Zodiac Nature: ರಾಜಶೈಲಿಯಲ್ಲಿ ಜೀವನ ಸಾಗಿಸುತ್ತಾರೆ ಈ ಜನರು, ಸೂರ್ಯನ ಕೃಪೆಯಿಂದ ಅಪಾರ ಹಣ-ಕೀರ್ತಿ ಗಳಿಸುತ್ತಾರೆ
Characteristics of Leo Natives: ಪ್ರತಿಯೊಂದು ರಾಶಿಗೆ ಬೇರೆ ಬೇರೆ ಗ್ರಹಗಳು ಅಧಿಪತಿಯಾಗಿವೆ ಹಾಗೂ ಈ ಗ್ರಹಗಳು ಸಂಬಂಧಿತ ರಾಶಿಗಳ ಜನರ ಜೀವನದ ಮೇಲೆ ಪ್ರಭಾವ ಬೀರುತ್ತವೆ. ತಮ್ಮ ರಾಶಿಗಳ ಅಧಿಪತಿ ಗ್ರಹಗಳ ಕಾರಣ ಕೆಲವರು ತಮ್ಮ ಜೀವನದಲ್ಲಿ ತುಂಬಾ ಲಕ್ಕಿ ಆಗಿರುತ್ತಾರೆ.
Characteristics of Leo Natives in Kannada: ಜೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ರಾಶಿಯ ಅಧಿಪತಿ ಗ್ರಹದ ಕುರಿತು ಹೇಳಲಾಗಿದೆ. ಈ ಗ್ರಹದ ಪ್ರಭಾವ ವ್ಯಕ್ತಿಯ ಸ್ವಭಾವ-ವ್ಯವಹಾರ, ಭವಿಷ್ಯ ಮತ್ತು ವ್ಯಕ್ತಿತ್ವದ ಮೇಲೆ ಕಂಡುಬರುತ್ತದೆ. ಇಂದು ಸೂರ್ಯದೇವನ ಅಪಾರ ಕೃಪೆ ಪ್ರಾಪ್ತಿಯಾಗಿರುವ ಒಂದು ರಾಶಿಯ ಕುರಿತು ನಾವು ಮಾಹಿತಿಯನ್ನು ನೀಡಲಿದ್ದೇವೆ. ಸೂರ್ಯ ದೇವನ ಕೃಪೆಯಿಂದ ಈ ರಾಶಿಗಳ ಜನರು ತುಂಬಾ ತೇಜಸ್ವಿ, ನಿರ್ಭಯ, ಆತ್ಮವಿಶ್ವಾಸದಿಂದ ಭರಪೂರ, ಆರೋಗ್ಯವಂತರು ಹಾಗೂ ವೃತ್ತಿ ಜೀವನದಲ್ಲಿ ಅಪಾರ ಯಶಸ್ಸನ್ನು ಗಳಿಸುತ್ತಾರೆ. ಸೂರ್ಯದೇವನ ಈ ವಿಶೇಷ ಕೃಪೆ ಸಿಂಹ ರಾಶಿಯ ಜಾತಕದವರಿಗೆ ಲಭಿಸುತ್ತದೆ.
ಸಿಂಹ ರಾಶಿಯ ಜನರ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ
ಸಿಂಹ ರಾಶಿಯ ಜನರು ತುಂಬಾ ಆಕರ್ಷಕ ಪರ್ಸ್ನ್ಯಾಲಿಟಿ ಹೊಂದಿರುತ್ತಾರೆ. ಸೂರ್ಯ ದೇವ ಸಿಂಹ ರಾಶಿಯ ರಾಷ್ಯಾಧಿಪ. ಇದೇ ಕಾರಣದಿಂದ ಈ ಜಾತಕದವರ ಮೇಲೆ ಸೂರ್ಯನ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ಸ್ವಭಾವತಃ ಇವರು ತುಂಬಾ ಸಾಹಸಿಗಳು, ದೃಢನಿರ್ಧಾರ ಹೊಂದಿದವರು, ಆತ್ಮವಿಶ್ವಾಸದಿಂದ ಕೂಡಿರುವ ಹಾಗೂ ರಾಜಶೈಲಿಯಲ್ಲಿ ಜೀವನವನ್ನು ಕಳೆಯುವವರು ಆಗಿರುತ್ತಾರೆ. ಇದಲ್ಲದೆ ಇವರು ತುಂಬಾ ದಯೆಯುಳ್ಳವರು, ಇತರರಿಗೆ ಸಹಾಯ ಮಾಡುವವರು ಆಗಿರುತ್ತಾರೆ. ಯಾವುದೇ ವ್ಯಕ್ತಿಯ ಜೊತೆಗೆ ಇವರು ಸ್ನೇಹ ಬೆಳೆಸಿದರೆ, ಜೀವನವಿಡೀ ಅವರಿಗೆ ಸಾಥ್ ನೀಡುತ್ತಾರೆ. ಇವರ ವ್ಯಕ್ತಿತ್ವ ಎಲ್ಲರನ್ನು ಸುಲಭವಾಗಿ ತನ್ನತ್ತ ಆಕರ್ಷಿಸುವಂತಿರುತ್ತದೆ.
