NRI: ಭಾರತದ ಬೆಳವಣಿಗೆಯಲ್ಲಿ ಪಾಲುದಾರರಾಗಲು ವಿದೇಶದಲ್ಲಿರುವ ಭಾರತೀಯರಿಗೆ ಕರೆ ನೀಡಿದ ನಿರ್ಮಲಾ ಸೀತಾರಾಮನ್
ಸ್ಯಾನ್ ಫ್ರಾನ್ಸಿಸ್ಕೊನ ಕಣಿವೆ ಪ್ರದೇಶದಲ್ಲಿರುವ ಸಿಲಿಕಾನ್ ವ್ಯಾಲಿಯಲ್ಲಿರುವ ಭಾರತೀಯ ಸಮುದಾಯದ ಜನರನ್ನುದ್ದೇಶಿಸಿ ಮಾತನಾಡಿರುವ ನಿರ್ಮಲಾ ಸೀತಾರಾಮನ್, ನಾವಿನ್ಯತೆ ಹಾಗೂ ಸಂಶೋಧನೆಗೆ ಭಾರತೀಯರು ನೀಡಿದ ಕೊಡುಗೆಯನ್ನು ಎತ್ತಿಹಿಡಿದಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೊ: ಭಾರತ ಮುಂದಿನ 25 ವರ್ಷಗಳಲ್ಲಿ ತನ್ನ 100ನೇ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸುತ್ತಿದ್ದು, ಭಾರತೀಯ ಜಾಗತಿಕ ಸಮುದಾಯದ ಜನರು ಭಾರತದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋನ ಸಿಲಿಕಾನ್ ಸಿಟಿಯಲ್ಲಿ ಭಾರತೀಯ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಗಿರುವ ಅವರು, ನಾವೀನ್ಯತೆ ಮತ್ತು ಸಂಶೋಧನೆಯಲ್ಲಿ ಭಾರತೀಯ ಮೂಲದ ಜನರ ಕೊಡುಗೆಗಳನ್ನು ಅವರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ-FedEX: ಫೆಡೆಕ್ಸ್ ಕಂಪನಿ ಸಿಇಒ ಸಂಜಾತ ರಾಜ್ ಸುಬ್ರಹ್ಮಣ್ಯಂ: ಭಾರತೀಯರ ಹವಾ ಶುರು
ಈ ಕುರಿತು ಟ್ವೀಟ್ ಮಾಡಿರುವ ಆರ್ಥಿಕ ಸಚಿವಾಲಯ 'FM Smt.@nsitharaman, ಅಮೆರಿಕಾದಲ್ಲಿ ನಾವಿನ್ಯತೆ ಮತ್ತು ಸಂಶೋಧನೆಯ ಕಾರ್ಯದಲ್ಲಿ ತೊಡಗಿರುವ ಭಾರತೀಯ ಸಮುದಾಯದ ಜನರು ನೀಡಿರುವ ಅಮೂಲಾಗ್ರ ಕೊಡುಗೆಗಳನ್ನು ಉಲ್ಲೇಖಿಸಿದ್ದಾರೆ. ಈ ಸಂದರ್ಭದಲ್ಲಿ ಅಮೃತ್ ಕಾಲ್ ಸಮಯದಲ್ಲಿ ಭಾರತದ ಬೆಳವಣಿಗೆಯಲ್ಲಿ ಪಾಲುದಾರರಾಗಲು ಭಾರತೀಯ ಸಮುದಾಯದವರನ್ನು ಉತ್ತೇಜಿಸಲು ಭಾರತ ಸರ್ಕಾರ ಕೈಗೊಂಡ ರಚನಾತ್ಮಕ ಸುಧಾರಣೆಗಳ ಬಗ್ಗೆ ವಿತ್ತ ಸಚಿವರು ಮಾತನಾಡಿದ್ದಾರೆ.
ಇದನ್ನೂ ಓದಿ-ವಿದ್ಯಾ ವೋಕ್ಸ್ : ʼಲೆಟ್ ಮಿ ಲವ್ ಯೂʼ ಗಾಯಕಿ ಬಗ್ಗೆ ಇಲ್ಲಿದೆ ಮಾಹಿತಿ
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 75 ವರ್ಷಗಳ ನಂತರದ ಮತ್ತು 100ನೇ ವರ್ಷದ ನಡುವಿನ ಕಾಲಾವಧಿಯನ್ನು ಅಮೃತ್ ಕಾಲ್ ಎಂದು ಕರೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು IMF-WB Spring Meetings 2022 ಭಾಗವಹಿಸಲು ಅಮೇರಿಕಾಕ್ಕೆ ತೆರಳಲಿದ್ದಾರೆ.
ಇದನ್ನೂ ನೋಡಿ -
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.