ಇತ್ತೀಚಿನ ದಿನಗಳಲ್ಲಿ ಪೌರತ್ವ ತ್ಯಜಿಸುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರವು ಕೆಲ ವರದಿಯನ್ನು ಬಹಿರಂಗಪಡಿಸಿದೆ. ಪೌರತ್ವ ತ್ಯಜಿಸುತ್ತಿರುವ ಭಾರತೀಯರ ಸಂಖ್ಯೆ ಕಳೆದ ಕೆಲವು ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿವೆ ಎಂದು ಅಧಿಕೃತ ಮಾಹಿತಿ ಲಭ್ಯವಾಗಿದೆ.
2017 ರಲ್ಲಿ 1,33,049 ಭಾರತೀಯರು ಪೌರತ್ವ ತ್ಯಜಿಸಿದ್ದರು. ಇದಾದ ಐದು ವರ್ಷಗಳ ಬಳಿಕ ಈ ವರ್ಷ ಅಕ್ಟೋಬರ್ 31 ರವರೆಗೆ ಸುಮಾರಿ 1,83,741 ಮಂದಿ ಪೌರತ್ವ ತ್ಯಜಿಸಿದ್ದಾರೆ.
ಇದನ್ನೂ ಓದಿ: Abdul Haq: ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಿದ ಆರೋಪ: ಪಾಕ್ ಮೌಲಾನಗಳಿಗೆ ಬ್ರಿಟನ್ ನಿರ್ಬಂಧ
ಲೋಕಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಪೌರತ್ವ ತ್ಯಜಿಸುತ್ತಿರುವ ಜನರ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡಿದ್ದಾರೆ.
“2015 ರಲ್ಲಿ ಭಾರತೀಯ ಪೌರತ್ವವನ್ನು ತ್ಯಜಿಸಿದ ಭಾರತೀಯರ ಸಂಖ್ಯೆ 1,31,489 ಇತ್ತು. ಆ ಸಂಖ್ಯೆ 2016 ರ ವೇಳೆಗೆ 1,41,603 ಆಯಿತು. ಆ ಬಳಿಕ 2017 ರಲ್ಲಿ 1,33,049, 2018 ರಲ್ಲಿ 1,34,561, 2019 ರಲ್ಲಿ 1,44,017, 2020 ರಲ್ಲಿ 85,256 ಮತ್ತು 2021 ರಲ್ಲಿ 1,63,370 ಆಗಿದೆ ಎಂದು ತಿಳಿಸಿದರು.
ಇವಿಷ್ಟೇ ಅಲ್ಲದೆ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವನ್ನ ಹೊರತುಪಡಿಸಿದರೆ ಕಳೆದ ಕೆಲವು ವರ್ಷಗಳಿಂದ ಭಾರತೀಯ ಪೌರತ್ವವನ್ನು ಪಡೆಯುತ್ತಿರುವ ವಿದೇಶಿ ಪ್ರಜೆಗಳ ಸಂಖ್ಯೆಯ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಹೊರತುಪಡಿಸಿ 2015 ರಲ್ಲಿ 93, 2016 ರಲ್ಲಿ 153, 2017ರಲ್ಲಿ 175, 2018 ರಲ್ಲಿ 129, 2019ರಲ್ಲಿ 13, 2020 ರಲ್ಲಿ 27, 2021ರಲ್ಲಿ 42 ಮತ್ತು 2022 ರಲ್ಲಿ 60 ಮಂದಿ ಪೌರತ್ವ ಪಡೆದಿರುವುದಾಗಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: Global Investors Meet: NRI ಸಮಾವೇಶ ಹಿನ್ನೆಲೆ ಇಂದೋರ್ ಗೆ 6 ವಿಶೇಷ ವಿಮಾನಗಳ ವ್ಯವಸ್ಥೆ
ಭಾರತೀಯರು ಪೌರತ್ವ ತ್ಯಜಿಸುತ್ತಿರುವುದಕ್ಕೆ ಕಾರಣ ಏನು ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಉದ್ಯೋಗ, ವಿದೇಶಗಳ ಮೇಲಿನ ಒಲವು ಪ್ರಮುಖ ಕಾರಣ ಎಂಬಂತೆ ತೋರುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.