್ರಿಶೂಲದ ಗುರುತು ಇದ್ದರೆ, ಅವರು ಜೀವನದಲ್ಲಿ ಅಪಾರ ಸಂಪತ್ತನ್ನು ಪಡೆಯುತ್ತಾರೆ. ಈ ಮಹಿಳೆಯರು ಎಲ್ಲಿಗೆ ಹೋದರೂ ಅವರಿಗೆ ಜೀವನದಲ್ಲಿ ಸಂತೋಷ, ಸಮೃದ್ಧಿ ಸಿಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.