ವರ್ಷದ ಮೊದಲ ಶನಿಚರಿ ಅಮಾವಾಸ್ಯೆಯ ದಿನ 5 ರಾಶಿಗಳ ಜನರ ಮೇಲೆ ಶನಿಯ ವಕ್ರ ದೃಷ್ಟಿ, ಈ ಉಪಾಯ ಮಾಡಿ
Shani Amavasya 2023: ಶನಿವಾರದಂದು ಬರುವ ಅಮಾವಾಸ್ಯೆಯನ್ನು ಶನಿಚರಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ವರ್ಷದ ಮೊದಲ ಶನಿಚರಿ ಅಮಾವಾಸ್ಯೆ 5 ರಾಶಿಗಳ ಜಾತಕದವರ ಪಾಲಿಗೆ ವಿಶೇಷವಾಗಿದೆ. ಬನ್ನಿ ಇದರ ಮಹತ್ವ ತಿಳಿದುಕೊಳ್ಳೋಣ.
Shanichari Amavasya 2023 Remedies: ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ತಿಂಗಳಲ್ಲಿ ಒಂದು ಅಮಾವಾಸ್ಯೆ ಹಾಗೂ ಒಂದು ಹುಣ್ಣಿಮೆ ಬರುತ್ತದೆ. ಪ್ರತಿ 15ನೇ ತಿಥಿಗೆ ಅಮಾವಾಸ್ಯೆ ಇರುತ್ತದೆ. ಈ ತಿಥಿ ಪಿತೃರಿಗೆ ಸಾಮರ್ಪಿತವಾಗಿದೆ. ಮಾಘ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿಯ ಮೌನಿ ಅಮಾವಾಸ್ಯೆಯು ಶನಿವಾರ ಬೀಳುತ್ತಿರುವ ಕಾರಣ ಅದರ ಮಹತ್ವ ಹಲವು ಪಟ್ಟು ಹೆಚ್ಚಾಗುತ್ತದೆ. ಈ ಬಾರಿಯ ಶನಿಚರಿ ಅಮಾವಾಸ್ಯೆ ಜನವರಿ 21, 2023 ರಂದು ಅಂದರೆ ಶನಿವಾರ ಬರುತ್ತಿದೆ.
ಅಮಾವಾಸ್ಯೆಯ ದಿನ ದಾನ ಹಾಗೂ ಸ್ನಾನಕ್ಕೆ ವಿಶೇಷ ಮಹತ್ವವಿದೆ
ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದ ದಿನ ಬರುವ ಅಮಾವಾಸ್ಯೆಯನ್ನು ತುಂಬಾ ವಿಶೇಷ ಎಂದು ಭಾವಿಸಲಾಗುತ್ತದೆ. ಶನಿಚರಿ ಅಮಾವಾಸ್ಯೆಯ ದಿನ ಸರ್ವಾರ್ಥಸಿದ್ಧಿ ಯೋಗ ನಿರ್ಮಾಣಗೊಳ್ಳುತ್ತಿರುವ ಕಾರಣ ಅದರ ಮಹತ್ವ ದುಪ್ಪಟ್ಟಾಗಿದೆ. ಈ ದಿನ ಶನಿದೇವನಿಗೆ ಸಂಬಂಧಿಸಿದ ಉಪಾಯಗಳನ್ನು ಮಾಡುವ ಮೂಲಕ ಶನಿಯ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದು ಎನ್ನಲಾಗುತ್ತದೆ.
