How can NRI apply for Aadhaar card: ಪ್ರಸ್ತುತ ಭಾರತದಲ್ಲಿ ಪ್ರತಿಯೊಂದು ಕೆಲಸಗಳನ್ನು ನಿರ್ವಹಿಸಲು ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಭಾರತದ ವಿಶಿಷ್ಟ ಗುರುತಿನ ಚೀಟಿ ಆಗಿರುವ ಆಧಾರ್ ಕಾರ್ಡ್ ಪ್ರತಿ ಭಾರತೀಯರಿಗೂ ಕೂಡ ಅತ್ಯಗತ್ಯ. ಇಂತಹ ಪರಿಸ್ಥಿತಿಯಲ್ಲಿ ಅನಿವಾಸಿ ಭಾರತೀಯ ಅಂದರೆ ಎನ್‌ಆರ್‌ಐಗಳು ಆಧಾರ್ ಕಾರ್ಡ್ ಅನ್ನು ಪಡೆಯಬಹುದೇ? ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಇದಕ್ಕೆ ಉತ್ತರ ಹೌದು. 


COMMERCIAL BREAK
SCROLL TO CONTINUE READING

ಭಾರತೀಯ ನಿವಾಸಿಗಳಂತೆ ಅನಿವಾಸಿ ಭಾರತೀಯರೂ ಕೂಡ ಸುಲಭವಾಗಿ ಆಧಾರ್ ಕಾರ್ಡ್ ಅನ್ನು ಪಡೆಯಬಹುದು. ಆದರೆ, ಇದಕ್ಕಾಗಿ ಕೆಲವು ನಿಯಮ ಮತ್ತು ಷರತ್ತುಗಳನ್ನು ಅನುಸರಿಸುವುದು ಅಗತ್ಯವಾಗಿದೆ. 


ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿರುವ ಮಾಹಿತಿಯ ಪ್ರಕಾರ, ವಿದೇಶದಲ್ಲಿರುವ ಭಾರತೀಯರೂ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬಹುದು. ಅನಿವಾಸಿ ಭಾರತೀಯರು ಭಾರತದ ಯಾವುದೇ ನಗರದ ಆಧಾರ್ ಸೇವಾ ಕೇಂದ್ರದಿಂದ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಇದರೊಂದಿಗೆ  ಎನ್‌ಆರ್‌ಐಗಳು ಆನ್‌ಲೈನ್ ಸೌಲಭ್ಯಗಳನ್ನು ಬಳಸಿಕೊಂಡು ಆಧಾರ್ ಕಾರ್ಡ್‌ನಲ್ಲಿ ಅಪ್‌ಡೇಟ್ ಕೂಡ ಮಾಡಬಹುದಾಗಿದೆ. ಆದಾಗ್ಯೂ, ಮಾನ್ಯ ಪಾಸ್ಪೋರ್ಟ್ ಹೊಂದಿರುವ ಎನ್‌ಆರ್‌ಐಗಳು ಮಾತ್ರ ಮಾತ್ರ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಮತ್ತೊಂದೆಡೆ, ಸಂಗಾತಿಯು ಎನ್‌ಆರ್‌ಐ ಆಗಿದ್ದರೆ, ಅವನ/ಅವಳ ಪಾಸ್‌ಪೋರ್ಟ್ ಮಾಡಲು ದಾಖಲೆಯಾಗಿ ಭಾರತೀಯ ಪಾಸ್‌ಪೋರ್ಟ್ ಹೊಂದಿರುವುದು ಕಡ್ಡಾಯವಾಗಿದೆ.


ಇದನ್ನೂ ಓದಿ- ಈ ಕೋಟಾದ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೀಟ್ ಉಚಿತ! ಆದ್ರೆ ಇಲ್ಲಿ ಮಾತ್ರ ಅನ್ವಯ


