Birmingham explosion: ಬರ್ಮಿಂಗ್​​ಹ್ಯಾಮ್​ನಲ್ಲಿ ಭಾರೀ ಸ್ಫೋಟ

ಇಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದಾಗಿ ಮನೆಯೊಂದು ಸಂಪೂರ್ಣವಾಗಿ ನಾಶವಾಗಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಆದರೆ ಈ ಸ್ಫೋಟದ ಕಾರಣ ಮಾತ್ರ ಏನೆಂದು ತಿಳಿದಿಲ್ಲ. 

Written by - Chetana Devarmani | Last Updated : Jun 27, 2022, 04:18 PM IST
  • ಬರ್ಮಿಂಗ್​​ಹ್ಯಾಮ್​ನಲ್ಲಿ ಭಾರೀ ಸ್ಫೋಟ
  • ಮನೆಯೊಂದು ಸಂಪೂರ್ಣವಾಗಿ ನಾಶ
  • ಭಾನುವಾರ ರಾತ್ರಿ ನಡೆದ ಘಟನೆ
Birmingham explosion: ಬರ್ಮಿಂಗ್​​ಹ್ಯಾಮ್​ನಲ್ಲಿ ಭಾರೀ ಸ್ಫೋಟ   title=
ಬರ್ಮಿಂಗ್​​ಹ್ಯಾಮ್

ಬರ್ಮಿಂಗ್​​ಹ್ಯಾಮ್: ಇಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದಾಗಿ ಮನೆಯೊಂದು ಸಂಪೂರ್ಣವಾಗಿ ನಾಶವಾಗಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಆದರೆ ಈ ಸ್ಫೋಟದ ಕಾರಣ ಮಾತ್ರ ಏನೆಂದು ತಿಳಿದಿಲ್ಲ. 

ಇದನ್ನೂ ಓದಿ: ಶಾರುಖ್ ಖಾನ್‌ ಜೊತೆಗಿನ ಲೈಂಗಿಕ ಸಂಬಂಧದ ವದಂತಿಯ ಬಗ್ಗೆ ಕರಣ್ ಜೋಹರ್ ಹೇಳಿದ್ದೇನು?

ಇಂಗ್ಲೆಂಡ್ ಮೂಲದ ಮಾಧ್ಯಮಗಳ ವರದಿಯ ಪ್ರಕಾರ, ಹತ್ತಿರದ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಸ್ಕೈ ನ್ಯೂಸ್ ಮತ್ತು ಗಾರ್ಡಿಯನ್ ಪ್ರಕಾರ, ಈ ಸ್ಫೋಟದಿಂದ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದರು ಮತ್ತು ನಾಲ್ವರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ.

 

 

"ಘಟನಾ ಸ್ಥಳದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಲು ನಮಗೆ ತುಂಬಾ ದುಃಖವಾಗಿದೆ" ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಅಗ್ನಿಶಾಮಕ ಸೇವೆ (ಡಬ್ಲ್ಯೂಎಂಎಫ್‌ಎಸ್) ಹೇಳಿದೆ.

ಭಾನುವಾರದಂದು ಸಂಭವಿಸಿದ ಕಿಂಗ್‌ಸ್ಟಾಂಡಿಂಗ್‌ನ ದುಲ್ವಿಚ್ ರಸ್ತೆಯಲ್ಲಿ ನಡೆದ ಸ್ಫೋಟದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಸುಮಾರು ಮೂರು ಮನೆಗಳಿಗೆ ಹಾನಿಯಾಗಿದೆ. ಗಾಯಾಳುಗಳ ಸಂಖ್ಯೆ ಮತ್ತು ತೀವ್ರತೆ ಸದ್ಯಕ್ಕೆ ತಿಳಿದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಇದನ್ನೂ ಓದಿ: ಸರ್ಜರಿ ಮಾಡಿಸಿಕೊಂಡ ನಂತರ ಹೃದಯಾಘಾತದಿಂದ ಸಾವನ್ನಪ್ಪಿದ ಈ ಸುಂದರಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ..

Trending News