ಈ ರಾಶಿಗಳ ಜನರ ಮೇಲೆ ಶನಿಯ ವಕ್ರ ದೃಷ್ಟಿ
ಪ್ರಸ್ತುತ ಶನಿ ಕುಂಭರಾಶಿಯಲ್ಲಿದ್ದಾನೆ. ಶನಿ ಕುಂಭರಾಶಿಯಲ್ಲಿರುವ ಕಾರಣ ಮಕರ, ಕುಂಭ ಹಾಗೂ ಮೀನ ರಾಶಿಯ ಜನರ ಮೇಲೆ ಸಾಡೆಸಾತಿ ಪ್ರಭಾವ ಇದೆ. ಇನ್ನೊಂದೆಡೆ ಕರ್ಕ ಹಾಗೂ ವೃಶ್ಚಿಕ ರಾಶಿಗಳ ಜನರ ಮೇಲೆ ಶನಿಯ ಎರಡೂವರೆ ವರ್ಷಗಳ ದೆಸೆಯ ಪ್ರಭಾವವಿದೆ. ಶನಿಯ ಪ್ರಕೊಪದಿಂದ ಪಾರಾಗಲು ಶನಿಚರಿ ಅಮಾವಾಸ್ಯೆಯ ದಿನ ತುಂಬಾ ವಿಶೇಷವಾಗಿದೆ. ಹೀಗಿರುವಾಗ ಈ ಐದು ರಾಶಿಗಳ ಜಾತಕದವರು ಶನಿಚರಿ ಅಮಾವಾಸ್ಯೆಯ ದಿನ ಶನಿದೆವನಿಗೆ ಸಂಬಂಧಿಸಿದ ಉಪಾಯಗಳನ್ನು ಮಾಡಬೇಕು.
ಗ್ರಹಗಳ ಸ್ಥಿತಿ ಹೇಗಿರಲಿದೆ?
ಪ್ರಸ್ತುತ ರಾಹು ಮೇಷ ರಾಶಿಯಲ್ಲಿದ್ದಾನೆ, ಮಂಗಳ ವೃಷಭ ರಾಶಿ, ಕೇತು ತುಲಾ ರಾಶಿ, ಬುಧ-ಚಂದ್ರರು ಧನು ರಾಶಿ, ಶ್ರುಕ್ರ ಹಾಗೂ ಸೂರ್ಯ ಮಕರ ರಾಶಿಯಲ್ಲಿ ಮತ್ತು ಶನಿ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾರೆ, ಗುರು ಮೀನ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಶನಿ ತನ್ನ ಸ್ವರಾಶಿಯಲ್ಲಿರುವುದು ಅತ್ಯಂತ ಶುಭ ಎಂದು ಭಾವಿಸಲಾಗುತ್ತಿದೆ.
ಇದನ್ನೂ ಓದಿ-ಫೆಬ್ರುವರಿ 15 ಬಳಿಕ ಈ ಜನರಿಗೆ ಬಂಬಾಟ್ ಲಾಟರಿ ಭಾಗ್ಯ, ಅಪಾರ ಧನವೃಷ್ಟಿಯಿಂದ ತಿಜೋರಿ ಫುಲ್ !
ಶನಿ ದೋಷ ಮುಕ್ತಿಗಾಗಿ ಉಪಾಯಗಳು
>> ಸೂರ್ಯಾಸ್ತದ ಬಳಿಕ ಅಶ್ವತ್ಥ ಮರದ ಕೆಳಗೆ ದೀಪ ಬೆಳಗಿ.
>> ಶನಿದೇವನಿಗೆ ಎಣ್ಣೆ ಅರ್ಪಿಸಿ ಪೂಜೆ ಮಾಡಿ.
>> ಅಶ್ವತ್ಥ ಮರಕ್ಕೆ ಜಲ ಅರ್ಪಿಸಿ, ಪೂಜೆ ಸಲ್ಲಿಸಿದ ಬಳಿಕ 7 ಪ್ರದಕ್ಷಣೆಗಳನ್ನು ಹಾಕಿ.
>> ಪ್ರತಿ ಶನಿವಾರ ಪ್ರಾತಃಕಾಲದ ಎಲ್ಲಾ ಕರ್ಮಗಳಿಂದ ನಿವೃತ್ತಿ ಪಡೆದ ಬಳಿಕ ಸ್ನಾನ ಮಾಡಿ ಎಣ್ಣೆ ದಾನ ಮಾಡಿ.
>> ಶ್ರೀ ಆಂಜನೇಯನಿಗೆ ಸಿಂಧೂರ ಮತ್ತು ಮಲ್ಲಿಗೆ ಹೂವು ಅರ್ಪಿಸಿ.
>> ಶನಿ ಚಾಲಿಸಾ ಪಠಿಸಿ.
ಇದನ್ನೂ ಓದಿ-ಇಂತಹ ಜನರು ತಮ್ಮ ಜೀವನದಲ್ಲಿ ಬೇಗ ವೃದ್ಧರಾಗುತ್ತಾರೆ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ, ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-