NRI News: ಇಂಡೋ ಅಮೆರಿಕನ್ ಮಹಿಳೆ ನೀರಾ ಟಂಡನ್’ಗೆ ಅತ್ಯುನ್ನತ ಜವಾವ್ದಾರಿ ನೀಡಿದ ಬೈಡನ್ ಸರ್ಕಾರ!
Neera Tanden: ನೀರಾ ಟಂಡನ್ ನನ್ನ ದೇಶೀಯ ನೀತಿ ಕಾರ್ಯಸೂಚಿಯನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ಸಹಾಯ ಮಾಡಲಿದ್ದಾರೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ, ಆರ್ಥಿಕ ಚಲನಶೀಲತೆ ಮತ್ತು ಜನಾಂಗೀಯ ಸಮಾನತೆಯಿಂದ ಆರೋಗ್ಯ ರಕ್ಷಣೆ, ವಲಸೆ ಮತ್ತು ಶಿಕ್ಷಣದವರೆಗೆ ಕಾರ್ಯಸೂಚಿಯನ್ನು ನಿರ್ಮಿಸಲಿದ್ದಾರೆ.
Neera Tanden: ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಭಾರತೀಯ-ಅಮೆರಿಕನ್ ನೀರಾ ಟಂಡನ್ ಅವರನ್ನು ತಮ್ಮ ದೇಶೀಯ ನೀತಿ ಸಲಹೆಗಾರರನ್ನಾಗಿ ನೇಮಿಸಿದ್ದಾರೆ. ಟಂಡನ್, ಬೈಡನ್ ಅವರ ದೇಶೀಯ ನೀತಿ ಕಾರ್ಯಸೂಚಿಯನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ಸಹಾಯ ಮಾಡಲಿದ್ದಾರೆ. ಈ ಹಿಂದೆ ಬೈಡನ್ ಅವರ ದೇಶೀಯ ನೀತಿ ಸಲಹೆಗಾರರಾಗಿ ಸುಸಾನ್ ರೈಸ್ ಅವರಿದ್ದರು. ಇದೀಗ ಸ್ಥಾನವನ್ನು ನೀರಾ ಟಂಡನ್ ತುಂಬಲಿದ್ದಾರೆ.
ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಜೋ ಬೈಡನ್, “ನೀರಾ ಟಂಡನ್ ನನ್ನ ದೇಶೀಯ ನೀತಿ ಕಾರ್ಯಸೂಚಿಯನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ಸಹಾಯ ಮಾಡಲಿದ್ದಾರೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ, ಆರ್ಥಿಕ ಚಲನಶೀಲತೆ ಮತ್ತು ಜನಾಂಗೀಯ ಸಮಾನತೆಯಿಂದ ಆರೋಗ್ಯ ರಕ್ಷಣೆ, ವಲಸೆ ಮತ್ತು ಶಿಕ್ಷಣದವರೆಗೆ ಕಾರ್ಯಸೂಚಿಯನ್ನು ನಿರ್ಮಿಸಲಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: ನೀವಷ್ಟೇ ಅಲ್ಲ ನಾನೂ ಸಹ ದರ್ಶನ್ ಅವರ ಅಭಿಮಾನಿ : ಡಾ. ವೀರೇಂದ್ರ ಹೆಗ್ಗಡೆ
ಮಾತು ಮುಂದುವರೆಸಿದ ಬೈಡನ್, "ಶ್ವೇತಭವನದ ಮೂರು ಪ್ರಮುಖ ನೀತಿ ಮಂಡಳಿಗಳಲ್ಲಿ ಒಂದನ್ನು ಮುನ್ನಡೆಸುವ ಅಧಿಕಾರಿ ನೀರಾಗೆ ಲಭಿಸಿದೆ. ಇದು ಇತಿಹಾಸದಲ್ಲಿ ಮೊದಲ ಏಷ್ಯನ್-ಅಮೆರಿಕನ್ ವ್ಯಕ್ತಿಗೆ ಸಿಗುತ್ತಿರುವ ಗೌರವ” ಎಂದು ಹೇಳಿದ್ದಾರೆ. ನೀರಾ ಟಂಡನ್ ಪ್ರಸ್ತುತ ಅಧ್ಯಕ್ಷ ಬೈಡೆನ್ ಅವರ ಹಿರಿಯ ಸಲಹೆಗಾರರಾಗಿ ಮತ್ತು ಸಿಬ್ಬಂದಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೂರು ಅಧ್ಯಕ್ಷರೊಂದಿಗೆ ಕೆಲಸ ಮಾಡಿದ ಅನುಭವ!
