Chilkoor Balaji Temple/Visa Temple: ಹೆಚ್ಚಿನ ಜನರು ದೇವಾಲಯಗಳು, ಮಠಗಳಂತಹ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸ್ಥಳಗಳಿಗೆ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವ ಭರವಸೆಯೊಂದಿಗೆ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಮನಸ್ಸಿನಲ್ಲಿ ಅಂದುಕೊಂಡಂತಹ ಬೇಡಿಕೆಗಳನ್ನು ದೇವರ ಮುಂದಿಡುತ್ತಾರೆ.


COMMERCIAL BREAK
SCROLL TO CONTINUE READING

ಇಂದು ನಾವು ನಿಮಗೆ ಹೇಳಲು ಹೊರಟಿರುವುದು ದೇಶದ ಒಂದು ವಿಶೇಷ ದೇವಾಲಯದ ಬಗ್ಗೆ. ಇಲ್ಲಿಗೆ ಆಗಮಿಸುವ ಅನೇಕ ಜನರು, ತಮ್ಮ ವೀಸಾ ಸಮಸ್ಯೆ ಪರಿಹಾರಕ್ಕಾಗಿ ಪ್ರಾರ್ಥಿಸಿಕೊಂಡು ಹೋಗುತ್ತಾರೆ. ಇಲ್ಲಿ ಬೇಡಿಕೊಂಡ ಯಾವೊಬ್ಬ ಭಕ್ತನೂ ಬರಿಗೈಯಲ್ಲಿ ಹೋಗುವುದಿಲ್ಲ. ಇಷ್ಟಾರ್ಥಗಳನ್ನು ಈಡೇರಿಸಿಕೊಂಡೇ ಹೋಗುತ್ತಾನೆ.


ಇದನ್ನೂ ಓದಿ:ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಬಿಡದೆ ಸುರಿಯಲಿದೆ ಭಾರೀ ಮಳೆ


ಯುಕೆ, ಅಮೆರಿಕ ಅಥವಾ ಕೆನಡಾ ಆಗಿರಲಿ, ಅಲ್ಲಿಗೆ ಪ್ರಯಾಣ ಬೆಳೆಸಬೇಕೆಂದರೆ ಪಾಸ್ಪೋರ್ಟ್, ವೀಸಾ ಅಗತ್ಯ, ಇದಕ್ಕೆ ಸಾಕಷ್ಟು ದಾಖಲೆಗಳನ್ನು ಪೂರ್ಣಗೊಳಿಸಬೇಕು, ಇದರೊಂದಿಗೆ ತುಂಬಾ ಸಮಯ ಕಾಯಬೇಕು. ಆದರೆ ಹಲವು ಬಾರಿ ಕಾದರೂ ವೀಸಾ ತಿರಸ್ಕೃತವಾಗುತ್ತದೆ. ಇದರಿಂದ ಅನೇಕ ಜನರು ನೊಂದುಕೊಳ್ಳುತ್ತಾರೆ, ಹೀಗಿರುವಾಗ ಆ ಜನರಿಗೆ ಉಳಿದಿರುವ ಏಕೈಕ ಮಾರ್ಗವೆಂದರೆ ಈ ದೇವರ ಗುಡಿ.


ಹೈದರಾಬಾದ್‌ನ ಅದ್ಭುತ ದೇವಾಲಯ:


ತೆಲಂಗಾಣ ರಾಜ್ಯದ ಹೈದರಾಬಾದ್‌’ನಲ್ಲಿರುವ ಚಿಲ್ಕೂರು ಬಾಲಾಜಿ ಪ್ರಸಿದ್ಧ ದೇವಾಲಯ 500 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಸ್ಥಾನವನ್ನು ವೀಸಾ ಟೆಂಪಲ್ (ಹೈದರಾಬಾದ್ ವೀಸಾ ಟೆಂಪಲ್) ಎಂದೂ ಕರೆಯುತ್ತಾರೆ. ಅದಕ್ಕೆ ಕಾರಣ ವೀಸಾ ಸಿಗುವ ಆಸೆಯಿಂದ ಜನರು ಈ ದೇವಸ್ಥಾನಕ್ಕೆ ಆಗಮಿಸಿ, ದೇವರ ಮುಂದೆ ಬೇಡಿಕೆಯನ್ನಿಟ್ಟು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಹೋಗುತ್ತಾರೆ.


ಮೊದಲು ದಕ್ಷಿಣ ಭಾರತದ ಜನ ಮಾತ್ರ ಇಲ್ಲಿಗೆ ಬರುತ್ತಿದ್ದರು. ಆದರೆ ಇದೀಗ ಅಮೆರಿಕದ ವೀಸಾ ಪಡೆಯುವ ಆಸೆಯಿಂದ ದೇಶದೆಲ್ಲೆಡೆಯಿಂದ ಜನರು ಇಲ್ಲಿಗೆ ಬರಲಾರಂಭಿಸಿದ್ದಾರೆ. ಕೆನಡಾ ಮತ್ತು ಯುಕೆ ಸೇರಿದಂತೆ ಇತರ ಯುರೋಪಿಯನ್ ರಾಷ್ಟ್ರಗಳಿಗೆ ವೀಸಾ ಪಡೆಯಲು ಬಯಸುವ ಭಕ್ತರು ಸಹ ಇಲ್ಲಿಗೆ ಆಗಮಿಸುತ್ತಿದ್ದಾರೆ.


ಇದನ್ನೂ ಓದಿ:  ಮದುವೆಯಾದ ಏಳೇ ತಿಂಗಳಿಗೆ ಮತ್ತೆ ಮದುವೆಯಾದ ಸ್ಟಾರ್ ಕ್ರಿಕೆಟಿಗ! ಫೋಟೋ ವೈರಲ್


ಮಾಧ್ಯಮ ವರದಿಗಳ ಪ್ರಕಾರ, ವೀಸಾ ಪಡೆಯುವ ಬಯಕೆಯೊಂದಿಗೆ ಇಲ್ಲಿಗೆ ಬರುವ ಭಕ್ತರು, ಭಗವಂತನಿಗೆ 11 ಪ್ರದಕ್ಷಿಣೆಗಳನ್ನು ಹಾಕುತ್ತಾರೆ. ಪರಿಕ್ರಮದ ಸಮಯದಲ್ಲಿ ಭಕ್ತರು ತಮ್ಮ ಬೇಡಿಕೆಯನ್ನು ದೇವರ ಮುಂದಿಡುತ್ತಾರೆ. ಇದಾದ ನಂತರ, ಪೂಜೆಯ ಸಮಯದಲ್ಲಿ ತನ್ನ ಪಾಸ್‌ಪೋರ್ಟ್ ಅನ್ನು ದೇವರ ಮುಂದಿಟ್ಟು ಪೂಜೆ ಸಲ್ಲಿಸುತ್ತಾರೆ. ಅವರ ಇಷ್ಟಾರ್ಥಗಳು ನೆರವೇರಿದರೆ ಭಕ್ತರು ದೇವಸ್ಥಾನಕ್ಕೆ ಹಿಂತಿರುಗಿ 108 ಪ್ರದಕ್ಷಿಣೆ ಹಾಕಬೇಕು. ಈ ರೀತಿಯಲ್ಲಿ ಅವರು ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಇನ್ನು ಹೈದರಾಬಾದ್‌’ನ ಈ ದೇವಾಲಯವನ್ನು ಹೊರತುಪಡಿಸಿ, ಭಾರತದಲ್ಲಿ ಇಂತಹ ಅನೇಕ ದೇವಾಲಯಗಳಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.