Y-Break App - ಆಯುಷ್ ಸಚಿವಾಲಯವು (Ayush Ministry) ಹೊಸ ಯೋಗ ಆ್ಯಪ್ ವೊಂದನ್ನು ರಚಿಸಿದ್ದು, ಅದು ನಿಮ್ಮ ನಿತ್ಯದ ಕೆಲಸ ಮತ್ತು ಹೆಲ್ಪ್ ಪ್ರೊಫೆಶನಲ್ ಗೆ ಸಂಬಂಧಿಸಿದ್ದಾಗಿದೆ. ಕಚೇರಿಗೆ ಹೋಗುವ ಜನರನ್ನು ಗಮನದಲ್ಲಿಟ್ಟುಕೊಂಡು ಈ ಪ್ರೋಟೋಕಾಲ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.


COMMERCIAL BREAK
SCROLL TO CONTINUE READING

ಐದು ನಿಮಿಷಗಳ ಯೋಗ ಪ್ರೋಟೋಕಾಲ್ ಅನ್ನು ಒಳಗೊಂಡ ಆಯುಷ್ ಸಚಿವಾಲಯ ಅಭಿವೃದ್ಧಿಪಡಿಸಿದ ಅಪ್ಲಿಕೇಶನ್ ವೈ-ಬ್ರೇಕ್ (Y-Break App) ಅನ್ನು ಡೌನ್ಲೋಡ್ ಮಾಡಲು ಸರ್ಕಾರವು ತನ್ನ ಎಲ್ಲಾ ಉದ್ಯೋಗಿಗಳಿಗೆ ಸೂಚಿಸಿದೆ.


ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT), ಎರಡು ದಿನಗಳ ಹಿಂದೆ  ಹೊರಡಿಸಿರುವ ತನ್ನ ಆದೇಶದಲ್ಲಿ, ಈ ಆಪ್ ಅನ್ನು ಪ್ರಚಾರ ಮಾಡಲು ಎಲ್ಲಾ ಸಚಿವಾಲಯಗಳನ್ನು ಕೋರಿದ್ದು,  "Y- ಬ್ರೇಕ್ (Yoga Break App) ಪ್ರೋಟೋಕಾಲ್ ಬಳಕೆ ಮತ್ತು ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಎಲ್ಲರಿಗೂ ಉದ್ಯೋಗಿಗಳ ನಡುವೆ ಅನ್ವಯಿಸಲು Y- ಬ್ರೇಕ್ (Y-Break) ಪ್ರೋಟೋಕಾಲ್ ಬಳಕೆಯನ್ನು ಉತ್ತೇಜಿಸಲು ಭಾರತ ಸರ್ಕಾರದ (Government Of India) ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳನ್ನು ವಿನಂತಿಸಲಾಗಿದೆ" ಎನ್ನಲಾಗಿದೆ.


ಇದನ್ನೂ ಓದಿ- Shani Pradosh Vrat 2021 : ಶನಿ ದೋಷವನ್ನು ನಿವಾರಿಸಲು ಇಂದು ಅತ್ಯುತ್ತಮ ದಿನ : ಶನಿ ಪ್ರದೋಷದಂದು ಶಿವ-ಪಾರ್ವತಿಯ ಪೂಜೆ ಮಾಡಿ


ಸ್ವಾಯತ್ತ ಸಂಸ್ಥೆಯಾದ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ (MDNIY) ಸಹಯೋಗದೊಂದಿಗೆ ಯೋಗ ಪ್ರೋಟೋಕಾಲ್ ಮತ್ತು ಆಪ್ ಅನ್ನು ರಚಿಸಲಾಗಿದೆ. ಇದು ಆಯುಷ್ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತ್ತದೆ. ಕೃಷ್ಣಮಾಚಾರಿ ಯೋಗ ಮಂದಿರ ಚೆನ್ನೈ ಮಿಷನ್ ವಿವೇಕಾನಂದ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆ ಬೇಲೂರು ಮಠ, NIMHANS-ಬೆಂಗಳೂರು ಮತ್ತು ಕೈವಲ್ಯಧಾಮ ಆರೋಗ್ಯ ಮತ್ತು ಯೋಗ ಸಂಶೋಧನಾ ಕೇಂದ್ರ-ಲೋನವಾಲಾ ಮುಂತಾದ ಹಲವು ಸಂಸ್ಥೆಗಳು ಈ ಆಪ್ ತಯಾರಿಸಲು ಸಹಾಯ ಮಾಡಿವೆ.


ಇದನ್ನೂ ಓದಿ-Ganesh Chaturthi 2021 : ಈ ದಿನದಿಂದ ಆರಂಭವಾಗಲಿದೆ ಗಣೇಶ ಉತ್ಸವ, ಈ ಶುಭ ಮುಹೂರ್ತದಲ್ಲಿ ಮನೆಗೆ ಬರಲಿ ಗಣಪ


ಜನರು ನಿರಂತರವಾಗಿ ಗಂಟೆಗಳ ಕಾಲ ತಮ್ಮ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಆದರೆ, ಜನರು ಬಿಡುವಿನ ಸಮಯದಲ್ಲಿ ಸಣ್ಣದೊಂದು ವಿರಾಮ ಪಡೆಯಬೇಕು. ಇದರಿಂದ ಸ್ಟ್ರೆಸ್ ಅನ್ನು ನಿಯಂತ್ರಣದಲ್ಲಿಡಬಹುದು. ಇದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ಕೂಡ ಸಕಾರಾತ್ಮಕ ಪರಿಣಾಮ ಬೀರಲಿದೆ. ಕಾರ್ಪೋರೆಟ್ ಕಂಪನಿಗಳಲ್ಲಿ ಕೆಲಸ ಮಾಡುವ ಜನರಲ್ಲಿ ಅತಿಯಾದ ಸ್ಟ್ರೆಸ್ ಹಾಗೂ ನಕಾರಾತ್ಮಕ ಪರಿಣಾಮ ಹೆಚ್ಚಾಗಿರುವುದನ್ನು ಗಮನಿಸಲಾಗಿದೆ ಎಂದು ತಜ್ಞರು ಹೇಳುತ್ತಾರೆ.


ಇದನ್ನೂ ಓದಿ-Diabetes: ನಿಮ್ಮ ಅಡುಗೆಮನೆಯಲ್ಲಿರುವ ಈ ಮಸಾಲೆಗಳು ಮಧುಮೇಹಕ್ಕೆ ರಾಮಬಾಣ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