ವಿದ್ಯಾ ವೋಕ್ಸ್‌ : ʼಲೆಟ್‌ ಮಿ ಲವ್‌ ಯೂʼ ಗಾಯಕಿ ಬಗ್ಗೆ ಇಲ್ಲಿದೆ ಮಾಹಿತಿ

ವಿದ್ಯಾ ಅಯ್ಯರ್ ಸೆಪ್ಟೆಂಬರ್ 26, 1990ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಎಂಟನೇ ವಯಸ್ಸಿನಲ್ಲಿ ತಮ್ಮ ಕುಟುಂಬದೊಂದಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಕ್ಕೆ ವಲಸೆ ಬಂದರು.

Written by - Bhavishya Shetty | Last Updated : Apr 24, 2022, 12:58 PM IST
  • ʼಲೆಟ್‌ ಮಿ ಲವ್‌ ಯೂʼ ಎನ್ನುತ್ತಾ ಜನಮನ ಗೆದ್ದ ಗಾಯಕಿ
  • ತಮಿಳುಮಾಡು ಮೂಲದ ವಿದ್ಯಾ ವೋಕ್ಸ್‌ ಚಿರಪರಿಚಿತ
  • ವಿದ್ಯಾ ವೋಕ್ಸ್‌ ನಿಜನಾಮ ವಿದ್ಯಾ ಅಯ್ಯರ್
ವಿದ್ಯಾ ವೋಕ್ಸ್‌ : ʼಲೆಟ್‌ ಮಿ ಲವ್‌ ಯೂʼ ಗಾಯಕಿ ಬಗ್ಗೆ ಇಲ್ಲಿದೆ ಮಾಹಿತಿ  title=
Vidya Iyer

ವಿದ್ಯಾ ವೋಕ್ಸ್‌ ಎಂದರೆ ಯಾರಿಗೆ ಗೊತ್ತಾಗಲ್ಲ ಹೇಳಿ. ಇಂದಿನ ಯುವಜನತೆಯ ಫೇವರೇಟ್‌ ಸಿಂಗರ್‌ ಇವರು. ಈಕೆಯ ಇಂಡೋ-ಅಮೇರಿಕನ್‌ ಶೈಲಿಯ ಹಾಡುಗಳು ಸಿಕ್ಕಾಪಟ್ಟೆ ಫೇಮಸ್‌ ಆಗಿವೆ. ಭಾರತೀಯ ಹಾಡುಗಳನ್ನು ಇಂಗ್ಲೀಷ್‌ ಹಾಡುಗಳೊಂದಿಗೆ ರಿಮಿಕ್ಸ್‌ ಮಾಡುವ ಮೂಲಕ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದರು ವಿದ್ಯಾ. 

ಇದನ್ನು ಓದಿ: ಜಾನಕಿ ಈಶ್ವರ್‌ ಕಂಠಕ್ಕೆ ಮನಸೋತ ʼದಿ ವಾಯ್ಸ್ ಆಸ್ಟ್ರೇಲಿಯಾ ʼ

ವಿದ್ಯಾ ವೋಕ್ಸ್‌ ನಿಜನಾಮ ವಿದ್ಯಾ ಅಯ್ಯರ್. ಯೂಟ್ಯೂಬ್‌ನಲ್ಲಿ ವಿದ್ಯಾ ವೋಕ್ಸ್‌ ಪೇಜ್‌ಗೆ 7.53 ಮಿಲಿಯನ್‌ ಫಾಲೋವರ್ಸ್‌ ಇದ್ದಾರೆ. ಏಪ್ರಿಲ್ 2015ರಲ್ಲಿ ಚಾನೆಲ್ ಪ್ರಾರಂಭಿಸಿದ ವಿದ್ಯಾ ಅವರ ವಿಡಿಯೋಗಳು ಬರೋಬ್ಬರಿ 906 ಮಿಲಿಯನ್ ವೀಕ್ಷಣೆಗಳನ್ನು ಪಡೆದಿವೆ. 

ವಿದ್ಯಾ ಅಯ್ಯರ್ ಸೆಪ್ಟೆಂಬರ್ 26, 1990ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಎಂಟನೇ ವಯಸ್ಸಿನಲ್ಲಿ ತಮ್ಮ ಕುಟುಂಬದೊಂದಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಕ್ಕೆ ವಲಸೆ ಬಂದರು. ಇನ್ನು ಶಾಸ್ತ್ರೀಯ ಸಂಗೀತ, ಎಲೆಕ್ಟ್ರಾನಿಕ್‌ ಡ್ಯಾನ್ಸ್‌ ಮ್ಯೂಸಿಕ್‌, ಕ್ಲಾಸಿಕಲ್‌ ರ್ಯಾಪರ್‌ ಸಂಗೀತವನ್ನು ಇವರು ಕಲಿತಿದ್ದಾರೆ. ತನ್ನ 5ನೇ ವಯಸ್ಸಿನಿಂದ ಕರ್ನಾಟಕ ಸಂಗೀತವನ್ನು ಕಲಿತಿದ್ದಾರೆ. 

