ಈ ರಾಶಿಯವರಿಗೆ ಸಂಪತ್ತು ಮತ್ತು ಹೆಸರು ಎರಡೂ ನೀಡಲಿದೆ 2022, ಆದರೂ ಈ ವಿಚಾರದಲ್ಲಿ ಇರಲಿ ಎಚ್ಚರ
ಮಕರ ರಾಶಿಯವರ ಬಗ್ಗೆ ಹೇಳುವುದಾದರೆ, ಅವರಿಗೆ ಈ ವರ್ಷ ಪೂರ್ತಿ ಹಣ ಮತ್ತು ಹೆಸರು, ಮನ್ನಣೆ ಎಲ್ಲವೂ ಸಿಗುತ್ತದೆ.
ನವದೆಹಲಿ : 2022ರ ವರ್ಷವು ಎಲ್ಲಾ ರಾಶಿಚಕ್ರ ಚಿಹ್ನೆಗಳ (Zodiac sign) ಪಾಲಿಗೆ ಏನನ್ನಾದರೂ ಹೊತ್ತು ತಂದಿದೆ. ಕೆಲವರಿಗೆ ವರ್ಷ ಪೂರ್ತಿ ಸಂತೋಷವಾದರೆ, ಇನ್ನು ಕೆಲವರ ಪಾಲಿಗೆ ದುಃಖವೇ.. ಇನ್ನು ಮಕರ ರಾಶಿಯವರ (Capricorn) ಬಗ್ಗೆ ಹೇಳುವುದಾದರೆ, ಅವರಿಗೆ ಈ ವರ್ಷ ಪೂರ್ತಿ ಹಣ ಮತ್ತು ಹೆಸರು, ಮನ್ನಣೆ ಎಲ್ಲವೂ ಸಿಗುತ್ತದೆ. ಆದರೆ, ಅವರು ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಮಕರ ರಾಶಿ ಭವಿಷ್ಯ 2022 :
2022 ರಲ್ಲಿ ಸಂಪತ್ತು ಮತ್ತು ಖ್ಯಾತಿ ಎರಡನ್ನೂ ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಎಲ್ಲರೂ ನಿಮ್ಮನ್ನು ಹೊಗಳುತ್ತಾರೆ. ಪ್ರಮೋಷನ್-ಇನ್ಕ್ರಿಮೆಂಟ್ ಬಗ್ಗೆ ಬಾಸ್ ಜೊತೆ ಮಾತನಾಡಲು ಇದು ಒಳ್ಳೆಯ ಸಮಯ. ಉತ್ತಮ ಆದಾಯವಿದ್ದರೂ, ಹೆಚ್ಚಿದ ವೆಚ್ಚಗಳು ಬಜೆಟ್ ಅನ್ನು ಹಾಳುಮಾಡುತ್ತವೆ. ಜುಲೈ ನಂತರ ಖರ್ಚು-ವೆಚ್ಚಗಳಿಂದ ಹೆಚ್ಚಿನ ತೊಂದರೆಯಾಗಲಿದೆ.
ಇದನ್ನೂ ಓದಿ : Goddess Lakshmi: ಮನೆಯಲ್ಲಿ ಲಕ್ಷ್ಮಿದೇವಿಯ ಈ ವಿಶೇಷ ಫೋಟೋ ಇಡುವುದರಿಂದ ಸಿಗುತ್ತೆ ಅದ್ಭುತ ಪ್ರಯೋಜನ
ಮಕರ ರಾಶಿ ಕುಟುಂಬ ಜೀವನ 2022: ಸಂತೋಷದಲ್ಲಿ ರಾಹುವಿನ (Rahu) ಪ್ರಭಾವವು ಸಂತೋಷವನ್ನು ಹೆಚ್ಚಿಸುತ್ತದೆ. ತಾಯಿ ಮತ್ತು ಹೆಂಡತಿಯ ಆರೋಗ್ಯದ (health) ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಈ ವರ್ಷ ಹೆಚ್ಚಿನ ಸಮಯವನ್ನು ಏಕಾಂತದಲ್ಲಿ ಕಳೆಯುವುದು ಒಳ್ಳೆಯದಲ್ಲ. ಕುಟುಂಬ ಮತ್ತು ಸ್ನೇಹಿತರಿಗೆ ಹೆಚ್ಚು ಹೆಚ್ಚು ಸಮಯವನ್ನು ನೀಡುವುದು ಉತ್ತಮ. ಒಂಟಿಯಾಗಿರುವ ಅಭ್ಯಾಸ ಮತ್ತು ನಿಮ್ಮ ಕೋಪವು ಕುಟುಂಬದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಕಚೇರಿಯಲ್ಲಿರುವ ವ್ಯಕ್ತಿ ನಿಮ್ಮ ಕುಟುಂಬ ಜೀವನವನ್ನು ಹಾಳುಮಾಡಲು ಪ್ರಯತ್ನಿಸುತ್ತಾರೆ. ಈ ವ್ಯಕ್ತಿಯನ್ನು ಸಮಯಕ್ಕೆ ಗುರುತಿಸುವ ಮೂಲಕ ಜಾಗರೂಕರಾಗಿರಿ.
