Watch Vastu Tips: ಯಮರಾಜನ ದಿಕ್ಕಂತೆ ಇದು; ಇಲ್ಲಿ ಗಡಿಯಾರ ಹಾಕುವ ತಪ್ಪು ಮಾಡದಿರಿ
ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಎಂದು ಹೇಳಲಾಗುತ್ತದೆ. ಈ ದಿಕ್ಕಿನಲ್ಲಿ ತಪ್ಪಿಯೂ ಗಡಿಯಾರವನ್ನು ಹಾಕಬಾರದು.
ನವದೆಹಲಿ : ಈಗ ಮಾರುಕಟ್ಟೆಯಲ್ಲಿ ಡಿಸೈನ್ ಡಿಸೈನ್ ಗಡಿಯಾರಗಳು (Clock) ಸಿಗುತ್ತವೆ. ಇವು ನಿರ್ದಿಷ್ಟ ಸಮಯವನ್ನು ತೋರಿಸುವುದಲ್ಲದೆ, ಗೋಡೆಯ ಅಂದವನ್ನು ಕೂಡಾ ಹೆಚ್ಚಿಸುತ್ತವೆ. ಗಡಿಯಾರ ಕೇವಲ ಸರಿಯಾದ ಸಮಯವನ್ನು ತೋರಿಸುವುದು ಮಾತ್ರವಲ್ಲ, ವ್ಯಕ್ತಿ ಜೀವನದ ಧನಾತ್ಮಕ (Positive) ಮತ್ತು ಋಣಾತ್ಮಕ ಪರಿಣಾಮಗಳ ಬಗ್ಗೆಯೂ ಹೇಳುತ್ತದೆ. ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ, ಸರಿಯಾದ ಸ್ಥಳದಲ್ಲಿ ಇಡುವುದು ಬಹಳ ಮುಖ್ಯ.
ಈ ದಿಕ್ಕಿನಲ್ಲಿರಲಿ ಗಡಿಯಾರ:
ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಎಂದು ಹೇಳಲಾಗುತ್ತದೆ. ಈ ದಿಕ್ಕಿನಲ್ಲಿ ತಪ್ಪಿಯೂ ಗಡಿಯಾರವನ್ನು ಹಾಕಬಾರದು. ಇನ್ನು ಪಶ್ಚಿಮ ದಿಕ್ಕಿನಲ್ಲಿ ಗಡಿಯಾರ ಇಟ್ಟರೆ, ಆರ್ಥಿಕ ನಷ್ಟ ಸಂಭವಿಸುತ್ತದೆಯಂತೆ. ಹಾಗಾಗಿ ಯಾವಾಗಲೂ ಗಡಿಯಾರವನ್ನು (clock) ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿಯೇ ಇರಿಸಬೇಕು.
ಇದನ್ನೂ ಓದಿ : Shukra Rashi Parivartan 2021: ಶುಕ್ರನ ರಾಶಿ ಪರಿವರ್ತನೆಯಿಂದ ದ್ವಾದಶ ರಾಶಿಗಳ ಫಲಾಫಲ
ಗಡಿಯಾರದ ಸಮಯವನ್ನು ಸರಿಯಾಗಿ ಇಟ್ಟುಕೊಳ್ಳಿ :
ಅನೇಕ ಮನೆಗಳಲ್ಲಿ ಜನರು ಗಡಿಯಾರದ ಸಮಯವನ್ನು ಸ್ವಲ್ಪ ಮುಂದೆ ಇಟ್ಟುಕೊಂಡಿರುವುದನ್ನು ನೋಡಿರಬಹುದು. ಅವರವರ ಅನುಕೂಲಕ್ಕೆ ತಕ್ಕಂತೆ ಹಾಗೆ ಮಾಡಿಕೊಳ್ಳುತ್ತಾರೆ. ಆದರೆ ವಾಸ್ತು ಶಾಸ್ತ್ರದ (Vastu shastra) ಪ್ರಕಾರ ಈ ರೀತಿ ಮಾಡುವುದು ತಪ್ಪು. ಗಡಿಯಾರದ ಸಮಯವನ್ನು ಕೆಲ ನಿಮಿಷಗಳಿಗೂ ಮುಂದೆ ಅಥವಾ ಹಿಂದೆ ಇಡುವುದು ಅಶುಭ ಎನ್ನಲಾಗಿದೆ.
ಬಾಗಿಲಿಗೆ ನೇತು ಹಾಕದಿರಿ :
ಗಡಿಯಾರವನ್ನು ಎಂದಿಗೂ ಬಾಗಿಲಿನ ಮೇಲೆ ನೇತುಹಾಕಬಾರದು. ವಾಸ್ತು (Vastu) ಪ್ರಕಾರ, ಗಡಿಯಾರದ ಕೆಳಗಿನಿಂದ ಹಾದು ಹೋಗುವ ವ್ಯಕ್ತಿಯ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : Vishnu Rekha : ಕೈಯಲ್ಲಿರುವ ವಿಷ್ಣು ರೇಖೆಯಿಂದ ನಿಮಗೆ ಒಲಿಯಲಿದೆ ಅದೃಷ್ಟ..!
ಗಡಿಯಾರದ ಆಕಾರ ಹೀಗಿರಲಿ :
- ವಾಸ್ತು ಪ್ರಕಾರ, ಮೊಟ್ಟೆಯ ಆಕಾರದ ಗಡಿಯಾರ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಇದು ವಾಸ್ತು ದೋಷಗಳನ್ನು (Vastu dosh) ಪರಿಹರಿಸುತ್ತದೆ ಎನ್ನುವುದು ನಂಬಿಕೆ . ಅಲ್ಲದೆ, ಕುಟುಂಬ ಸದಸ್ಯರು ಬಡ್ತಿ ಪಡೆಯಲು ಕೂಡಾ ಸಹಕಾರಿಯಾಗಿದೆ ಎನ್ನಲಾಗಿದೆ. ಇದಲ್ಲದೆ, ಚೌಕ ದುಂಡಗಿನ ಆಕಾರದ ಗಡಿಯಾರ ಸಹ ಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ತಿಳಿ ಹಸಿರು ಮತ್ತು ಹಳದಿ ಗಡಿಯಾರವನ್ನು ಶುಭವೆಂದು ಪರಿಗಣಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.