ರಾಜಶೈಲಿಯಲ್ಲಿ ಜೀವಿಸುತ್ತಾರೆ
ಸಿಂಹ ರಾಶಿಯ ಜಾತಕ ಹೊಂದಿರುವ ಜನರು ಹಣ-ಹೆಸರು ಗಳಿಸುವ ವಿಷಯದಲ್ಲಿ ತುಂಬಾ ಮುಂದಿರುತ್ತಾರೆ. ರಾಜಶೈಲಿಯಲ್ಲಿ ಜೀವನ ಕಳೆಯುತ್ತಾರೆ. ಆಹಾರ-ವಿಹಾರ, ಬಟ್ಟೆ-ವಾಹನ ಇತ್ಯಾದಿಗಳ ಮೇಲೆ ಇವರು ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಇವರ ಹವ್ಯಾಸಗಳು ತುಂಬಾ ದುಬಾರಿಯಾಗಿರುತ್ತವೆ. ಇವರು ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾರೆ ಮತ್ತು ಅವುಗಳನ್ನು ನನಸಾಗಿಸುತ್ತಾರೆ. ಇವರು ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಸೂರ್ಯನ ಕೃಪೆಯಿಂದ ಬಹಳಷ್ಟು ಯಶಸ್ಸನ್ನು ಪಡೆಯುತ್ತಾರೆ. ಇವರು ಸಾಮಾಜಿಕವಾಗಿಯೂ ಕೂಡ ತುಂಬಾ ಸಕ್ರಿಯರಾಗಿರುತ್ತಾರೆ.
ಇದನ್ನೂ ಓದಿ-Money Plant Tricks: ಮನಿ ಪ್ಲಾಂಟ್ ಗೆ ಸಂಬಂಧಿಸಿದ ಈ ಟ್ರಿಕ್ ತುಂಬಾ ಚಮತ್ಕಾರಿಯಾಗಿದೆ
ಕೋಪದ ಕಾರಣ ಇವರ ಸಂಬಂಧಗಳು ಬಿಗಡಾಯಿಸುತ್ತವೆ
ಹಲವು ಬಾರಿ ಒಂದೇ ಒಂದು ಕೊರತೆಯ ಕಾರಣ ಸಿಂಹ ರಾಶಿಯ ಜನರ ಎಲ್ಲಾ ಉತ್ತಮ ಗುಣಗಳು ಮರೆಯಾಗುತ್ತವೆ. ಈ ಜನರು ಬಹಳ ಬೇಗನೆ ಕೊಪಿಸಿಕೊಳ್ಳತ್ತಾರೆ ಮತ್ತು ಕೆಲವೊಮ್ಮೆ ತುಂಬಾ ಸೊಕ್ಕಿನಿಂದ ವರ್ತಿಸುತ್ತಾರೆ. ಈ ಕಾರಣದಿಂದಾಗಿ, ಇವರು ತಮಗೆ ತಾವೇ ಬಹಳಷ್ಟು ಹಾನಿಯನ್ನುಂಟು ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ನಷ್ಟ ಎಷ್ಟೊಂದು ತೀವ್ರವಾಗಿರುತ್ತದೆ ಎಂದರೆ, ತಮ್ಮ ಜೀವನದುದ್ದಕ್ಕೂ ಅದರ ಭಾರವನ್ನು ಇವರು ಹೊತ್ತುಕೊಳ್ಳುತ್ತಾರೆ.
ಇದನ್ನೂ ಓದಿ-Astro Tips: ಈ ಗ್ರಹಗಳ ದೆಸೆ ವ್ಯಕ್ತಿಯನ್ನು ಸೋಮಾರಿಯನ್ನಾಗಿಸುತ್ತವೆ
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.