ಅನಿವಾಸಿ ಭಾರತೀಯರಿಗೆ ಪ್ರಾಕ್ಸಿ ಮತದಾನದ ಸೌಲಭ್ಯ ಒದಗಿಸುವ ಯಾವುದೇ ಪ್ರಸ್ತಾವನೆ ಸರಕಾರದ ಪರಿಶೀಲನೆಯಲ್ಲಿಲ್ಲ ಎಂದು ಲೋಕಸಭೆಗೆ ಮಾಹಿತಿ ನೀಡಲಾಗಿದೆ. ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಪ್ರಾಕ್ಸಿ ಮತದಾನದ ಸೌಲಭ್ಯವನ್ನು  ಒದಗಿಸಲು ಸರ್ಕಾರ ಪರಿಗಣಿಸುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಕಿರಣ್ ರಿಜಿಜು ಲಿಖಿತ ಉತ್ತರದಲ್ಲಿ "ಅಂತಹ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ" ಎಂದು ಹೇಳಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Indians renouncing citizenship: ಪೌರತ್ವ ತ್ಯಜಿಸುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ: ಕೇಂದ್ರದಿಂದ ಅಧಿಕೃತ ಮಾಹಿತಿ


ಆಗಸ್ಟ್ 2018 ರಲ್ಲಿ, ಹಿಂದಿನ ಲೋಕಸಭೆಯು ಅರ್ಹ ಸಾಗರೋತ್ತರ ಭಾರತೀಯರಿಗೆ ಪ್ರಾಕ್ಸಿ ಮತದಾನದ ಹಕ್ಕುಗಳನ್ನು ಅನುಮತಿಸುವ ಮಸೂದೆಯನ್ನು ಅಂಗೀಕರಿಸಿತ್ತು. ಆದರೆ ರಾಜ್ಯಸಭೆಯಲ್ಲಿ ಮಸೂದೆಯನ್ನು ತರಲು ಸಾಧ್ಯವಾಗಲಿಲ್ಲ.


2020 ರಲ್ಲಿ ಚುನಾವಣಾ ಆಯೋಗವು ಕಾನೂನು ಸಚಿವಾಲಯಕ್ಕೆ ಎಲೆಕ್ಟ್ರಾನಿಕ್ ಟ್ರಾನ್ಸ್ಮಿಟೆಡ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಮ್ (ಇಟಿಪಿಬಿಎಸ್) ಸೌಲಭ್ಯವನ್ನು ವಿಸ್ತರಿಸಲು ಪ್ರಸ್ತಾಪಿಸಿತ್ತು. ಇದುವರೆಗೆ ಇದು  ಸೇವಾ ಮತದಾರರಿಗೆ ಮತ್ತು ಅರ್ಹ ಸಾಗರೋತ್ತರ ಭಾರತೀಯ ಮತದಾರರಿಗೆ ಮಾತ್ರ ಲಭ್ಯವಿತ್ತು. ಅದಕ್ಕೆ ಚುನಾವಣಾ ನಿಯಮಗಳಲ್ಲಿ ಬದಲಾವಣೆ ತರಬೇಕು. ಆದರೆ ಸರಕಾರ ಇದುವರೆಗೆ ಈ ಬಗ್ಗೆ ಗಮನಹರಿಸಿಲ್ಲ.


ವಿದೇಶದಲ್ಲಿರುವ ಭಾರತೀಯ ವಲಸಿಗರಿಂದ ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡಲು ಅನುಕೂಲವಾಗುವಂತೆ ಹಲವಾರು ಪ್ರಾತಿನಿಧ್ಯಗಳನ್ನು ಸ್ವೀಕರಿಸುತ್ತಿದೆ ಎಂದು EC ಸರ್ಕಾರಕ್ಕೆ ತಿಳಿಸಿತ್ತು. ಏಕೆಂದರೆ ಅಂತಹ ಸಾಗರೋತ್ತರ ಮತದಾರರು ತಮ್ಮ ಮತದಾನದ ಪ್ರದೇಶದಲ್ಲಿ ಈ ಉದ್ದೇಶಕ್ಕಾಗಿ ಭಾರತಕ್ಕೆ ಪ್ರಯಾಣಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ದುಬಾರಿ ವ್ಯವಹಾರ ಮತ್ತು ಉದ್ಯೋಗ, ಶಿಕ್ಷಣ ಅಥವಾ ಇತರ ಕಾರಣದಿಂದ ಅವರು ತಮ್ಮ ನಿವಾಸದ ದೇಶವನ್ನು ತೊರೆಯಲು ಸಾಧ್ಯವಿಲ್ಲ.


ಇದನ್ನೂ ಓದಿ: NRIಗಳು ಫಾರ್ಮ್ 10Fನ್ನು ಸಲ್ಲಿಕೆ ಮಾಡಲು ಗಡುವು ವಿಸ್ತರಿಸಿದ CBDT


ಇದೀಗ ಸಾಗರೋತ್ತರ ಭಾರತೀಯರು ಮತದಾರರಾಗಿ ನೋಂದಾಯಿಸಿಕೊಳ್ಳಬೇಕು. ಭಾರತಕ್ಕೆ ಬರಬೇಕು. ಬಳಿಕ ವಿದೇಶಕ್ಕೆ ಹೋದಾಗ ಅವರಿಗೆ ನೀಡಿದ ಮೂಲ ಪಾಸ್‌ಪೋರ್ಟ್‌ನೊಂದಿಗೆ ಅವರ ಕ್ಷೇತ್ರಕ್ಕೆ ಹೋಗಿ ಮತ ಚಲಾಯಿಸಬೇಕು ಎಂದು ಕೇಂದ್ರ ಹೇಳಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