Goddess Lakshmi: ಮನೆಯಲ್ಲಿ ಲಕ್ಷ್ಮಿದೇವಿಯ ಈ ವಿಶೇಷ ಫೋಟೋ ಇಡುವುದರಿಂದ ಸಿಗುತ್ತೆ ಅದ್ಭುತ ಪ್ರಯೋಜನ

ಮನೆಯಲ್ಲಿ ಕೆಲವು ಶುಭ ಚಿತ್ರಗಳಿರುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಚಿತ್ರಗಳ ಆಯ್ಕೆಯಲ್ಲಿ ಮಾಡುವ ತಪ್ಪಿನಿಂದ ಲಾಭದ ಬದಲು ಹಾನಿ ಉಂಟಾಗುತ್ತದೆ.

Written by - Yashaswini V | Last Updated : Jan 3, 2022, 11:16 AM IST
  • ಮನೆಯಲ್ಲಿ ಲಕ್ಷ್ಮಿಯ ಚಿತ್ರ ಅಥವಾ ವಿಗ್ರಹವನ್ನು ಇರಿಸಿ
  • ಮನೆಯಲ್ಲಿ ಲಕ್ಷ್ಮೀ ಫೋಟೋವನ್ನು ಶಾಸ್ತ್ರೋಕ್ತವಾಗಿ ಪೂಜಿಸುವುದರಿಂದ ಒಳ್ಳೆಯ ಫಲ ಸಿಗುತ್ತದೆ
  • ಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಅಪಾರ ಸಂಪತ್ತು ಸಿಗಲಿದೆ
Goddess Lakshmi: ಮನೆಯಲ್ಲಿ ಲಕ್ಷ್ಮಿದೇವಿಯ ಈ ವಿಶೇಷ ಫೋಟೋ ಇಡುವುದರಿಂದ ಸಿಗುತ್ತೆ ಅದ್ಭುತ ಪ್ರಯೋಜನ title=
Auspicious Photo For Home

ಬೆಂಗಳೂರು: ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ಆಶೀರ್ವಾದ ಪಡೆಯಲು ಅನೇಕರು ಆಕೆಯನ್ನು ಪೂಜಿಸುತ್ತಾರೆ. ಇದರ ಭಾಗವಾಗಿ ತಮ್ಮ ಮನೆ-ಕಚೇರಿಯಲ್ಲಿ ಲಕ್ಷ್ಮಿ ದೇವಿಯ ಫೋಟೋ -ಪ್ರತಿಮೆಯನ್ನು ಸ್ಥಾಪಿಸುತ್ತಾರೆ. ಶಾಸ್ತ್ರೋಕ್ತವಾಗಿ ಸ್ಥಾಪಿಸಲ್ಪಟ್ಟ ಮಾ ಲಕ್ಷ್ಮಿ ಅಪಾರ ಹಣ ಮತ್ತು ಸಂತೋಷವನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ಆದರೆ ಲಕ್ಷ್ಮಿಯ ವಿಗ್ರಹವನ್ನು ಆಯ್ಕೆ ಮಾಡುವಲ್ಲಿ ಮಾಡಿದ ತಪ್ಪು ಹಾನಿಯನ್ನುಂಟುಮಾಡುತ್ತದೆ. ನೀವು ಯಾವಾಗಲೂ ಸಂಪತ್ತು ಮತ್ತು ವೈಭವದಿಂದ ಜೀವನವನ್ನು ನಡೆಸಬೇಕೆಂದು ಬಯಸಿದರೆ, ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ಮಾ ಲಕ್ಷ್ಮಿಯ ವಿಗ್ರಹ ಅಥವಾ ಚಿತ್ರವನ್ನು ಸ್ಥಾಪಿಸುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸುವುದು ಬಹಳ ಮುಖ್ಯ.

ಮನೆಯಲ್ಲಿ ಸ್ಥಾಪಿಸಲು ಇಚ್ಚಿಸುವ ಮಾ ಲಕ್ಷ್ಮಿಯ ಚಿತ್ರ ಹೀಗಿರಲಿ:
ವಾಸ್ತು ಶಾಸ್ತ್ರ (Vastu Shastra), ಧರ್ಮ ಮತ್ತು ಜ್ಯೋತಿಷ್ಯದ (Astrology) ಪ್ರಕಾರ, ಮನೆಯಲ್ಲಿ ಲಕ್ಷ್ಮಿ ದೇವಿಯ ಸರಿಯಾದ ಚಿತ್ರ ಅಥವಾ ವಿಗ್ರಹವನ್ನು ಹೊಂದುವುದು ತುಂಬಾ ಮಂಗಳಕರವಾಗಿದೆ. ಇದರೊಂದಿಗೆ, ಮನೆಯಲ್ಲಿ ಎಂದಿಗೂ ಹಣದ ಕೊರತೆ ತಲೆದೂರುವುದಿಲ್ಲ ಮತ್ತು ಅಂತಹ ಮನೆಯಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮೀ ಸದಾ ವಾಸಿಸುತ್ತಾಳೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ, ಲಕ್ಷ್ಮಿ ದೇವಿಯ ಚಿತ್ರ ಮತ್ತು ವಿಗ್ರಹವನ್ನು ಆಯ್ಕೆಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ. 

