Kuber Yantra Niyam: ಕೆಲವೇ ದಿನಗಳಲ್ಲಿ ಹಣಕಾಸಿನ ಮುಗ್ಗಟ್ಟಿಗೆ ಅಂತ್ಯ ಹಾಡಲು ಈ ಉಪಾಯ ಅನುಸರಿಸಿ

Kuber Yantra Vidhi: ತಾಯಿ ಲಕ್ಷ್ಮಿಯ ಶ್ರೀಯಂತ್ರದಂತೆ, ಕುಬೇರ ಯಂತ್ರವನ್ನು ಕೂಡ ಮನೆಯಲ್ಲಿ ಇಡುವುದರಿಂದ ವ್ಯಕ್ತಿಯು ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಬಹುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಯಂತ್ರವನ್ನು ಸರಿಯಾದ ವಿಧಿ-ವಿಧಾನಗಳ ಮೂಲಕ ಇಟ್ಟುಕೊಂಡಾಗ ಮಾತ್ರ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಈ ಯಂತ್ರವನ್ನು ಪ್ರತಿಷ್ಟಾಪಿಸುವಾಗ ಈ ನಿಯಮಗಳನ್ನು ಅನುಸರಿಸುವುದು ಅವಶ್ಯಕ.  

Written by - Nitin Tabib | Last Updated : Jan 16, 2023, 10:29 PM IST
  • ಜ್ಯೋತಿಷ್ಯ ಶಾಸ್ತ್ರದಲ್ಲಿ, ಮನೆಯಲ್ಲಿ ಕುಬೇರ ಯಂತ್ರವನ್ನು ಪ್ರತಿಷ್ಠಾಪಿಸಿ ಪೂಜಿಸುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
  • ಆದರೆ ಕುಬೇರ್ ಯಂತ್ರವನ್ನು ಪ್ರತಿಷ್ಟಾಪಿಸುವಾಗ ವ್ಯಕ್ತಿಯು ನಿಯಮಗಳನ್ನು ಅನುಸರಿಸಿದಾಗ ಮಾತ್ರ ಅದರ ಪ್ರಯೋಜನಗಳು ಪ್ರಾಪ್ತಿಯಾಗುತ್ತವೆ.
Kuber Yantra Niyam: ಕೆಲವೇ ದಿನಗಳಲ್ಲಿ ಹಣಕಾಸಿನ ಮುಗ್ಗಟ್ಟಿಗೆ ಅಂತ್ಯ ಹಾಡಲು ಈ ಉಪಾಯ ಅನುಸರಿಸಿ title=
Kuber Yantra Niyam

Kuber Yantra Mantra: ಹಿಂದೂ ಧರ್ಮದಲ್ಲಿ ಸಂಪತ್ತಿನ ದೇವರು ಎಂದೇ ಕರೆಯಲಾಗುವ ಕುಬೇರನಿಗೆ ವಿಶೇಷ ಪ್ರಾಮುಖ್ಯತೆ ಇದೆ. ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯಂತೆಯೇ ಕುಬೇರ ದೇವನ ಆಶೀರ್ವಾದ ಪ್ರಾಪ್ತಿಯಾದರೆ ವ್ಯಕ್ತಿಯ ದಿನಗಳು ತಿರುಗಲು ಕಾಲ ಬೇಕಾಗುವುದಿಲ್ಲ ಎನ್ನಲಾಗುತ್ತದೆ. ತಿಜೋರಿಯಲ್ಲಿ ಆಕಸ್ಮಿಕವಾಗಿ ಹಣ ಬರಲಾರಂಭಿಸುತ್ತದೆ. ಇದೆ ವೇಳೆ, ಯಂತ್ರಗಳಿಗೂ ಕೂಡ ನಮ್ಮ ಧರ್ಮ ಶಾಸ್ತ್ರಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಯಂತ್ರವನ್ನು ಮನೆಯಲ್ಲಿ ಸರಿಯಾಗಿ ಪ್ರತಿಷ್ಠಾಪಿಸಿದರೆ, ವ್ಯಕ್ತಿಯು ಬಯಸಿದ ಫಲಿತಾಂಶವನ್ನು ಪಡೆಯುತ್ತಾನೆ. ಯಾವುದೇ ನಿರ್ದಿಷ್ಟ ದೇವರ ಆಶೀರ್ವಾದ ಪಡೆಯಲು, ಸಂಬಂಧಿಸಿದ ಯಂತ್ರವನ್ನು ಪೂಜಿಸಿದರೆ, ಮನೆಯಿಂದ ಬಡತನ ದೂರಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ, ಪ್ರತಿಯೊಂದು ಯಂತ್ರವು ತಾರಣ ಮಂತ್ರವನ್ನು ಹೊಂದಿದೆ, ಅಂದರೆ ಯಂತ್ರವನ್ನು ಪರಿಪೂರ್ಣವಾಗಿಸುವ ಮಂತ್ರವನ್ನು ತಾರಣ ಮಂತ್ರ ಎಂದು ಕರೆಯಲಾಗುತ್ತದೆ. ಮತ್ತು ವ್ಯಕ್ತಿಯ ಎಲ್ಲಾ ಆಸೆಗಳನ್ನು ಈಡೇರುತ್ತವೆ. ಕುಬೇರ ಯಂತ್ರ ಇವುಗಳಲ್ಲಿ ಒಂದು. ಮನೆಯಲ್ಲಿ ಕುಬೇರ ಯಂತ್ರವನ್ನು ಪೂಜಿಸುವುದರಿಂದ ಸಾಕಷ್ಟು ಸಿರಿಸಂಪತ್ತು ಪಡೆಯುತ್ತಾನೆ ಎನ್ನಲಾಗುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ತಾಯಿ  ಲಕ್ಷ್ಮಿಯ ಶ್ರೀಯಂತ್ರವನ್ನು  ಹೊರತುಪಡಿಸಿ, ಕುಬೇರ ಯಂತ್ರವನ್ನು ಪೂಜಿಸುವುದು ಸಾಕಷ್ಟು ಸಂಪತ್ತನ್ನು ತರುತ್ತದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಪ್ರತಿಷ್ಟಾಪಿಸಿದಾಗ ಮಾತ್ರ ಅದರ ಶುಭ ಫಲಗಳು ಪ್ರಾಪ್ತಿಯಾಗುತ್ತವೆ.

ಕುಬೇರ್ ಯಂತ್ರವನ್ನು ಹೇಗೆ ಪ್ರತಿಷ್ಠಾಪಿಸಬೇಕು?

ಜ್ಯೋತಿಷ್ಯ ಶಾಸ್ತ್ರದಲ್ಲಿ, ಮನೆಯಲ್ಲಿ ಕುಬೇರ ಯಂತ್ರವನ್ನು ಪ್ರತಿಷ್ಠಾಪಿಸಿ ಪೂಜಿಸುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಕುಬೇರ್ ಯಂತ್ರವನ್ನು ಪ್ರತಿಷ್ಟಾಪಿಸುವಾಗ ವ್ಯಕ್ತಿಯು ನಿಯಮಗಳನ್ನು ಅನುಸರಿಸಿದಾಗ ಮಾತ್ರ ಅದರ ಪ್ರಯೋಜನಗಳು ಪ್ರಾಪ್ತಿಯಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಮನೆಯಲ್ಲಿ ಕುಬೇರ್ ಯಂತ್ರವನ್ನು ಸ್ಥಾಪಿಸಲು ಯೋಚಿಸುತ್ತಿದ್ದರೆ, ಖಂಡಿತವಾಗಿಯೂ ಈ ವಿಷಯಗಳನ್ನು ನೆನಪಿನಲ್ಲಿಡಿ.

- ನೀವು ಕುಬೇರ ದೇವನ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಶ್ರೀ ಕುಬೇರ ಯಂತ್ರವನ್ನು ಖರೀದಿಸಿ ಮತ್ತು ಅದನ್ನು ಮನೆಗೆ ತನ್ನಿ.

- ಕುಬೇರ ಯಂತ್ರವನ್ನು ಹಳದಿ ಬಣ್ಣದ ಬಟ್ಟೆಯಲ್ಲಿ ಕಟ್ಟಿ ಮನೆಯ ದೇವಸ್ಥಾನದ ಮುಂದೆ ಒಂದು ಪಾತ್ರೆಯಲ್ಲಿ ಇರಿಸಿ.

- ಮರುದಿನ, ಸ್ನಾನ ಇತ್ಯಾದಿಗಳಿಂದ ನಿವೃತ್ತರಾದ ನಂತರ, ಶುಭ್ರವಾದ ಬಟ್ಟೆಗಳನ್ನು ಧರಿಸಿ ಮತ್ತು ಸಣ್ಣ ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ. ಇದರೊಂದಿಗೆ ಹಸಿ ಹಾಲು ಮತ್ತು ಗಂಗಾಜಲವನ್ನು ಪ್ರತ್ಯೇಕ ಪಾತ್ರೆಯಲ್ಲಿ ತೆಗೆದುಕೊಳ್ಳಿ.

>> ಈಗ ದೇವರ ಕೊನೆಯಲ್ಲಿ ಆಸನವನ್ನು ಹಾಕಿ ಕುಳಿತು ಬಟ್ಟೆಯಿಂದ ಯಂತ್ರವನ್ನು ಹೊರತೆಗೆಯಿರಿ. ಇದರ ನಂತರ ಯಂತ್ರಕ್ಕೆ ಗಂಗಾಜಲ ಅಥವಾ ಹಸಿ ಹಾಲಿನಿಂದ ಅಭಿಷೇಕ ಮಾಡಿ.

- ನಂತರ 'ಓಂ ಶ್ರೀ, ಓಂ ಹ್ರೀ ಶ್ರೀ, ಓಂ ಹ್ರೀ ಶ್ರೀ ಕ್ಲೀಂ ವಿತ್ತೇಶ್ವರಾಯ: ನಮಃ' ಎಂಬ ಮಂತ್ರವನ್ನು 11 ಅಥವಾ 21 ಬಾರಿ ಪಠಿಸಿ. ನಂತರ, ಸಂಪತ್ತಿನ ದೇವರಾದ ಕುಬೇರನನ್ನು ಸ್ಮರಿಸಿ.

- ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಹೋಗಲಾಡಿಸಲು ದೇವರನ್ನು ಪ್ರಾರ್ಥಿಸಿ. ಇದರ ನಂತರ, ತಿಜೋರಿಯಲ್ಲಿ ಕುಬೇರ್ ಯಂತ್ರವನ್ನು ಪ್ರತಿಷ್ಠಾಪಿಸಿ.

ಇದನ್ನೂ ಓದಿ-Chanakya Niti: ಪತಿ-ಪತ್ನಿ ನಿತ್ಯ ಈ ಕೆಲಸ ಮಾಡಿದರೆ ಸಂಬಂಧದಲ್ಲಿ ಎಂದಿಗೂ ಬಿರುಕು ಕಾಣಿಸಿಕೊಳ್ಳುವುದಿಲ್ಲ

- ಕುಬೇರ್ ಯಂತ್ರವನ್ನು ಮಂಗಳವಾರ ಅಥವಾ ಶನಿವಾರ ಮಾತ್ರ ಪ್ರತಿಷ್ಠಾಪಿಸಬೇಕು ಎಂಬುದನ್ನು ನೆನಪಿನಲ್ಲಿಡಿ.

ಇದನ್ನೂ ಓದಿ-Lucky Moles: ದೇಹದ ಈ ಅಂಗದ ಮೇಲೆ ಮಚ್ಚೆ ಇದ್ದರೆ, ಸೌಂದರ್ಯ ಮತ್ತು ಬುದ್ಧಿಮತ್ತೆಯಲ್ಲಿ ನಿಮಗೆ ನೀವೇ ಸರಿಸಾಟಿ ಎಂದರ್ಥ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News