ಎನ್‌ಆರ್‌ಐಗಳು ಆಧಾರ್ ಕಾರ್ಡ್ ಪಡೆಯಲು ಇರುವ ನಿಯಮಗಳೇನು?
* ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪ್ರಕಾರ, ದೀರ್ಘಾವಧಿಯ ವೀಸಾ (LTV) ದಾಖಲೆ ಹೊಂದಿರುವವರು ಸಹ ಆಧಾರ್ ಅನ್ನು ಪಡೆಯಬಹುದು. ಅವರು ಅರ್ಜಿ ಸಲ್ಲಿಸಿದ ದಿನಾಂಕದಿಂದ 182 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಭಾರತದಲ್ಲಿ ಉಳಿದುಕೊಂಡಿದ್ದರೆ ಈ ಸೌಲಭ್ಯ ಪಡೆಯಬಹುದಾಗಿದೆ. 
* ಇದಲ್ಲದೆ, ಅನಿವಾಸಿ ಭಾರತೀಯರು ಅಂದರೆ ಭಾರತದಲ್ಲಿ ಮಾಡಲಾದ ಆಧಾರ್ ಕಾರ್ಡ್ ಪಡೆಯಲು ಬಯಸುವ ಸಾಗರೋತ್ತರ ಭಾರತೀಯರು ಭಾರತದ ಮಾನ್ಯವಾದ ಪಾಸ್‌ಪೋರ್ಟ್ ಹೊಂದಿರಬೇಕು. ಈ ಪಾಸ್‌ಪೋರ್ಟ್ ಅನ್ನು ವಿಳಾಸ ಪುರಾವೆಯಾಗಿ ಬಳಸಬಹುದು. 
* ಇದರೊಂದಿಗೆ, ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ ಆಧಾರ್ ಕಾರ್ಡ್ ಪಡೆಯಲು, ನೀವು ಭಾರತೀಯ ಸಂಖ್ಯೆಯನ್ನು ಹೊಂದಿರಬೇಕು. ಇದರೊಂದಿಗೆ, ನಿಮಗೆ ಇಮೇಲ್ ಐಡಿ ಕೂಡ ಅಗತ್ಯವಿರುತ್ತದೆ.


ಇದನ್ನೂ ಓದಿ- ಆ ನಗುವನ್ನೇ ಕಸಿಯಿತು ಅದೊಂದು ವಿಮಾನ ದುರಂತ! NRI ತಾಯಿ-ಮಗಳ ಕರುಣಾಜನಕ ಕಥೆ


ಎನ್‌ಆರ್‌ಐಗಳು ಆಧಾರ್ ಕಾರ್ಡ್ ಪಡೆಯುವ ಸುಲಭ ಪ್ರಕ್ರಿಯೆ:
ಅನಿವಾಸಿ ಭಾರತೀಯರು- ಎನ್‌ಆರ್‌ಐಗಳು ಭಾರತದ ಯಾವುದೇ ನಗರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮೂಲಕ ಸುಲಭವಾಗಿ ಆಧಾರ್ ಕಾರ್ಡ್ ಅನ್ನು ಪಡೆಯಬಹುದು. ಇದಕ್ಕಾಗಿ ಕೆಳಗಿನ ಹಂತಗಳನ್ನು ಅನುಸರಿಸಿ...
>> ಆಧಾರ್ ಸೇವಾ ಕೇಂದ್ರದಲ್ಲಿ ಮೊದಲು ಎನ್‌ಆರ್‌ಐಗೆ ಆಧಾರ್ ಫಾರ್ಮ್ ಎಂಬ ಫಾರ್ಮ್  ಪಡೆದು ಅದನ್ನು ಭರ್ತಿ ಮಾಡಿ. ಗಮನಾರ್ಹವಾಗಿ, ಈ ಫಾರ್ಮ್ ಸಾಮಾನ್ಯ ಆಧಾರ್ ಫಾರ್ಮ್ ಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. 
>> ಆಧಾರ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವಾಗ ಇದರೊಂದಿಗೆ, ನಿಮ್ಮ ಮಾನ್ಯವಾದ ಭಾರತೀಯ ಪಾಸ್‌ಪೋರ್ಟ್ ಅನ್ನು ಸಹ ನೀವು ಲಗತ್ತಿಸಬೇಕಾಗುತ್ತದೆ.
>> ಈ ಫಾರ್ಮ್‌ನಲ್ಲಿ ಕೋರಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ನೀವು ನಿಮ್ಮ ಇ-ಮೇಲ್ ಐಡಿಯನ್ನು ಭರ್ತಿ ಮಾಡಬೇಕಾಗುತ್ತದೆ.
>> ನಿಮ್ಮ ಐಡಿ ಪುರಾವೆಯಾಗಿ ಭಾರತೀಯ ಪಾಸ್‌ಪೋರ್ಟ್ ಪ್ರತಿಯನ್ನು ಲಗತ್ತಿಸಿ. 
>> ಬಳಿಕ ನೀವು ಆಧಾರ್ ಕೇಂದ್ರದಲ್ಲಿ ಬಯೋಮೆಟ್ರಿಕ್ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.
>> ಈ ಎಲ್ಲಾ ಹಂತಗಳು ಪೂರ್ಣಗೊಂಡ ಬಳಿಕ ನೀವು ಆಧಾರ್ ಕೇಂದ್ರದಲ್ಲಿ 14 ಸಂಖ್ಯೆಗಳ ದಾಖಲಾತಿ ಐಡಿಯನ್ನು ಪಡೆಯುತ್ತೀರಿ.
>> ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಆಧಾರ್ ಕಾರ್ಡ್ ನಿಮ್ಮ ಮನೆ ಬಾಗಿಲಿಗೆ ಬರಲಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.