“ಅವರು ಸಾರ್ವಜನಿಕ ನೀತಿಯಲ್ಲಿ 25 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಮೂವರು ಅಧ್ಯಕ್ಷರೊಂದಿಗೆ ಕೆಲಸ ಮಾಡಿದ್ದಾರೆ ಮತ್ತು ಸುಮಾರು ಒಂದು ದಶಕದಿಂದ ದೇಶದ ಅತಿದೊಡ್ಡ ಥಿಂಕ್ ಟ್ಯಾಂಕ್ (ಪ್ರಮುಖ ನೀತಿ ಮಂಡಳಿ) ಗಳಲ್ಲಿ ಒಂದನ್ನು ಮುನ್ನಡೆಸಿದ್ದಾರೆ” ಎಂದು ಬೈಡನ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಒಬಾಮಾ ಮತ್ತು ಕ್ಲಿಂಟನ್ ಆಡಳಿತದಲ್ಲಿ ಕೆಲಸ ಮಾಡಿರುವ ಅನುಭವ ಟಂಡನ್ ಅವರಿಗಿದೆ. ಇವಿಷ್ಟೇ ಅಲ್ಲದೆ, ಸೆಂಟರ್ ಫಾರ್ ಅಮೇರಿಕನ್ ಪ್ರೋಗ್ರೆಸ್ ಮತ್ತು ಸೆಂಟರ್ ಫಾರ್ ಅಮೇರಿಕನ್ ಪ್ರೋಗ್ರೆಸ್ ಆಕ್ಷನ್ ಫಂಡ್‌ನ ಅಧ್ಯಕ್ಷರು ಮತ್ತು ಸಿಇಒ ಕೂಡ ಆಗಿದ್ದರು.
ಒಬಾಮಾ-ಬೈಡೆನ್ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ನೀರಾ ಟಂಡನ್ ದೇಶೀಯ ನೀತಿಯ ನಿರ್ದೇಶಕರಾಗಿದ್ದರು. ಹಿಲರಿ ಕ್ಲಿಂಟನ್ ಅವರ ಅಧ್ಯಕ್ಷೀಯ ಪ್ರಚಾರದ ವೇಳೆ ನೀತಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಟಂಡನ್ ಅವರು ನ್ಯೂಯಾರ್ಕ್ ನಗರದ ಶಾಲೆಗಳ ಚಾನ್ಸೆಲರ್ ಗೆ ಹಿರಿಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಯುಸಿಎಲ್‌ಎಯಿಂದ ತಮ್ಮ ಬ್ಯಾಚುಲರ್ ಆಫ್ ಸೈನ್ಸ್ ಮತ್ತು ಯೇಲ್ ಲಾ ಸ್ಕೂಲ್‌ನಿಂದ ಜ್ಯೂರಿಸ್ ಡಾಕ್ಟರ್ ಪದವಿಯನ್ನು ಸಹ ಇವರು ಪಡೆದಿದ್ದಾರೆ.
ಇವರ ಜೊತೆಗೆ ಸ್ಟೆಫನಿ ಫೆಲ್ಡ್ ಮನ್ ಅವರು ಅಧ್ಯಕ್ಷ ಮತ್ತು ಸಿಬ್ಬಂದಿ ಕಾರ್ಯದರ್ಶಿಗೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಾರೆ ಎಂದು ಜೋ ಬೈಡನ್ ಘೋಷಿಸಿದರು. ಹೆಚ್ಚುವರಿಯಾಗಿ, ಝೈನ್ ಸಿದ್ದಿಕಿ ಅವರನ್ನು ದೇಶೀಯ ನೀತಿ ಮಂಡಳಿಯ ಪ್ರಧಾನ ಉಪನಾಯಕರಾಗಿ ಬಡ್ತಿ ಮಾಡಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.