ಇನ್ನು ತನ್ನ ಅಜ್ಜಿಯಿಂದ ಸ್ಪೂರ್ತಿ ಪಡೆದ ವಿದ್ಯಾ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಮುಂದುವರಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿರುವಾಗ ಭಾರತೀಯ ವಿದ್ಯಾರ್ಥಿ ಸಂಘವನ್ನು ಸೇರಿಕೊಂಡ ಅವರು ಜಾನಪದ ನೃತ್ಯ ತಂಡಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನ ಮತ್ತು ಬಯೋಮೆಡಿಕಲ್ ವಿಜ್ಞಾನವನ್ನು ಅಧ್ಯಯನ ಮಾಡಿದ್ದಾರೆ. ಜೊತೆಗೆ ಜೈವಿಕ ವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಸಹ ಪಡೆದಿದ್ದಾರೆ. ಸಂಗೀತ ಅಭ್ಯಾಸಕ್ಕೆಂದು ಎರಡು ವರ್ಷಗಳ ಕಾಲ ಭಾರತದಲ್ಲಿ ನೆಲೆಸಿದ್ದರು ವಿದ್ಯಾ. 

ವಿದ್ಯಾ ತನ್ನ ಸಹೋದರಿ ವಂದನಾ ಅಯ್ಯರ್ ಮತ್ತು ಗೆಳೆಯ ಶಂಕರ್ ಟಕ್ಕರ್ ಅವರೊಂದಿಗೆ ಸೇರಿಕೊಂಡು ಸಂಗೀತ ರಚಿಸಲು ಪ್ರಾರಂಭಿಸಿದರು. ಶಂಕರ್ ಟಕ್ಕರ್ ಆಯೋಜಿಸಿದ ಬ್ಯಾಂಡ್‌ನಲ್ಲಿ ವಿದ್ಯಾ ಅಯ್ಯರ್ ನಿಯಮಿತವಾಗಿ ಹಾಡುತ್ತಾರೆ. 

ಇನ್ನು ವಿದ್ಯಾ ವೈಟ್ ಹೌಸ್, ನ್ಯಾಷನಲ್ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್ (ಭಾರತ) ಮತ್ತು ವೆಬ್‌ಸ್ಟರ್ ಹಾಲ್ ಸೇರಿದಂತೆ ಪ್ರಪಂಚದಾದ್ಯಂತ ವಿವಿಧ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ. ರಿಯೂನಿಯನ್ ಐಲ್ಯಾಂಡ್‌ನ ಫೆಸ್ಟಿವಲ್ ಡೆಸ್ ಆರ್ಟೆಸ್, ಐಎನ್‌ಕೆ ವುಮೆನ್, ಸುರಿನಾಮ್, ದುಬೈ ಮತ್ತು ನೆದರ್‌ಲ್ಯಾಂಡ್‌ನ ಫೇಮಸ್‌ ಕನ್ಸರ್ಟ್‌ಗಳಲ್ಲಿ ಸಹ ಶೋ ನೀಡಿರುವ ಹೆಗ್ಗಳಿಕೆ ವಿದ್ಯಾಗಿದೆ. 

 

ವಿದ್ಯಾ ಅವರ ಅತ್ಯಂತ ಜನಪ್ರಿಯ ಮ್ಯಾಶಪ್ ʼಕ್ಲೋಸರ್ / ಕಬೀರಾʼ, ʼಚೈನ್‌ ಸ್ಮೋಕರ್ಸ್ ಮತ್ತು ಕಬೀರಾʼ 7 ತಿಂಗಳುಗಳಲ್ಲಿ 55 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತ್ತು. 

ಇದನ್ನು ಓದಿ: ಸೋಶಿಯಲ್‌ ಮೀಡಿಯಾ ಸೆನ್ಶೇಶನ್‌ ನಿಹಾರಿಕಾ ಕುರಿತು ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್‌

ಕೇರಳದ ಪ್ರಸಿದ್ಧ ಬೋಟ್‌ ಸಾಂಗ್‌ "ಕುಟ್ಟನಾದನ್ ಪುಂಜಾಯಿಲೆ" ಯನ್ನು ಶಂಕರ್ ಟಕ್ಕರ್ ಮತ್ತು ಅವರು ಬರೆದ ಇಂಗ್ಲಿಷ್ ಹಾಡಿನ ಜೊತೆಗೆ ಫ್ಯೂಷನ್ ಆಗಿ ಬಿಡುಗಡೆ ಮಾಡಲಾಗಿತ್ತು. ಇದನ್ನು ಕೇರಳದಲ್ಲಿ ಶ್ರೀನಿಧಿ ಮತ್ತು ಶ್ರೀದೇವಿ ಅವರ ಮೋಹಿನಿಯಾಟ್ಟಂ ನಾಟ್ಯದೊಂದಿದೆ ಚಿತ್ರೀಕರಿಸಲಾಗಿದೆ.

Trending News