NRI News: ರೂ. 2000 ನೋಟು ಬ್ಯಾನ್ ಬೆನ್ನಲ್ಲೇ ಅನಿವಾಸಿ ಭಾರತೀಯರಿಗೆ ಎದುರಾಗಿದೆ ಈ ಸಮಸ್ಯೆ!
Rs 2000 Rupee Notes: ಒಮಾನ್ ನಲ್ಲಿ ನೆಲೆಸಿರುವ ಭಾರತೀಯ ವಲಸಿಗರಿಗೆ ಈಗ ಈ ನೋಟು ವಿನಿಮಯ ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ ಸ್ಥಳೀಯ ವಿನಿಮಯ ಸಂಸ್ಥೆಗಳು ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನಿರಾಕರಿಸುತ್ತಿವೆ. ಇದರಿಂದಾಗಿ ಸುಲ್ತಾನರ ನಾಡಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಪರದಾಡುವಂತಾಗಿದೆ
Rs 2000 Rupee Notes: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಭಾರತೀಯ ರಿಸರ್ವ್ ಬ್ಯಾಂಕ್) ಇತ್ತೀಚೆಗೆ ‘ಕ್ಲೀನ್ ನೋಟ್ ಪಾಲಿಸಿ’ ಭಾಗವಾಗಿ ಚಲಾವಣೆಯಲ್ಲಿರುವ 2 ಸಾವಿರ ರೂ.ಗಳ ಕರೆನ್ಸಿ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದು ಗೊತ್ತೇ ಇದೆ. ಇದರ ಭಾಗವಾಗಿ 2000 ನೋಟುಗಳ ಬದಲಾವಣೆಗೆ ಸೆಪ್ಟೆಂಬರ್ 30ರವರೆಗೆ ಗಡುವು ನಿಗದಿಪಡಿಸಲಾಗಿದೆ. ಈ ಅವಧಿಯೊಳಗೆ ಈ ಕರೆನ್ಸಿ ನೋಟುಗಳನ್ನು ಹೊಂದಿರುವವರು ಆರ್ ಬಿ ಐ ಶಾಖೆಗಳಲ್ಲಿ ಅಥವಾ ಇತರ ಬ್ಯಾಂಕ್ ಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ: ಇಳಿಕೆಯಾಯಿತು ಬಂಗರಾದ ಬೆಲೆ : ಆಭರಣ ಕೊಳ್ಳಲು ಸರಿಯಾದ ಸಮಯವಿದು
ಆದರೆ, ಒಮಾನ್ ನಲ್ಲಿ ನೆಲೆಸಿರುವ ಭಾರತೀಯ ವಲಸಿಗರಿಗೆ ಈಗ ಈ ನೋಟು ವಿನಿಮಯ ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ ಸ್ಥಳೀಯ ವಿನಿಮಯ ಸಂಸ್ಥೆಗಳು ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನಿರಾಕರಿಸುತ್ತಿವೆ. ಇದರಿಂದಾಗಿ ಸುಲ್ತಾನರ ನಾಡಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಪರದಾಡುವಂತಾಗಿದೆ. 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ತವರು ದೇಶ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಹಿಂದಿರುಗುವ ಪ್ರಯಾಣದಲ್ಲಿ ಅವರು ತಮ್ಮಲ್ಲಿರುವ ಕರೆನ್ಸಿಗಿಂತ ಮೂರು ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಕೆಲವು ವಲಸಿಗರು ಇತ್ತೀಚೆಗೆ ತಮ್ಮ ರಜೆಯನ್ನು ಮುಗಿಸಿ ಓಮನ್ ಗೆ ಮರಳಿದ್ದಾರೆ. ಅಂತಹವರಿಗೆ ಮುಂದಿನ ದಿನಗಳಲ್ಲಿ ಮತ್ತೆ ಭಾರತಕ್ಕೆ ಬರುವ ಅವಕಾಶ ಸಿಗುವುದಿಲ್ಲ ಎಂದು ಗ್ಲೋಬಲ್ ಮನಿ ಎಕ್ಸ್ ಚೇಂಜ್ ಜನರಲ್ ಮ್ಯಾನೇಜರ್ ಅಮಿತ್ ತಾಲೂಕ್ದಾರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಒಂದೇ ಸ್ಕೂಲ್’ನಲ್ಲಿ ಓದಿದ್ರು ಸ್ಟಾರ್ ಕ್ರಿಕೆಟಿಗರ ಪತ್ನಿಯರು: ಒಬ್ರು ನಟಿ… ಮತ್ತೊಬ್ರು ನಿರ್ಮಾಪಕಿ: ಯಾರೆಂದು ಗೆಸ್ ಮಾಡಿ…
ಇದೇ ವೇಳೆ ‘ಕ್ಲೀನ್ ನೋಟ್ ಪಾಲಿಸಿ’ಯ ಭಾಗವಾಗಿ ಜನರು ತಮ್ಮ ಬ್ಯಾಂಕ್ ಖಾತೆಗೆ 2 ಸಾವಿರ ರೂ. ಅಥವಾ ಅವುಗಳನ್ನು ಭಾರತದ ಯಾವುದೇ ಬ್ಯಾಂಕ್ ಶಾಖೆಯಲ್ಲಿ ಇತರ ಮುಖಬೆಲೆಯ ನೋಟುಗಳಾಗಿ ಪರಿವರ್ತಿಸಬಹುದು. ಈ ಸೌಲಭ್ಯವು ಈ ವರ್ಷ ಮೇ 23 ರಿಂದ ಸೆಪ್ಟೆಂಬರ್ 30 ರವರೆಗೆ ಲಭ್ಯವಿರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