ಮಕರ ರಾಶಿ ವಿದ್ಯಾರ್ಥಿ ಜೀವನ 2022: ಕೆಟ್ಟ ಸಹವಾಸದಿಂದ ದೂರವಿರಿ ಮತ್ತು ನಿಮ್ಮ ಶಿಕ್ಷಣದತ್ತ ಮಾತ್ರ ಗಮನಹರಿಸಿ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ (Compitative exam) ತಯಾರಿ ನಡೆಸುತ್ತಿದ್ದರೆ, ಮೇ ನಿಂದ ನವೆಂಬರ್ ನಡುವಿನ ಸಮಯವು ಅತ್ಯುತ್ತಮವಾಗಿರುತ್ತದೆ. ವಿದೇಶಕ್ಕೆ ಹೋಗಲು ಯೋಜಿಸುತ್ತಿದ್ದರೆ, ಅದೃಷ್ಟವು ಈ ವರ್ಷ ನಿಮಗೆ ಅನುಕೂಲಕರವಾಗಿರುತ್ತದೆ.
ಇದನ್ನೂ ಓದಿ : ಏಪ್ರಿಲ್ ನಲ್ಲಿ ಶನಿ, ರಾಹು ಕೇತುವಿನ ಜೊತೆಗೆ ಈ ಗ್ರಹದ ರಾಶಿ ಪರಿವರ್ತನೆ, ಯಾರ ಮೇಲೆ ಏನಾಗಲಿದೆ ಪರಿಣಾಮ
ಮಕರ ರಾಶಿ ಆರೋಗ್ಯ ಜಾತಕ 2022: ವಾತ ಸಂಬಂಧಿತ ರೋಗಗಳು ಈ ವರ್ಷ ಸಂಭವಿಸಬಹುದು. ಮನಸ್ಸಿನಲ್ಲಿ ಕೀಳರಿಮೆ ಇರುತ್ತದೆ. ಕಡಿಮೆ ರಕ್ತದೊತ್ತಡ (Low blood pressure), ಖಿನ್ನತೆ, ನರಗಳ, ಚರ್ಮ ರೋಗಗಳು ಇತ್ಯಾದಿಗಳನ್ನು ಹೊಂದುವ ಸಾಧ್ಯತೆಯಿದೆ. ಈ ವರ್ಷ ಸಣ್ಣ ಅನಾರೋಗ್ಯವನ್ನು ಕೂಡಾ ಲಘುವಾಗಿ ಪರಿಗಣಿಸಬೇಡಿ.
ಮಕರ ರಾಶಿಯವರಿಗೆ ಪರಿಹಾರ: ಹಸುವಿನ ಹಾಲು (Milk), ದೇಶಿ ತುಪ್ಪ, ಶುದ್ಧ ಕರ್ಪೂರ, 5 ಲವಂಗ, 5 ಮಖಾನ ಮತ್ತು ತೆಂಗಿನಕಾಯಿ ಪುಡಿಯನ್ನು ದೇವರಿಗೆ ಅರ್ಪಿಸಿ. ಅಲ್ಲದೆ, ಗಾಯತ್ರಿ ಮಂತ್ರವನ್ನು (Gayatri mantra) ಪ್ರತಿದಿನ 11 ಬಾರಿ ಜಪಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.