ಮನೆ ಬಳಿ ಪಾರ್ಕ್‌ ಮಾಡಿದ್ದ ಕಾರಿನಲ್ಲಿ ಕುಳಿತಿದ್ದ ಎನ್‌ಆರ್‌ಐ ವ್ಯಕ್ತಿಯನ್ನು ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಅಮೆರಿಕಾದ ನ್ಯೂಯಾರ್ಕ್‌ನ ಸೌತ್‌ ಓಜೋನ್‌ ಪಾರ್ಕ್‌ ಏರಿಯಾದಲ್ಲಿ ನಡೆದಿದೆ. ತಮ್ಮ ಮನೆ ಸಮೀಪವೇ ಎಸ್‌ಯುವಿ ಜೀಪನ್ನು ಪಾರ್ಕ್‌ ಮಾಡಲಾಗಿತ್ತು. ಅದರಲ್ಲಿ ವ್ಯಕ್ತಿ ಕುಳಿತಿದ್ದರು. ಈ ಸಂದರ್ಭದಲ್ಲಿ ಘಟನೆ ನಡೆದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Birmingham explosion: ಬರ್ಮಿಂಗ್​​ಹ್ಯಾಮ್​ನಲ್ಲಿ ಭಾರೀ ಸ್ಫೋಟ


ಸತ್ನಾಮ್ ಸಿಂಗ್, ಹತ್ಯೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸೌತ್ ಓಝೋನ್ ಪಾರ್ಕ್ ವಲಯದಲ್ಲಿ ಕಳೆದ ಶನಿವಾರ ಮಧ್ಯಾಹ್ನ 3.30 ಗಂಟೆಗೆ ಘಟನೆ ನಡೆದಿದೆ. ಸತ್ನಾಮ್ ಸಿಂಗ್‌ ದೇಹದ ಮೇಲೆ ಗಾಯಗಳ ಗುರುತು ಇವೆ ಎಂದು ಅಲ್ಲಿನ ನ್ಯೂಯಾರ್ಕ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ. 


ಸ್ನೇಹಿತನಿಂದ ಖರೀದಿಸಿ ಜೀಪ್‌ನಲ್ಲಿ ಸತ್ನಾಮ್‌ ಕುಳಿತಿದ್ದರು. ಈ ಸಂದರ್ಭದಲ್ಲಿ ಬಂದೂಕುಧಾರಿಯೊಬ್ಬ ಬಂದು ಗುಂಡು ಹಾರಿಸಿದ್ದಾನೆ ಎಂದು ನ್ಯೂಯಾರ್ಕ್ ಡೈಲಿ ನ್ಯೂಸ್ ವರದಿ ಮಾಡಿದೆ.


ತಕ್ಷಣವೇ ಸತ್ನಾಮ್‌ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ ಪ್ರಯೋಜನವಾಗಿಲ್ಲ. ಅದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 


ಇದನ್ನೂ ಓದಿ: ತಿದ್ದುಪಡಿ ಮಾಡಿ ಹೊಸ ಪಠ್ಯಪುಸ್ತಕ ಮುದ್ರಿಸಲು ಶಿಕ್ಷಣ ಇಲಾಖೆ ತೀರ್ಮಾನ


ಕಳೆದ ಕೆಲ ದಿನಗಳ ಹಿಂದೆ ಮೇರಿಲ್ಯಾಂಡ್‌ನಲ್ಲಿ ಇದೇ ರೀತಿ ಭಾರತೀಯನಿಗೆ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