ಕೆಜಿಎಫ್‌ ಹವಾ ದೇಶ ಮಾತ್ರವಲ್ಲದೆ, ವಿದೇಶಗಳಲ್ಲೂ ಹರಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಪುರಾವೆ ಎಂಬಂತೆ ಇದೀಗ ಪೋಲೆಂಡ್‌ನ ವಾರ್ಸಾದ ಕಿನೋಗ್ರಾಮ್‌ನಲ್ಲಿ ಲೋಕಾ ಫಿಲ್ಮ್ಸ್‌ಗೆ ಸಂಬಂಧಿಸಿದ ಯುನೈಟೆಡ್ ಫಿಲ್ಮ್ಸ್ ಯುರೋಪಾದಿಂದ ಮೊದಲ ಬಾರಿಗೆ ಭವ್ಯವಾದ ಟಿಕೆಟ್ ಬಿಡುಗಡೆ ಕಾರ್ಯಕ್ರಮವನ್ನು ನಡೆಸಲಾಗಿದೆ. ಇದು ಪೋಲೆಂಡ್‌ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಡೆದ ಭವ್ಯವಾದ ಕಾರ್ಯಕ್ರಮ ಎಂಬುದು ವಿಶೇಷ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಈ ಕಾರಣಕ್ಕಾಗಿ ಕನ್ನಡಕ್ಕಿಂತಲೂ ತೆಲುಗಿನಲ್ಲಿ ಹೆಚ್ಚಿದ ಕೆಜಿಎಫ್‌-2 ಕ್ರೇಜ್...!


ಕೆಜಿಎಫ್ ಚಾಪ್ಟರ್‌ 2 ಸಿನಿಮಾದ ಟಿಕೆಟ್ ಬುಕಿಂಗ್‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅತೀ ಹೆಚ್ಚು ಟಿಕೆಟ್‌ ಮಾರಾಟವಾಗಿ ದಾಖಲೆ ಬರೆದಿತ್ತು. ಇದೀಗ ಪೋಲೆಂಡ್‌ನಲ್ಲಿಯೂ ಕೆಜಿಎಫ್‌ ಹವಾ ಶುರುವಾಗಿದ್ದು, ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿ ಟಿಕೆಟ್‌ ಬಿಡುಗಡೆ ಮಾಡಲಾಗಿದೆ. 


ಇಂಡೋ ಪೋಲಿಷ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯ ನಿರ್ದೇಶಕ ಚಂದ್ರಮೋಹನ್ ನಲ್ಲೂರ್ ಅವರ ಉಪಸ್ಥಿತಿಯಲ್ಲಿ ಕಿನೋಗ್ರಾಮ್ ವಾರ್ಸಾದ ವ್ಯವಸ್ಥಾಪಕ ನಿರ್ದೇಶಕ ಆನ್ನಾ ಅವರು ಮೊದಲ ಟಿಕೆಟ್‌ ಖರೀದಿಯನ್ನು ಮಾಡಿದ್ದಾರೆ. 


ವರ್ಲ್ಡ್‌ ಕ್ಲಾಸ್‌ ಸಿನಿಮಾ ಎಂದ ಸೆನ್ಸಾರ್‌ ಮಂಡಳಿ: 
ʼಕೆಜಿಎಫ್-2' ಅನ್ನೋ ಹೆಸರಲ್ಲೇ ಸಂಚಲನ ಇದೆ. 'ಕೆಜಿಎಫ್-2' ಹೆಸರಲ್ಲೇ ಹೈವೋಲ್ಟೇಜ್‌ ಕರೆಂಟ್‌ ಇದೆ. 'ಕೆಜಿಎಫ್-2' ಅಂದ್ರೆನೆ ಹಾಗೆ, ಕನ್ನಡ ಸಿನಿ ರಂಗವನ್ನು ಇಡೀ ಜಗತ್ತೇ ಒಮ್ಮೆ ತಿರುಗಿ ನೋಡುವಂತೆ ಮಾಡಿರುವ ಈ ಸಿನಿಮಾ ಜಾಗತಿಕ ಸಿನಿಮಾ ಮಾರುಕಟ್ಟೆಯನ್ನೇ ನಡುಗಿಸಿದೆ. ಇನ್ನು ಓವರ್‌ಸೀಸ್ ಸೆನ್ಸಾರ್ ಬೋರ್ಡ್‌ನ ಸದಸ್ಯರಾದ ಉಮೈರ್ ಸಾಂಧು, 'ಕೆಜಿಎಫ್-2' ವೀಕ್ಷಿಸಿ ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 'ಕೆಜಿಎಫ್-2' ಸಿನಿಮಾಗೆ 5ಕ್ಕೆ 5 ರೇಟಿಂಗ್‌ ನೀಡಿದ್ದಾರೆ. ಅಲ್ಲದೆ ಈ ಸಿನಿಮಾ ಭಾರತ ಚಿತ್ರರಂಗದ ಕಿರೀಟ ಎಂದು ಬರೆದುಕೊಂಡಿದ್ದಾರೆ. 


ಇದನ್ನು ಓದಿ: ಮತ್ತೆ ಮುಂದೂಡಿಕೆಯಾದ ʼಜರ್ಸಿʼ ಸಿನಿಮಾ ರಿಲೀಸ್‌ ಡೇಟ್‌: ಕಾರಣ ಏನು ಗೊತ್ತಾ?


ಇದು ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸುವ ಜೊತೆಗೆ, 'ಕೆಜಿಎಫ್-2' ಕೇಜ್‌ ಮತ್ತಷ್ಟು ಹೆಚ್ಚಾಗಿದೆ. ಯಾವಾಗ ಸಿನಿಮಾ ಕಣ್ತುಂಬಿಕೊಳ್ಳುತ್ತೀವಿ ಅಂತಾ 'ಕೆಜಿಎಫ್-2' ಅಭಿಮಾನಿ ಬಳಗ ಕಾಯುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ..