Green Tea ಅಷ್ಟೇ ಅಲ್ಲ Green Coffee ಕೂಡ ಮೇಣದಂತೆ ಬೊಜ್ಜು ಕರಗಿಸುತ್ತದೆ
Weight Loss : ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ ಒಂದು ದೊಡ್ಡ ಸವಾಲಾಗಿಯೇ ಪರಿಣಮಿಸಿದೆ. ನೀವೂ ಕೂಡ ತೂಕ ಇಳಿಕೆ ಮಾಡಲು ಯತ್ನಿಸುತ್ತಿದ್ದರೆ, ಬ್ರೋಕೊಲಿಯಿಂದ ತಯಾರಿಸಿದ ಗ್ರೀನ್ ಕಾಫಿಯನ್ನು ಒಮ್ಮೆ ಟ್ರೈ ಮಾಡಿ ನೋಡಬಹುದು. ಆದರೆ ಪಾಕವಿಧಾನ ಹಾಗೂ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,
Broccoli Coffee : ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ಒಂದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ದೇಹದಲ್ಲಿ ಅಧಿಕ ಕೊಬ್ಬಿನಿಂದಾಗಿ ಬಾಡಿ ಶೇಪ್ ಬಿಗಡಾಯಿಸಲು ಪ್ರಾರಂಭವಾಗುತ್ತದೆ. ಇದಲ್ಲದೆ ಇದರಿಂದ ಹಲವು ರೀತಿಯ ಕಾಯಿಲೆಗಳು ಬರುವ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ. ದೈನಂದಿನ ವ್ಯಾಯಾಮದ ಜೊತೆಗೆ, ತೂಕವನ್ನು ಕಡಿಮೆ ಮಾಡಲು ಆರೋಗ್ಯಕರ ಆಹಾರವನ್ನು ಆಯ್ದುಕೊಳ್ಳಲು ಸಲಹೆ ನೀಡಲಾಗುತ್ತದೆ. ನೀವೂ ಕೂಡ ನಿಮ್ಮ ತೂಕವನ್ನು ಬಯಸುತ್ತಿದ್ದರೆ, ಹಸಿರು ಚಹಾದ ಜೊತೆಗೆ ನೀವು ಹಸಿರು ಕಾಫಿ ಕೂಡ ಸೇವಿಸಬಹುದು. ಹೌದು, ಈ ಹಸಿರು ಬಣ್ಣದ ಕಾಫಿಯನ್ನು ವಿಶೇಷ ರೀತಿಯ ತರಕಾರಿಯಿಂದ ತಯಾರಿಸಲಾಗುತ್ತದೆ. ಬನ್ನಿ ತಿಳಿದುಕೊಳ್ಳೋಣ,
ಇದನ್ನೂ ಓದಿ-Prediabetes : ಭಾರತದಲ್ಲಿ ಹೆಚ್ಚುತ್ತಿವೆ ಪ್ರಿಡಯಾಬಿಟಿಸ್ ಪ್ರಕರಣಗಳು.. ಇದು ಏನು ಸೂಚಿಸುತ್ತದೆ?
ತೂಕ ಇಳಿಕೆಗೆ ಬ್ರೊಕೊಲಿ ಕಾಫಿ ಕುಡಿಯಿರಿ
ತೂಕವನ್ನು ಇಳಿಕೆ ಮಾಡಿಕೊಳ್ಳಲು, ನೀವು ಬ್ರೊಕೊಲಿ ಕಾಫಿಯನ್ನು ಸೇವಿಸಬಹುದು. ಇದು ದೇಹಕ್ಕೆ ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗಿದೆ. ನಿಮ್ಮಿಂದ ಸಾಕಷ್ಟು ತರಕಾರಿಗಳನ್ನು ತಿನ್ನಲು ಸಾಧ್ಯವಾಗದಿದ್ದರೆ, ಬ್ರೊಕೊಲಿ ಕಾಫಿಯನ್ನು ತೆಗೆದುಕೊಳ್ಳಿ. ಬ್ರೊಕೊಲಿ ಕಾಫಿ ದೇಹದ ತೂಕವನ್ನು ಇಳಿಕೆ ಮಾಡಲು ಪರಿಣಾಮಕಾರಿಯಾಗಿದೆ. ಅದರಲ್ಲಿ ಕ್ಯಾಲೋರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಅಲ್ಲದೆ, ಬ್ರೊಕೊಲಿ ಫೈಬರ್ ನಿಂದ ಸಮೃದ್ಧವಾಗಿದೆ, ಇದು ತೂಕ ಇಳಿಕೆಯಲ್ಲಿ ಪರಿಣಾಮಕಾರಿ ಎಂದು ಸಾಬೀತಾಗುತ್ತದೆ. ಬ್ರೊಕೊಲಿ ಕಾಫಿಯಲ್ಲಿ ಸೂಕ್ಷ್ಮ ಪೋಷಕಾಂಶಗಳಿವೆ, ಇದು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ-ಮೊಣಕೈ ಮೇಲಿನ ಕಪ್ಪು ಕಲೆಯನ್ನು ಸುಲಭವಾಗಿ ಹೋಗಲಾಡಿಸುತ್ತೆ ಈ ಮನೆಮದ್ದು
ಬ್ರೊಕೊಲಿ ಕಾಫಿ ತಯಾರಿಸುವುದು ಹೇಗೆ?
>> ಬ್ರೊಕೊಲಿ ಕಾಫಿಯನ್ನು ತಯಾರಿಸಲು, ಮೊದಲು ಬ್ರೊಕೊಲಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ.
>> ನಂತರ ಅದನ್ನು ಚೆನ್ನಾಗಿ ರುಬ್ಬಿಕೊಳ್ಳಿ ಮತ್ತು ಡಬ್ಬಿಯೊಂದರಲ್ಲಿ ಸಂಗ್ರಹಿಸಿ. ಇದಲ್ಲದೆ, ನೀವು ಮಾರುಕಟ್ಟೆಯಿಂದ ಬ್ರೊಕೊಲಿ ಪುಡಿಯನ್ನು ಸಹ ಖರೀದಿಸಬಹುದು.
>> ಕಾಫಿ ತಯಾರಿಸಲು, ಗ್ಯಾಸ್ ಮೇಲೆ 1 ಕಪ್ ಹಾಲನ್ನು ಬಿಸಿ ಮಾಡಿ.
>> ಇದಕ್ಕೆ ಬ್ರೊಕೊಲಿ ಪೌಡರ್ ಹಾಕಿ ಚೆನ್ನಾಗಿ ಕುದಿಸಿ. ಈ ಕಾಫಿ ಕುಡಿಯುವುದರಿಂದ ತೂಕ ಬೇಗ ಇಳಿಕೆಯಾಗುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.