ಇದನ್ನೂ ಓದಿ-  Shukra Asta 2022: ಶುಕ್ರಾಸ್ತಮಾನದ ಪರಿಣಾಮ, ಈ 9 ರಾಶಿಯವರಿಗೆ ಎದುರಾಗಲಿದೆ ಸಂಕಷ್ಟ

>> ಲಕ್ಷ್ಮಿ ದೇವಿಯು ಕಮಲದ ಹೂವಿನ ಆಸನದ ಮೇಲೆ ಕುಳಿತಿದ್ದರೆ ಮತ್ತು ಅದರೊಂದಿಗೆ ಆನೆಗಳು ಇದ್ದರೆ, ಅಂತಹ ಚಿತ್ರವನ್ನು ತುಂಬಾ ಮಂಗಳಕರವೆಂದು (Auspicious Photo For Home) ಪರಿಗಣಿಸಲಾಗುತ್ತದೆ. ಆನೆಗಳು ತಮ್ಮ ಸೊಂಡಿಲಿನಲ್ಲಿ ಕಲಶವನ್ನು ಹೊತ್ತಿದ್ದರೆ, ಈ ಚಿತ್ರವು ಮನೆಯಲ್ಲಿ ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ. 

>> ತಾಯಿ ಲಕ್ಷ್ಮಿಯು (Maa Laxmi) ಕಮಲದ ಹೂವಿನ ಮೇಲೆ ಕುಳಿತಿರುವ ಮತ್ತು ಆನೆಗಳು ನಾಣ್ಯಗಳನ್ನು ಸುರಿಯುತ್ತಿವೆ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ಬಹಳಷ್ಟು ಸಂಪತ್ತು ಮತ್ತು ವೈಭವವನ್ನು ನೀಡುತ್ತದೆ. 

>> ಭಗವಾನ್ ವಿಷ್ಣುವು (Lord Vishnu) ಲಕ್ಷ್ಮಿ ದೇವಿಯೊಂದಿಗಿದ್ದರೆ, ಇಬ್ಬರ ಕೃಪೆಯಿಂದ ಮನೆಯಲ್ಲಿ ಯಾವುದೇ ತೊಂದರೆಯಿರುವುದಿಲ್ಲ. ಇಡೀ ಮನೆ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- ಏಪ್ರಿಲ್ ನಲ್ಲಿ ಶನಿ, ರಾಹು ಕೇತುವಿನ ಜೊತೆಗೆ ಈ ಗ್ರಹದ ರಾಶಿ ಪರಿವರ್ತನೆ, ಯಾರ ಮೇಲೆ ಏನಾಗಲಿದೆ ಪರಿಣಾಮ

ಈ ತಪ್ಪು ಭಾರವಾಗಿರುತ್ತದೆ :
ಅಪ್ಪಿತಪ್ಪಿಯೂ ಮನೆಯಲ್ಲಿ ಲಕ್ಷ್ಮಿ ದೇವಿಯ ನಿಂತಿರುವ ಫೋಟೋ ಹಾಕಬೇಡಿ. ಇದಲ್ಲದೆ ಲಕ್ಷ್ಮಿಯ ಖಡ್ಗಾಸನ ಮುದ್ರೆಯನ್ನು ಕೆಲಸದ ಸ್ಥಳದಲ್ಲಿಟ್ಟರೂ ಪರವಾಗಿಲ್ಲ, ಆದರೆ ಅದನ್ನು ಮನೆಯಲ್ಲಿ ಹಾಕಿದರೆ ಬಡತನವನ್ನು ಆಹ್ವಾನಿಸಿದಂತೆ ಎಂದು ಹೇಳಲಾಗುತ್ತದೆ. ಅದೇ ರೀತಿ ಲಕ್ಷ್ಮಿ ಮತ್ತು ಗಣಪತಿಯ ಫೋಟೋ ಹಾಕಿದರೆ ಸಂಪತ್ತಿನ ದೇವತೆಗೆ ಕೋಪ ಬರುತ್ತದೆ. ತಾಯಿ ಲಕ್ಷ್ಮಿ ವಿಷ್ಣುವಿನ ಪತ್ನಿ, ಆದ್ದರಿಂದ ದೀಪಾವಳಿ ಹೊರತುಪಡಿಸಿ ಬೇರೆ ಸಮಯದಲ್ಲಿ ಗಣೇಶನ ಜೊತೆ ಲಕ್ಷ್ಮೀ ಇರುವ ಫೋಟೋವನ್ನು  ಹಾಕಬೇಡಿ. ಲಕ್ಷ್ಮಿಯು ತನ್ನ ವಾಹನ ಗೂಬೆಯ ಮೇಲೆ ಕುಳಿತಿರುವ ಅಂತಹ ಫೋಟೋವನ್ನು ಹಾಕುವುದು ಕೂಡ ಅಶುಭ ಎನ್ನಲಾಗುವುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News